ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!

Ind vs Eng: 3 players from Karnataka hits test century in Historical Lords

ವಿಶ್ವ ಕ್ರಿಕೆಟ್‌ನಲ್ಲಿ ಲಂಡನ್‌ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೇ ವಿಶೇಷ ಗೌರವದ ಸ್ಥಾನವನ್ನು ನೀಡಲಾಗಿದೆ. ಶತಮಾನಗಳ ಇತಿಹಾಸವನ್ನು ಹೊಂದಿರುವ ಈ ಮೈದಾನದಲ್ಲಿ ಒಮ್ಮೆಯಾದರೂ ಆಡಬೇಕೆಂಬುದು ಬಹುತೇಕ ಕ್ರಿಕೆಟಿಗರ ಬಯಕೆ. ಇನ್ನು ಬ್ಯಾಟ್ಸ್‌ಮನ್‌ಗಳಿಗೆ ಈ ಮೈದಾನದಲ್ಲಿ ಶತಕವನ್ನು ಬಾರಿಸುವ ಕನಸು ಹೊಂದಿದ್ದರೆ ಬೌಲರ್‌ಗಳು ಐದು ವಿಕೆಟ್‌ಗಳ ಗೊಂಚಲು ಪಡೆದು ಮಿಂಚಬೇಕೆಂದು ಹಂಬಲಿಸುತ್ತಿರುತ್ತಾರೆ. ಲಾರ್ಡ್ಸ್ ಅಂಗಳದ ಇತಿಹಾಸ ಹಾಗೂ ಘನತೆಯೇ ಇವೆಲ್ಲದಕ್ಕೂ ಕಾರಣ.

ಇಂಥಾ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಕನಸನ್ನು ಸಾಕಷ್ಟು ಭಾರತದ ಪರವಾಗಿ 10 ಆಟಗಾರರು ನನಸು ಮಾಡಿಕೊಂಡಿದ್ದಾರೆ. 1952ರಲ್ಲಿ ವಿನೂ ಮಂಕಡ್ ಭಾರತದ ಪರವಾಗಿ ಲಾರ್ಡ್ಸ ಅಂಗಳದಲ್ಲಿ ಶತಕವನ್ನು ಗಳಿಸಿದ ಮೊದಲ ಭಾರತೀಯ ಆಟಗಾರನಾಗಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಮೂರು ಶತಕವನ್ನು ಗಳಿಸಿದ ವಿಶೇಷ ಸಾಧನೆ ಮಾಡಿದ್ದಾರೆ.

ಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟಭಾರತ vs ಇಂಗ್ಲೆಂಡ್, ದ್ವಿತೀಯ ಟೆಸ್ಟ್‌: ಕೆಎಲ್ ರಾಹುಲ್ ಶತಕದಾಟ

ಇನ್ನು ಲಾರ್ಡ್ಸ್ ಕ್ರೀಡಾಂಗಣದಲ್ಲಿನ ಭಾರತೀಯ ಆಟಗಾರರ ಸಾಧನೆಯಲ್ಲಿ ಕನ್ನಡಿಗರು ಕೂಡ ಹೆಮ್ಮೆ ಪಡುವಂತಾ ಅಂಕಿಅಂಶಗಳು ಇವೆ. ಲಾರ್ಡ್ಸ ಅಂಗಳದಲ್ಲಿ ಶತಕ ಗಳಿಸಿದ ಹತ್ತು ಆಟಗಾರರ ಪೈಕಿ ಮೂವರು ಕನ್ನಡಿಗ ದಾಂಡಿಗರಾಗಿದ್ದಾರೆ. ಈ ಮೂಲಕ ಐತಿಹಾಸಿಕ ಅಂಗಳದಲ್ಲಿಯೂ ಕನ್ನಡಿಗ ಬ್ಯಾಟ್ಸ್‌ಮನ್‌ಗಳು ಹೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾರೆ. ಹಾಗಾದರೆ ಯಾರೆಲ್ಲಾ ಈ ವಿಶೇಷ ಸಾಧನೆ ಮಾಡಿದ ಕನ್ನಡಿಗ ಆಟಗಾರರು ಮುಂದೆ ಓದಿ..

ಜಿಆರ್ ವಿಶ್ವನಾಥ್ 113ರನ್, 1979

ಜಿಆರ್ ವಿಶ್ವನಾಥ್ 113ರನ್, 1979

1979ರ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿತ್ತು. ಈ ಪಂದ್ಯದಲ್ಲಿ ಭಾರತದ ಪರವಾಗಿ ಇಬ್ಬರು ಆಟಗಾರರು ಶತಕವನ್ನು ಸಿಡಿಸಿ ಮಿಂಚಿದ್ದಾರೆ. ದಿಲೀಪ್ ವೆಂಗ್‌ಸರ್ಕಾರ್ ಹಾಗೂ ಕನ್ನಡಿಗ ಜಿಆರ್ ವಿಶ್ವನಾಥ್. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಸಾಹಸದಿಂದಾಗಿ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಲು ಇಳಿದಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 96 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 419 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯವನ್ನು ಭಾರತ ಸೋಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಮೂರನೇ ವಿಕೆಟ್‌ಗೆ ಜೊತೆಯಾದ ದಿಲೀಪ್ ವೆಂಗ್‌ಸರ್ಕಾರ್ ಹಾಗೂ ಜಿಆರ್ ವಿಶ್ವನಾಥ್ ಪಂದ್ಯವನ್ನು ಸೋಲಿನ ದವಡೆಯಿಂದ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ ಜಿಆರ್ ವಿಶ್ವನಾಥ್ 337 ಎಸೆತಗಳನ್ನು ಎದುರಿಸಿ 113 ರನ್‌ಗಳನ್ನು ಬಾರಿಸಿದ್ದರು. 318/4 ರನ್‌ಗಳನ್ನು ಬಾರಿಸುವ ಮೂಲಕ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ರಾಹುಲ್ ದ್ರಾವಿಡ್, 103*, 2011

ರಾಹುಲ್ ದ್ರಾವಿಡ್, 103*, 2011

ಭಾರತ ಹಾಗೂ ಇಂಗ್ಲೆಂಡ್ ನಡುವೆ 2011ರ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ ಶತಕವನ್ನು ಬಾರಿಸುವ ಮೂಲಕ ಲಾರ್ಡ್ಸ್ ಅಂಗಳದಲ್ಲಿ ಶತಕವನ್ನು ಬಾರಿಸಿದ ಎರಡನೇ ಕನ್ನಡಿಗ ಎನಿಸಿದರು. ಈ ಪಂದ್ಯದಲ್ಲಿ ಇಂಗ್ಲಂಡ್ ತಂಡದ ಅನುಭವಿ ಆಟಗಾರ ಕೆವಿನ್ ಪೀಟರ್ಸನ್ ದ್ವಿಶತಕವನ್ನು ಬಾರಿಸಿ ಮಿಂಚಿದ್ದರು. ಇದರ ಪರಿಣಾಮವಾಗಿ ಇಂಗ್ಲೆಂಡ್ 474 ರನ್‌ಗಳನ್ನು ಬಾರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್ ಗಳಿಸಿದ ಈ ಬೃಹತ್ ರನ್‌ಗಳ ಬಳಿಕ ಮೊದಲ ಇನ್ನಿಂಗ್ಸ್ ಆಡಲಿಳಿದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಮಾತ್ರವೇ ಆಸರೆಯಾಗಿದ್ದರು. 220 ಎಸೆತಗಳನ್ನು ಎದುರಿಸಿದ ರಾಹುಲ್ ದ್ರಾವಿಡ್ 103 ರನ್‌ಗಳ ಕೊಡುಗೆಯನ್ನು ನೀಡಿದರು. ಇನ್ನೊಂದು ತುದಿಯಲ್ಲಿ ದ್ರಾವಿಡ್‌ಗೆ ಯಾವುದೇ ಬೆಂಬಲ ದೊರೆಯದ ಕಾರಣ ದ್ರಾವಿಡ್ ಅಜೇಯವಾಗಿಳಿದರು. ಭಾರತ ಕೇವಲ 286 ರನ್‌ಗಳಿಗೆ ಆಲೌಟ್ ಆಗಿತ್ತು.

ಇನ್ನು ಈ ಪಂದ್ಯದಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಇಂಗ್ಲೆಂಡ್ ತಂಡದ ಅಬ್ಬರ ಮುಂದುವರಿದಿತ್ತು. ಇಂಗ್ಲೆಂಡ್ ತಂಡದ ಪರವಾಗಿ ಮ್ಯಾಟ್ ಪ್ರಿಯರ್ ಎರಡನೇ ಇನ್ನಂಗ್ಸ್‌ನಲ್ಲಿ ಶತಕವನ್ನು ಗಳಿಸಿದ್ದರು. ಇದರ ಪರಿಣಾಮವಾಗಿ 269 ರನ್‌ಗಳನ್ನು ಗಳಿಸಿ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ ತಂಡಕ್ಕೆ ಅಂತಿಮ ಇನ್ನಿಂಗ್ಸ್‌ನಲ್ಲಿ 458 ರನ್‌ಗಳನ್ನು ಗಳಿಸುವ ಗುರಿಯಿತ್ತು. ಆದರೆ ಈ ಬೃಹತ್ ಗುರಿಯನ್ನು ತಲುಪಲಿ ಭಾರತ ವಿಫಲವಾಗಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಭಾರತದ ಪರವಾಗಿ ಯಾವ ಬ್ಯಾಟ್ಸ್‌ಮನ್ ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲವಾದರು. ಇದರ ಪರಿಣಾಮವಾಗಿ ಭಾರತ ಈ ಪಂದ್ಯದಲ್ಲಿ 196 ರನ್‌ಗಳ ಅಂತರದಿಂದ ಸೋಲು ಕಂಡಿತ್ತು.

ಕೆಎಲ್ ರಾಹುಲ್, 2021

ಕೆಎಲ್ ರಾಹುಲ್, 2021

ಈಗ ಲಾರ್ಡ್ಸ್ ಅಂಗಳದಲ್ಲಿ ಭಾರತ ಮತ್ತೊಮ್ಮೆ ಕಣಕ್ಕಿಳಿದಿದೆ. ಈ ಬಾರಿಯ ಸರಣಿಯ ಟ್ರೆಂಟ್‌ ಬ್ರಿಡ್ಜ್‌ನ ಆರಂಭಿಕ ಪಂದ್ಯಕ್ಕೂ ಮುನ್ನ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದಿದ್ದ ಕಾರಣದಿಂದಾಗಿ ಕನ್ಕೂಶನ್‌ಗೆ ಒಳಗಾಗಿದ್ದರು. ಹೀಗಾಗಿ ಕೆಎಲ್ ರಾಹುಲ್ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದು ಮಿಂಚಿದ್ದರು. ಹೀಗಾಗಿ ರಾಹುಲ್‌ಗೆ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿಯೂ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶವನ್ನು ನೀಡಲಾಯಿತು. ಈ ಅವಕಾಶವನ್ನು ಕೆಎಲ್ ರಾಹುಲ್ ಮತ್ತೊಮ್ಮೆ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ.

ಲಾರ್ಡ್ಸ್ ಅಂಗಳದಲ್ಲಿ ಕೆಎಲ್ ರಾಹುಲ್ ಶತಕವನ್ನು ಬಾರಿಸಿ ಕನಸು ನನಸು ಮಾಡಿಕೊಂಡಿದ್ದಾರೆ. ಮೊದಲ ದಿನದಾಟದಲ್ಲಿ ಕೆಎಲ್ ರಾಹುಲ್ ಅಜೇಯವಾಗುಳಿದಿದ್ದು 127 ರನ್‌ಗಳನ್ನು ಬಾರಿಸಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 248 ಎಸೆತಗಳನ್ನು ಎದುರಿಸಿರುವ ಅವರು 12 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದಾರೆ.

ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರಿ ಬೇಡಿಕೆ | Oneindia Kannada
ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಈವರೆಗೆ ಭಾರತದ ಒಟ್ಟು 10 ಆಟಗಾರರು ಶತಕವನ್ನು ಬಾರಿಸಿದ್ದಾರೆ. ಆ ಎಲ್ಲಾ ಆಟಗಾರರ ಪಟ್ಟಿ ಇಲ್ಲಿದೆ.
ವಿನೂ ಮಂಕಡ್- 1952
ದಿಲೀಪ್ ವೆಂಗ್‌ಸರ್ಕಾರ್- 1979, 1982, 1986
ಜಿಆರ್ ವಿಶ್ವನಾಥ್- 1979
ರವಿ ಶಾಸ್ತ್ರಿ- 1990
ಮೊಹಮ್ಮದ್ ಅಜರುದ್ದೀನ್- 1990
ಸೌರವ್ ಗಂಗೂಲಿ- 1996
ಅಜಿತ್ ಅಗರ್ಕರ್- 2002
ರಾಹುಲ್ ದ್ರಾವಿಡ್- 2011
ಅಜಿಂಕ್ಯ ರಹಾನೆ- 2014
ಕೆಎಲ್ ರಾಹುಲ್- 2021

Story first published: Friday, August 13, 2021, 20:44 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X