IND vs ENG 5ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಮತ್ತೊಂದು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಒಂದೇ ಓವರ್‌ನಲ್ಲಿ ಗರಿಷ್ಠ ರನ್ ಬಾರಿಸಿದ ನಂತರ ಭಾರತದ ನಾಯಕ ಜಸ್ಪ್ರೀತ್ ಬುಮ್ರಾ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.

ND vs ENG 5ನೇ ಟೆಸ್ಟ್: ಜಡೇಜಾರೊಂದಿಗಿನ ದೊಡ್ಡ ಜೊತೆಯಾಟದ ಹಿಂದಿನ ರಹಸ್ಯ ಹಂಚಿಕೊಂಡ ಪಂತ್ND vs ENG 5ನೇ ಟೆಸ್ಟ್: ಜಡೇಜಾರೊಂದಿಗಿನ ದೊಡ್ಡ ಜೊತೆಯಾಟದ ಹಿಂದಿನ ರಹಸ್ಯ ಹಂಚಿಕೊಂಡ ಪಂತ್

ಸ್ಟುವರ್ಟ್ ಬ್ರಾಡ್‌ನ ಒಂದೇ ಓವರ್‌ನಲ್ಲಿ 35 ರನ್ ಬಾರಿಸುವ ಮೂಲಕ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯದ ಎರಡನೇ ದಿನವನ್ನು ತನ್ನದಾಗಿಸಿಕೊಂಡರು. ಇದು ಬ್ರಿಯಾನ್ ಲಾರಾ ಅವರ ಒಂದು ಓವರ್‌ನಲ್ಲಿ ಅತ್ಯಧಿಕ ರನ್‌ಗಳ ದಾಖಲೆಯನ್ನು ಮುರಿದರು. ನಂತರ ಬಾಲ್‌ನೊಂದಿಗೆ ಹಿಂತಿರುಗಿ ಆರಂಭಿಕ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್‌ಗೆ ಹಿನ್ನಡೆಯನ್ನುಂಟು ಮಾಡಿದರು.

ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್

ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್

ಹಂಗಾಮಿ ಟೆಸ್ಟ್ ನಾಯಕ ಜಸ್ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 68 ರನ್‌ಗಳಿಗೆ 3 ವಿಕೆಟ್ ಕಬಳಿಸಿದರು. ಇದು ಇಂಗ್ಲೆಂಡ್‌ನ ಎಲ್ಲಾ ಅಗ್ರ ಮೂರು ಆಟಗಾರರನ್ನು ಒಳಗೊಂಡಿತ್ತು. ಕಳೆದ ವರ್ಷ ಪ್ರಾರಂಭವಾದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ.

ಆತಿಥೇಯರ ಮೊದಲ ಇನ್ನಿಂಗ್ಸ್‌ನ ಅಂತ್ಯಕ್ಕೆ ಇಂಗ್ಲೆಂಡ್‌ ವಿರುದ್ಧ ಜಸ್ಪ್ರೀತ್ ಬುಮ್ರಾ ಹೆಸರಿಗೆ 21 ವಿಕೆಟ್‌ಗಳೊಂದಿಗೆ ಭಾರತಕ್ಕಾಗಿ ತವರಿನ ಹೊರಗಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2014ರ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅವರ 19 ವಿಕೆಟ್ ಗಳಿಕೆಯ ದಾಖಲೆಯನ್ನು ಬುಮ್ರಾ ಮೀರಿಸಿದ್ದಾರೆ.

ಅಗ್ರ ಐದರಲ್ಲಿ ಒಬ್ಬ ಲೆಗ್-ಸ್ಪಿನ್ನರ್

ಅಗ್ರ ಐದರಲ್ಲಿ ಒಬ್ಬ ಲೆಗ್-ಸ್ಪಿನ್ನರ್

ಭಾರತವು ಸ್ಪಿನ್ ಬೌಲರ್‌ಗಳಿಗೆ ಹೆಸರುವಾಸಿಯಾಗಿದ್ದು, ಆಧುನಿಕ-ದಿನದ ಕ್ವಿಕ್‌ಗಳಿಂದ ಪ್ರಾಬಲ್ಯ ಹೊಂದಿರುವ ಪಟ್ಟಿಯಲ್ಲಿ ಅಗ್ರ ಐದರಲ್ಲಿ ಒಬ್ಬ ಲೆಗ್-ಸ್ಪಿನ್ನರ್ ಎಂದರೆ ಅದು ಸುಭಾಷ್ ಗುಪ್ತೆ. ಅವರು 1959ರಲ್ಲಿ ಐದು ಪಂದ್ಯಗಳ ಸರಣಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು.

ಇಂಗ್ಲೆಂಡ್‌ನಲ್ಲಿನ ಟೆಸ್ಟ್ ಸರಣಿಯಲ್ಲಿ ಭಾರತದ ಬೌಲರ್‌ನಿಂದ ಅತಿ ಹೆಚ್ಚು ವಿಕೆಟ್‌ಗಳು (ಆಟಗಾರ, ಋತು, ಪಂದ್ಯಗಳು, ವಿಕೆಟ್‌ಗಳು, ಸರಾಸರಿ, ಪ್ರತಿ ಓವರ್‌ಗೆ ಸರಾಸರಿ ರನ್):

ಜಸ್ಪ್ರೀತ್ ಬುಮ್ರಾ- 2021/22- 21 ವಿಕೆಟ್, 5 ಪಂದ್ಯ

ಭುವನೇಶ್ವರ್ ಕುಮಾರ್ 2014- 19 ವಿಕೆಟ್, 5 ಪಂದ್ಯ

ಜಹೀರ್ ಖಾನ್ 2007- 18 ವಿಕೆಟ್, 3 ಪಂದ್ಯ

ಇಶಾಂತ್ ಶರ್ಮಾ 2018- 18 ವಿಕೆಟ್, 5 ಪಂದ್ಯ

ಸುಭಾಷ್ ಗುಪ್ತೆ 1959- 17 ವಿಕೆಟ್, 5 ಪಂದ್ಯ

ಗಮನಿಸಿ: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನ ಅಂತ್ಯಕ್ಕೆ ಜಸ್ಪ್ರೀತ್ ಬುಮ್ರಾ ಅಂಕಿಅಂಶಗಳು.

ಟೆಸ್ಟ್ ಸರಣಿಯುದ್ದಕ್ಕೂ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ

ಟೆಸ್ಟ್ ಸರಣಿಯುದ್ದಕ್ಕೂ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ

2021 ರಲ್ಲಿ ಆರಂಭವಾದ ಟೆಸ್ಟ್ ಸರಣಿಯುದ್ದಕ್ಕೂ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದರು. ಅವರು ಇಂಗ್ಲೆಂಡ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ಅವರನ್ನು ಹೊರಕಳಿಸಿದರು. ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್‌ಗೆ ದುರ್ಬಲವಾದ ಇಂಗ್ಲಿಷ್ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದರು. ಹೊಸ ಆರಂಭಿಕ ಜೋಡಿ ಅಲೆಕ್ಸ್ ಲೀಸ್ ಮತ್ತು ಝಾಕ್ ಕ್ರಾಲಿ ಉತ್ತಮ ಪ್ರದರ್ಶನ ನೀಡಲಿಲ್ಲ.

ಭಾರತ ಉತ್ತಮ ಸ್ಥಿತಿಯಲ್ಲಿದೆ

ಭಾರತ ಉತ್ತಮ ಸ್ಥಿತಿಯಲ್ಲಿದೆ

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 132 ರನ್‌ಗಳ ಮುನ್ನಡೆ ಸಾಧಿಸಿದ ನಂತರ ಭಾರತ ಉತ್ತಮ ಸ್ಥಿತಿಯಲ್ಲಿದ್ದು, ಆಟದ ಮೂರನೇ ದಿನದ ಅಂತ್ಯಕ್ಕೆ 125 ರನ್‌ಗಳ ಸೇರಿಸಿತ್ತು. ಇಂಗ್ಲೆಂಡ್ ವಿರುದ್ಧ ಅಂತಿಮ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತದ ಟಾರ್ಗೆಟ್ ನೀಡಲು ಎದುರು ನೋಡುತ್ತಿದೆ. ಒಂದು ವೇಳೆ 450 ರನ್‌ಗೂ ಹೆಚ್ಚು ಮೊತ್ತದ ಟಾರ್ಗೆಟ್ ನೀಡಿದರೆ, ಭಾರತದ ಬೌಲಿಂಗ್ ಲೈನ್‌ಅಪ್ ವಿರುದ್ಧ ಬೆನ್ನಟ್ಟಲು ಆತಿಥೇಯರಿಗೆ ಕಷ್ಟಕರವಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, July 4, 2022, 17:18 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X