ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್ ಅಯ್ಯರ್ ಔಟ್‌ ಮಾಡಲು ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ಸಿಗ್ನಲ್

Shreyas iyer

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಮುನ್ನಡೆ ಕಾಯ್ದುಕೊಂಡರೂ ಸಹ ಇಂಗ್ಲೆಂಡ್ ತಿರುಗೇಟು ನೀಡಿದೆ. ಮೂರನೇ ದಿನದಾಟದಂತ್ಯಕ್ಕೆ 125/3 ಸ್ಕೋರ್ ನೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ 245ರನ್‌ಗಳಿಗೆ ಸರ್ವ ಪತನಗೊಂಡಿತು. ಈ ಮೂಲಕ 377ರನ್‌ಗಳ ಲೀಡ್ ಜೊತೆಗೆ ಆತಿಥೇಯರಿಗೆ 378ರನ್ ಟಾರ್ಗೆಟ್ ನೀಡಿದರು.

ಈ ಪಂದ್ಯದಲ್ಲಿ ಭೋಜನ ವಿರಾಮದ ವೇಳೆಗೆ ಭಾರತ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಆದರೆ, ಶ್ರೇಯಸ್ ಅಯ್ಯರ್ ಅವರ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಲು ಇಂಗ್ಲೆಂಡ್ ಬೌಲರ್ ಗಳಿಗೆ ತಂಡದ ಕೋಚ್ ಮೆಕಲಮ್ ಸನ್ನೆ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿರುವ ಮೆಕಲಮ್ ಅಯ್ಯರ್ ಅವರ ದೌರ್ಬಲ್ಯವನ್ನು ಚೆನ್ನಾಗಿ ತಿಳಿದಿದ್ದರು. ಈ ಕ್ರಮದಲ್ಲಿ ಅವರು ತಮ್ಮ ಬೌಲರ್‌ಗಳಿಗೆ ಆತ ಕ್ರೀಸ್‌ನಲ್ಲಿ ನೆಲೆಯೂರದಂತೆ ಹಲವು ಸನ್ನೆಗಳನ್ನು ಮಾಡಿದರು.

ಅಯ್ಯರ್ ಶಾರ್ಟ್ ಪಿಚ್ ಬಾಲ್ ಗಳನ್ನು ಆಡುವುದರಲ್ಲಿ ಸೀಮಿತವಾಗಿರುತ್ತಾರೆ ಎಂದು ಮೆಕಲಮ್ ತಮ್ಮ ಸನ್ನೆಗಳ ಮೂಲಕ ಬೌಲರ್ ಗಳಿಗೆ ಸೂಚಿಸಿದರು. ತರಬೇತುದಾರರ ಸೂಚನೆಯ ಮೇರೆಗೆ ಇಂಗ್ಲೆಂಡ್ ಶಾರ್ಟ್ ಪಿಚ್ ಎಸೆತಗಳಲ್ಲಿ ಅಯ್ಯರ್ ಅವರನ್ನು ಔಟ್ ಮಾಡಿತು.

ಮ್ಯಾಥ್ಯೂ ಪಾಟ್ಸ್ ಅವರ ಬೌಲಿಂಗ್‌ನಲ್ಲಿ ಅಯ್ಯರ್ , ಜೇಮ್ಸ್‌ ಆಂಡರ್ಸನ್‌ಗೆ ಕ್ಯಾಚ್ ನೀಡಿದರು. ಆದ್ರೆ ಇದು ಮೊದಲೇನಲ್ಲ ಅಯ್ಯರ್ ಶಾರ್ಟ್ ಪಿಚ್ ಬಾಲ್‌ಗಳಿಂದ ಆಮಿಷಕ್ಕೆ ಒಳಗಾಗಿ , ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಾರೆ ಮತ್ತು ಪ್ರತಿ ಬಾರಿಯೂ ಅದಕ್ಕೆ ತಕ್ಕ ಬೆಲೆ ಪಾವತಿಸುತ್ತಾರೆ. ಮೂರನೇ ದಿನದಾಟದಂತ್ಯದವರೆಗೆ ಬ್ಯಾಟಿಂಗ್ ಮಾಡಿದ ಪೂಜಾರ (66) ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಸ್ಟುವರ್ಟ್ ಬ್ರಾಡ್‌ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ನಂತರ ಕ್ರೀಸ್‌ಗೆ ಬಂದ ಅಯ್ಯರ್ ಅವರೊಂದಿಗೆ ರಿಷಭ್ ಪಂತ್ ಇನ್ನಿಂಗ್ಸ್ ಮುನ್ನಡೆಸಿದರು. ಈ ವೇಳೆ ಅವರು ಅರ್ಧಶತಕವನ್ನೂ ಪೂರೈಸಿದರು. ಆದರೆ ಮೆಕಲಮ್ ಅಯ್ಯರ್ ಅವರನ್ನು ಔಟ್ ಮಾಡಲು ಸಹಾಯ ಮಾಡಿ ಭಾರತಕ್ಕೆ ಆಘಾತ ಮಾಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಪಂತ್ ಕೂಡ ಲೀಚ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಔಟಾದರು. ಭಾರತ ಅಂತಿಮವಾಗಿ 245ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ ಪರ ನಾಯಕ ಬೆನ್‌ಸ್ಟೋಕ್ಸ್ ನಾಲ್ಕು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಇನ್ನು ಟೀಂ ಇಂಡಿಯಾ ನೀಡಿದ 378ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259ರನ್ ಕಲೆಹಾಕಿದ್ದು, ಗೆಲುವಿಗೆ 119ರನ್‌ಗಳಷ್ಟೇ ಬಾಕಿ ಉಳಿದಿವೆ. ಆರಂಭಿಕ ಶತಕದ ಜೊತೆಯಾಟದ ಬಳಿಕ ಮೂರು ವಿಕೆಟ್ ಉರುಳಿದವು. ಆದ್ರೆ ನಾಲ್ಕನೇ ವಿಕೆಟ್‌ಗೆ ಗಟ್ಟಿಯಾಗಿ ನೆಲೆಯೂರಿದ ನಂಬರ್ ಒನ್ ಬ್ಯಾಟರ್ ಜೋ ರೂಟ್ ಹಾಗೂ ಅದ್ಭುತ ಫಾರ್ಮ್‌ನಲ್ಲಿರುವ ಜಾನಿ ಬೈಸ್ಟ್ರೋವ್ 150ರನ್‌ಗಳ ಜೊತೆಯಾಟದ ಮೂಲಕ ಅಜೇಯರಾಗಿ ಉಳಿದಿದ್ದಾರೆ.

Bairstow ಅವರು Kohli ಜೊತೆಗಿನ ಕಿರಿಕ್ ಬಗ್ಗೆ ಮಾತನಾಡಿದ್ದಾರೆ | OneIndia Kannada

ಜೋ ರೂಟ್ 112 ಎಸೆತಗಳಲ್ಲಿ ಅಜೇಯ 76 ರನ್ ಹಾಗೂ ಜಾನಿ ಬೈಸ್ಟ್ರೋವ್ 87 ಎಸೆತಗಳಲ್ಲಿ 72 ರನ್ ಕಲೆಹಾಕಿ ಅಂತಿಮ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ನಾಯಕ ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದಿದ್ದಾರೆ.

Story first published: Tuesday, July 5, 2022, 10:16 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X