IND vs ENG 5ನೇ ಟೆಸ್ಟ್: ನೀವು ಆತಂಕದಲ್ಲಿದ್ದೀರಾ?; ವಾಸಿಂ ಜಾಫರ್ ಕಾಲೆಳೆದ ಮೈಕಲ್ ವಾನ್

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ ಅಂಗಳದಲ್ಲಿ ಮರುನಿಗದಿಪಡಿಸಲಾದ 5ನೇ ಟೆಸ್ಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆರಂಭಿಕರಾದ ಅಲೆಕ್ಸ್ ಲೀಸ್ ಮತ್ತು ಝಾಕ್ ಕ್ರಾಲಿ ತಮ್ಮ 378 ರನ್‌ಗಳ ಬೆನ್ನಟ್ಟುವಲ್ಲಿ ಕ್ಷಿಪ್ರ ಆರಂಭವನ್ನು ಪಡೆದಿದ್ದರಿಂದ ಭಾರತವು ಆರಂಭದಲ್ಲಿ ಆರಂಭದಲ್ಲಿ ಒತ್ತಡಕ್ಕೆ ಸಿಲುಕಿತು. ಇಂಗ್ಲೆಂಡ್‌ನ ಆರಂಭಿಕರು ಕೇವಲ 19.5ರಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದ್ದರು.

IND vs ENG 5ನೇ ಟೆಸ್ಟ್: ಕೊನೆಯ ಎರಡು ದಿನ ಈ ಆಟಗಾರ ನಿರ್ಣಾಯಕವಾಗಲಿದ್ದಾರೆ ಎಂದ ರವಿಶಾಸ್ತ್ರಿIND vs ENG 5ನೇ ಟೆಸ್ಟ್: ಕೊನೆಯ ಎರಡು ದಿನ ಈ ಆಟಗಾರ ನಿರ್ಣಾಯಕವಾಗಲಿದ್ದಾರೆ ಎಂದ ರವಿಶಾಸ್ತ್ರಿ

ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಕೇವಲ ಎರಡು ತಂಡಗಳು ಇಂಗ್ಲೆಂಡ್‌ನಲ್ಲಿ 350ಕ್ಕಿಂತ ಹೆಚ್ಚು ರನ್ ಬೆನ್ನಟ್ಟಿವೆ. 1948ರಲ್ಲಿ ಆಸ್ಟ್ರೇಲಿಯಾದಿಂದ 404/3 ಮತ್ತು 2019ರಲ್ಲಿ ಲೀಡ್ಸ್‌ನಲ್ಲಿ ಇಂಗ್ಲೆಂಡ್‌ನಿಂದ 362/9. ಆದಾಗ್ಯೂ 4ನೇ ದಿನದ ಊಟದ ನಂತರದ ಅವಧಿಯಲ್ಲಿ ಇಂಗ್ಲೆಂಡ್ ತನ್ನ 378 ರನ್‌ಗಳ ಬೆನ್ನಟ್ಟುವಿಕೆಯನ್ನು ಭಾರತೀಯ ವೇಗಿಗಳೊಂದಿಗೆ ಅದ್ಭುತವಾಗಿ ಪ್ರಾರಂಭಿಸಿತು. ಈವರೆಗೆ ಇಂಗ್ಲೆಂಡ್ ತಂಡ ಮೂರು ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲ್ಲಲು ಇನ್ನೂ 242 ರನ್‌ಗಳ ಅವಶ್ಯಕತೆ ಇದೆ.

ನ್ಯೂಜಿಲೆಂಡ್ ವಿರುದ್ಧ 3-0 ಕ್ಲೀನ್‌ಸ್ವೀಪ್

ನ್ಯೂಜಿಲೆಂಡ್ ವಿರುದ್ಧ 3-0 ಕ್ಲೀನ್‌ಸ್ವೀಪ್

ಕಳೆದ ತಿಂಗಳು ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಮಯದಲ್ಲಿ ಇಂಗ್ಲೆಂಡ್ ಮೂರು ಬಾರಿ 250 ರನ್‌ಗಳಿಗಿಂತ ಹೆಚ್ಚು ರನ್ ಬೆನ್ನಟ್ಟಿ ಗೆದ್ದ ನಂತರ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ. ಮೊದಲ ಟೆಸ್ಟ್‌ನಲ್ಲಿ 78.5 ಓವರ್‌ಗಳಲ್ಲಿ 279, 2ನೇ ಟೆಸ್ಟ್‌ನಲ್ಲಿ ಕೇವಲ 50 ಓವರ್‌ಗಳಲ್ಲಿ 299 ಮತ್ತು 3ನೇ ಟೆಸ್ಟ್‌ನಲ್ಲಿ ಕೇವಲ 54.2 ಓವರ್‌ಗಳಲ್ಲಿ 296 ರನ್ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್, ನೂತನ ನಾಯಕ ಬೆನ್ ಸ್ಟೋಕ್ಸ್ ಮತ್ತು ಹೊಸ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರ 'ಆಕ್ರಮಣಕಾರಿ' ವಿಧಾನವನ್ನು ಪ್ರದರ್ಶಿಸಿದರು.

ಇಂಗ್ಲೆಂಡ್ vs ಭಾರತ, 5ನೇ ಟೆಸ್ಟ್ ದಿನದ ಅಂಶಗಳು

ಇಂಗ್ಲೆಂಡ್ vs ಭಾರತ, 5ನೇ ಟೆಸ್ಟ್ ದಿನದ ಅಂಶಗಳು

ಮೊದಲ ಇನ್ನಿಂಗ್ಸ್‌ನಲ್ಲಿ ಪ್ರತಿದಾಳಿ ಶತಕ ಬಾರಿಸಿದ ಜಾನಿ ಬೈರ್‌ಸ್ಟೋವ್, ಇನ್ ಫಾರ್ಮ್ ಆಟಗಾರ ಜೋ ರೂಟ್ ಮತ್ತು ಇನ್ನೂ ಫಾರ್ಮ್‌ಗೆ ಬರಬೇಕಿರುವ ನಾಯಜ ಬೆನ್ ಸ್ಟೋಕ್ಸ್‌ರೊಂದಿಗೆ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ಸಾಕಷ್ಟು ಫೈರ್‌ಪವರ್ ಬ್ಯಾಟ್ಸ್‌ಮನ್‌ಗಳು ಉಳಿದಿರುವ ಕಾರಣ ಇಂಗ್ಲೆಂಡ್ ಐತಿಹಾಸಿಕ ಗೆಲುವನ್ನು ಬರೆಯಲು ರೆಡಿಯಾಗಿದೆ.

ಇನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಸೋಮವಾರ ತಮ್ಮ ಉತ್ತಮ ಸ್ನೇಹಿತ ಮತ್ತು ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಅವರನ್ನು ಟ್ವಿಟರ್‌ನಲ್ಲಿ ಕಾಲೆಳೆಯಲು ಪ್ರಾರಂಭಿಸಿದರು.

India ಎರಡನೇ ಇನ್ನಿಂಗ್ಸ್ ನಲ್ಲಿ ಠುಸ್, ವನಿತೆಯರೇ ಸೂಪರ್ Reverse swing 02 | *CricketWrap | OneIndia Kannada
ನೀವು ಇನ್ನೂ ಭಯಭೀತರಾಗಿದ್ದೀರಾ ವಾಸಿಂ ಜಾಫರ್?

ನೀವು ಇನ್ನೂ ಭಯಭೀತರಾಗಿದ್ದೀರಾ ವಾಸಿಂ ಜಾಫರ್?

ಮೈಕಲ್ ವಾನ್ ಅವರು ಟ್ವಿಟ್ಟರ್‌ನಲ್ಲಿ "ನೀವು ಇನ್ನೂ ಭಯಭೀತರಾಗಿದ್ದೀರಾ ವಾಸಿಂ ಜಾಫರ್?," ಎಂದು ವಾನ್ ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣ ಹಿಂದಿನ ದಿನದ ಆರಂಭದಲ್ಲಿ ಭಾರತ ತಂಡ ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡವನ್ನು 245 ರನ್‌ಗಳಿಗೆ ಆಲೌಟ್ ಮಾಡಿದ ನಂತರ ರೋಲರ್ ಬಳಸಿ ಇಂಗ್ಲೆಂಡ್ ತಂಡವನ್ನು ರೇಗಿಸಿದ್ದರು.

ಭಾರತ ನಾಯಕ ಜಸ್ಪ್ರೀತ್ ಬುಮ್ರಾ ಅವರು ಎರಡನೇ ಸೆಷನ್‌ನ ಅಂತಿಮ ಓವರ್‌ನಲ್ಲಿ 107 ರನ್‌ಗಳ ಆರಂಭಿಕ ಜೊತೆಯಾಟವನ್ನು ಮುರಿದಿದ್ದರಿಂದ ಭಾರತಕ್ಕೆ ಗೆಲವಿನ ಆಸೆ ಮೂಡಿಸಿದರು. ಝಾಕ್ ಕ್ರಾಲಿ ಅವರು 46 ರನ್ ಗಳಿಸಿ ಔಟಾದರು.

For Quick Alerts
ALLOW NOTIFICATIONS
For Daily Alerts
Story first published: Monday, July 4, 2022, 21:50 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X