ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!

Title: Ind vs Eng 2nd test: England Captain Joe Root Reaction after defeating to India

ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ 2021ರ ವೇಳಾಪಟ್ಟಿ ಪ್ರಕಟ; ಭಾರತ vs ಪಾಕ್ ಪಂದ್ಯ ಯಾವಾಗ ಗೊತ್ತಾ?ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ 2021ರ ವೇಳಾಪಟ್ಟಿ ಪ್ರಕಟ; ಭಾರತ vs ಪಾಕ್ ಪಂದ್ಯ ಯಾವಾಗ ಗೊತ್ತಾ?

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸುಲಭವಾಗಿ ಜಯ ಸಾಧಿಸಲಿದೆ ಎಂದೇ ಐದನೇ ದಿನದ ಆರಂಭದವರೆಗೂ ಹೇಳಲಾಗುತ್ತಿತ್ತು. ಆದರೆ ಟೀಮ್ ಇಂಡಿಯಾದ ಬೌಲರ್‌ಗಳಾದ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಸಂಕಷ್ಟದಲ್ಲಿದ್ದಾಗ ನೀಡಿದ 89 ರನ್‌ಗಳ ಜತೆಯಾಟ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತು. ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‍ಗಳನ್ನು ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿದ್ದಾಗ ಜೊತೆಯಾದ ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬೂಮ್ರಾ 89 ರನ್‌ಗಳ ಜತೆಯಾಟದ ಮೂಲಕ ತಂಡದ ಮೊತ್ತವನ್ನು 298ಕ್ಕೆ ಮುಟ್ಟಿಸಿದರು. ಹೀಗೆ ಬುಮ್ರಾ ಮತ್ತು ಮೊಹಮ್ಮದ್ ಶಮಿ ಜತೆಯಾಟದಿಂದ ಇಂಗ್ಲೆಂಡ್ ಕೈನಲ್ಲಿದ್ದ ಪಂದ್ಯ ಭಾರತ ತಂಡ ಡಿಕ್ಲೇರ್ ಮಾಡುವ ವೇಳೆಗೆ ಡ್ರಾನತ್ತ ಮುಖ ಮಾಡಿದೆ ಎಂದೇ ಎಲ್ಲರೂ ಮಾತನಾಡಲಾರಂಭಿಸಿದರು.

ಸಚಿನ್, ಕೊಹ್ಲಿ, ಪಾಂಟಿಂಗ್, ಎಬಿಡಿ; ಯಾರೂ ಮಾಡಿರದ ಸಾಧನೆ ಮಾಡಿದ ಮೊಹಮ್ಮದ್ ಶಮಿ!ಸಚಿನ್, ಕೊಹ್ಲಿ, ಪಾಂಟಿಂಗ್, ಎಬಿಡಿ; ಯಾರೂ ಮಾಡಿರದ ಸಾಧನೆ ಮಾಡಿದ ಮೊಹಮ್ಮದ್ ಶಮಿ!

ಹೌದು ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 298 ರನ್ ಕಲೆಹಾಕಿದ ಟೀಮ್ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿತು, ಹೀಗಾಗಿ ಇಂಗ್ಲೆಂಡ್ ತಂಡ ಜಯ ಸಾಧಿಸಲು 272 ರನ್‌ಗಳನ್ನು ಬೆನ್ನತ್ತಬೇಕಾದ ಪರಿಸ್ಥಿತಿ ಇತ್ತು. ಮೊದಲನೇ ಇನ್ನಿಂಗ್ಸ್‌ನಲ್ಲಿ 391 ರನ್ ಬಾರಿಸಿದ್ದ ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಆಡುವುದರಿಂದ ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದೇ ಎಣಿಸಲಾಗಿತ್ತು. ಆದರೆ ಭಾರತದ ಬೌಲರ್‌ಗಳ ದಾಳಿಗೆ ಊಹೆಗಳೆಲ್ಲ ತಪ್ಪಾಗಿ ಇಂಗ್ಲೆಂಡ್ ತಂಡವನ್ನು 120 ರನ್‌ಗಳಿಗೆ ಆಲ್ಔಟ್ ಮಾಡುವುದರ ಮೂಲಕ ಟೀಮ್ ಇಂಡಿಯಾ 151 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿತು. ಹೀಗೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯ ಸೋತ ನಂತರ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪಂದ್ಯದ ಕುರಿತು ಮಾತನಾಡಿದ್ದಾರೆ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಸಹ ತಮ್ಮ ಅಭಿಪ್ರಾಯವನ್ನು ಈ ಕೆಳಕಂಡಂತೆ ವ್ಯಕ್ತಪಡಿಸಿದ್ದಾರೆ.

ಭಾರತದ ರೀತಿ ಇರಲು ಪ್ರಯತ್ನಿಸುತ್ತಿದ್ದೇವೆ ಎಂದ ಜೋ ರೂಟ್

ಭಾರತದ ರೀತಿ ಇರಲು ಪ್ರಯತ್ನಿಸುತ್ತಿದ್ದೇವೆ ಎಂದ ಜೋ ರೂಟ್

ಟೀಮ್ ಇಂಡಿಯಾ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಮಾತನಾಡಿದ ಜೋ ರೂಟ್ ವಿರಾಟ್ ಕೊಹ್ಲಿ ನಾಯಕತ್ವದ ಶೈಲಿ ವಿಭಿನ್ನವಾಗಿದೆ, ವಿರಾಟ್ ಕೊಹ್ಲಿ ಮುನ್ನಡೆಸುತ್ತಿರುವ ಟೀಮ್ ಇಂಡಿಯಾ ಹೆಚ್ಚು ದಿನಗಳ ಕಾಲ ಉತ್ತಮ ಪ್ರದರ್ಶನ ನೀಡುವಂತ ತಂಡವಾಗಿದೆ. ನಾವು ಕೂಡ ಟೀಮ್ ಇಂಡಿಯಾ ರೀತಿ ಉತ್ತಮ ಟೆಸ್ಟ್ ತಂಡವಾಗಿ ಇರಲು ಪ್ರಯತ್ನಿಸುತ್ತಿದ್ದೇವೆ ಎಂದು ಜೋ ರೂಟ್ ಹೇಳಿದರು.ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಹಾಗೂ ತಮ್ಮ ತಂಡಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು, ಮುಂದಿನ ದಿನಗಳಲ್ಲಿ ಭಾರತ ತಂಡದಂತೆ ಉತ್ತಮ ಟೆಸ್ಟ್ ತಂಡವಾಗಿ ಬದಲಾಗುವ ಕುರಿತು ಜೋ ರೂಟ್ ಮಾತನಾಡಿದರು.

ಇನ್ನೂ ಸಮಯ ಮೀರಿಲ್ಲ, ನಮಗೂ ಅವಕಾಶವಿದೆ ಎಂದ ರೂಟ್

ಇನ್ನೂ ಸಮಯ ಮೀರಿಲ್ಲ, ನಮಗೂ ಅವಕಾಶವಿದೆ ಎಂದ ರೂಟ್


ಇನ್ನೂ ಮುಂದುವರೆದು ಮಾತನಾಡಿರುವ ಜೋ ರೂಟ್ ಮುಂದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ 2 ಪಂದ್ಯಗಳು ಬಾಕಿಯಿದ್ದು ಆ ಪಂದ್ಯಗಳಲ್ಲಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಜೋ ರೂಟ್ ವಿಶ್ವಾಸವನ್ನು ಹೊಂದಿದ್ದಾರೆ.

ಅಜೇಯ 180 ರನ್ ಬಾರಿಸಿ ಮಿಂಚಿದ ಜೋ ರೂಟ್

ಅಜೇಯ 180 ರನ್ ಬಾರಿಸಿ ಮಿಂಚಿದ ಜೋ ರೂಟ್

ಭಾರತ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ 33 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ ಜೋ ರೂಟ್ ಮೊದಲನೇ ಇನ್ನಿಂಗ್ಸ್‌ನಲ್ಲಿ ಅಜೇಯ 180 ರನ್ ಗಳಿಸುವುದರ ಮೂಲಕ ಅಬ್ಬರಿಸಿದ್ದರು. ಇಂಗ್ಲೆಂಡ್ ತಂಡ ಸಂಕಷ್ಟದಲ್ಲಿದ್ದಾಗ ಭರ್ಜರಿ ಪ್ರದರ್ಶನ ನೀಡಿದ ಜೋ ರೂಟ್ ತಂಡಕ್ಕೆ ಆಪತ್ಬಾಂಧವನಾಗಿ ಮಿಂಚಿದ್ದರು.

Story first published: Wednesday, August 18, 2021, 6:54 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X