ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG ದ್ವಿತೀಯ ಏಕದಿನ ಪಂದ್ಯ: ಈ ಮೈಲಿಗಲ್ಲುಗಳ ಮೇಲೆ ರೋಹಿತ್, ಪಾಂಡ್ಯ ಮತ್ತು ರೂಟ್ ಕಣ್ಣು

IND vs ENG 2nd ODI stats preview: Players records and approaching milestones

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಸದ್ಯ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ನಿನ್ನೆಯಷ್ಟೇ (ಜುಲೈ 12) ಇತ್ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!

ಹೌದು, ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಇಂಗ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅತ್ತ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಟೀಮ್ ಇಂಡಿಯಾದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ( 6 ವಿಕೆಟ್ ) ಮತ್ತು ಮೊಹಮ್ಮದ್ ಶಮಿ ( 3 ವಿಕೆಟ್ ) ಬೌಲಿಂಗ್ ದಾಳಿಯ ವಿರುದ್ಧ ಕುಸಿದು 25.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 110 ರನ್ ಕಲೆಹಾಕಿ ಟೀಮ್ ಇಂಡಿಯಾಗೆ 111 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೇ 18.4 ಓವರ್‌ಗಳಲ್ಲಿ 114 ರನ್ ಕಲೆಹಾಕಿ ಭರ್ಜರಿ ಜಯ ಸಾಧಿಸಿತು. ರೋಹಿತ್ ಶರ್ಮಾ ಅಜೇಯ 76 ಮತ್ತು ಶಿಖರ್ ಧವನ್ ಅಜೇಯ 31 ರನ್ ಕಲೆಹಾಕಿ ಮಿಂಚಿದರು.

IND vs ENG 2ನೇ ಏಕದಿನ ಪಂದ್ಯ: ಲಾರ್ಡ್ಸ್ ಪಿಚ್ ವರದಿ, ಹವಾಮಾನ ವರದಿ ಮತ್ತು ಬೌಂಡರಿ ಲೆಂತ್ ಮಾಹಿತಿIND vs ENG 2ನೇ ಏಕದಿನ ಪಂದ್ಯ: ಲಾರ್ಡ್ಸ್ ಪಿಚ್ ವರದಿ, ಹವಾಮಾನ ವರದಿ ಮತ್ತು ಬೌಂಡರಿ ಲೆಂತ್ ಮಾಹಿತಿ

ಹೀಗೆ ಪ್ರಥಮ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಇಂಗ್ಲೆಂಡ್ ಇದೀಗ ಜುಲೈ 14ರ ಗುರುವಾರದಂದು ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸಿ ಸೋಲಿನ ಮುಖಭಂಗದಿಂದ ಪಾರಾಗುವ ತವಕದಲ್ಲಿದೆ. ಮತ್ತೊಂದೆಡೆ ಈ ಪಂದ್ಯ ಇತ್ತಂಡಗಳ ನಡುವಿನ ಹಲವು ಆಟಗಾರರು ವಿವಿಧ ಮೈಲಿಗಲ್ಲುಗಳನ್ನು ಮುಟ್ಟುವುದಕ್ಕೆ ಸಾಕ್ಷಿಯಾಗಲಿದ್ದು, ಅವುಗಳ ಕುರಿತಾದ ವಿವರ ಕೆಳಕಂಡಂತಿದೆ.

ಈ ಮೈಲಿಗಲ್ಲುಗಳ ಮೇಲೆ ರೋಹಿತ್ ಶರ್ಮಾ ಮತ್ತು ಪಾಂಡ್ಯ ಕಣ್ಣು

ಈ ಮೈಲಿಗಲ್ಲುಗಳ ಮೇಲೆ ರೋಹಿತ್ ಶರ್ಮಾ ಮತ್ತು ಪಾಂಡ್ಯ ಕಣ್ಣು

• ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ 1490 ಬೌಂಡರಿಗಳನ್ನು ( ಫೋರ್ಸ್ ) ಬಾರಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇನ್ನೂ 10 ಬೌಂಡರಿಗಳನ್ನು ಬಾರಿಸಿದರೆ 1500 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 93 ಬೌಂಡರಿಗಳನ್ನು ( ಫೋರ್ಸ್ ) ಬಾರಿಸಿರುವ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 7 ಬೌಂಡರಿಗಳನ್ನು ಬಾರಿಸಿದರೆ 100 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಸಿಕ್ಸರ್ ಮೈಲಿಗಲ್ಲುಗಳ ಮೇಲೆ ಜಡೇಜಾ ಮತ್ತು ಬಟ್ಲರ್ ಕಣ್ಣು

ಸಿಕ್ಸರ್ ಮೈಲಿಗಲ್ಲುಗಳ ಮೇಲೆ ಜಡೇಜಾ ಮತ್ತು ಬಟ್ಲರ್ ಕಣ್ಣು

• 144 ಅಂತರರಾಷ್ಟ್ರೀಯ ಏಕದಿನ ಸಿಕ್ಸರ್ ಬಾರಿಸಿರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಈ ಪಂದ್ಯದಲ್ಲಿ 6 ಸಿಕ್ಸರ್ ಬಾರಿಸಿದರೆ 150 ಸಿಕ್ಸರ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಯಲ್ಲಿ 49 ಸಿಕ್ಸರ್ ಬಾರಿಸಿರುವ ಟೀಮ್ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 1 ಸಿಕ್ಸರ್ ಬಾರಿಸಿದರೆ 50 ಅಂತರರಾಷ್ಟ್ರೀಯ ಸಿಕ್ಸರ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಸಿದ್ದರಾಮೋತ್ಸವ ಮತ್ತು ಶಿವಕುಮಾರೋತ್ಸವದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? | *Politics | OneIndia
ಜೋ ರೂಟ್ ಈ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆ

ಜೋ ರೂಟ್ ಈ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆ

• ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಜೋ ರೂಟ್ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ 17460 ರನ್ ಬಾರಿಸಿದ್ದು, ಈ ಪಂದ್ಯದಲ್ಲಿ 40 ರನ್ ಬಾರಿಸಿದರೆ 17500 ರನ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

• ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 491 ಬೌಂಡರಿಗಳನ್ನು ( ಫೋರ್ಸ್ ) ಬಾರಿಸಿರುವ ಜೋ ರೂಟ್ ಈ ಪಂದ್ಯದಲ್ಲಿ 9 ಬೌಂಡರಿ ಬಾರಿಸಿದರೆ 500 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

Story first published: Wednesday, July 13, 2022, 20:42 [IST]
Other articles published on Jul 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X