ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹನುಮ ವಿಹಾರಿ ಮಾಡಿದ ಎಡವಟ್ಟು: ಐದನೇ ಟೆಸ್ಟ್‌ನಲ್ಲಿ ಗೆಲುವಿನತ್ತ ಸಾಗಿದ ಇಂಗ್ಲೆಂಡ್

Jonny bairstow

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತವು ಸೋಲಿನತ್ತ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ ವಿರುದ್ಧದ ಐದನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲಿನ ಭೀತಿಯಲ್ಲಿದೆ. ಅಂತಿಮ ದಿನದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಾದರೆ ಪವಾಡಗಳು ನಡೆಯಲೇಬೇಕು.

ಭಾರತ ಈ ಟೆಸ್ಟ್‌ನಲ್ಲಿ ಸೋತರೆ ಪ್ರಮುಖ ಕಾರಣಗಳಲ್ಲಿ ಹನುಮ ವಿಹಾರಿ ಕೂಡ ಒಬ್ಬರು. ಏಕೆಂದರೆ ಅವರ ದೊಡ್ಡ ತಪ್ಪು ಇದೀಗ ಭಾರತವನ್ನು ವೈಫಲ್ಯದ ಅಂಚಿಗೆ ತಂದಿದೆ. ಟೀಂ ಇಂಡಿಯಾ ಸೋಲಿಗೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿಯಿರಿ.

ಟೀಂ ಇಂಡಿಯಾ ವಿರುದ್ಧ ಬೈಸ್ಟ್ರೋವ್ ಅಬ್ಬರ

ಟೀಂ ಇಂಡಿಯಾ ವಿರುದ್ಧ ಬೈಸ್ಟ್ರೋವ್ ಅಬ್ಬರ

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿರುವ ಜಾನಿ ಬೈರ್‌ಸ್ಟೋ ಈಗ ತಮ್ಮ ವೃತ್ತಿಜೀವನದ ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲೂ ಶತಕದತ್ತ ಮುನ್ನಡೆಯುತ್ತಿದ್ದಾರೆ. ನಾಲ್ಕನೇ ದಿನದಾಟದಂತ್ಯಕ್ಕೆ ಬೈರ್‌ಸ್ಟೋ ಔಟಾಗದೆ 72 ರನ್ ಗಳಿಸಿದರು. ಆದರೆ ಬೈರ್‌ ಸ್ಟೋವ್‌ ಅರ್ಧಶತಕ ಗಡಿ ಮುಟ್ಟುವುದಕ್ಕೂ ಮೊದಲೇ ಅವರನ್ನು ಔಟ್‌ ಪಡೆಯಲು ಭಾರತಕ್ಕೆ ಉತ್ತಮ ಅವಕಾಶವಿತ್ತು. ಆದರೆ ಕ್ಯಾಚ್ ಕೈ ಚೆಲ್ಲಿದರ ಪರಿಣಾಮವಾಗಿ ಭಾರತ ಹಿನ್ನಡೆ ಅನುಭವಿಸಿದೆ.

IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ

ವಿಹಾರಿ ಕ್ಯಾಚ್ ಕೈಬಿಟ್ಟು, ಬೈಸ್ಟ್ರೋವ್‌ಗೆ ಜೀವದಾನ

ವಿಹಾರಿ ಕ್ಯಾಚ್ ಕೈಬಿಟ್ಟು, ಬೈಸ್ಟ್ರೋವ್‌ಗೆ ಜೀವದಾನ

ಭಾರತದ ಆಟಗಾರರು ಹಾಗೂ ಅಭಿಮಾನಿಗಳು ನಿರಾಸೆ ಮೂಡಿಸಿದ ಕ್ಷಣ ನಾಲ್ಕನೇ ದಿನ ಇಂಗ್ಲೆಂಡ್ ಇನಿಂಗ್ಸ್ ನ 38ನೇ ಓವರ್ ನಲ್ಲಿತ್ತು. ವಿಹಾರಿ ಮಾಡಿದ ದೊಡ್ಡ ತಪ್ಪಿನಿಂದಾಗಿ ವೇಗಿ ಮೊಹಮ್ಮದ್‌ ಸಿರಾಜ್ ವಿಕೆಟ್ ಕಳೆದುಕೊಂಡರು. ಸಿರಾಜ್ ಬೌಲಿಂಗ್‌ನಲ್ಲಿ ಚೆಂಡು ಬೈಸ್ಟ್ರೋವ್ ಬ್ಯಾಟ್ ತಾಗಿ ನೇರವಾಗಿ ಮೂರನೇ ಸ್ಲಿಪ್‌ನಲ್ಲಿ ವಿಹಾರಿ ಕೈಗೆ ಬಂದಿತು. ಆದರೆ ಭಾರತದ ಆಟಗಾರನ ಚೆಂಡಿನ ಆಗಮನವನ್ನು ಲೆಕ್ಕ ಹಾಕಲಾಗಲಿಲ್ಲ. ವಿಹಾರಿ ಅವರ ಎರಡು ಕೈಗಳ ನಡುವಿನ ಸ್ಲಿಪ್ ಆದ ಬಾಲ್ ಬೌಂಡರಿಗೆ ತಿರುಗಿತು. ನಂಬಲಾಗದೆ ನಿಂತಿದ್ದ ಸಿರಾಜ್ ವಿಹಾರಿಯತ್ತ ಕಣ್ಣು ಹೊರಳಿಸಿ ಮುಂದಿನ ಚೆಂಡನ್ನು ಎಸೆಯಲು ಹಿಂದೆ ನಡೆದರು.

ಆತನನ್ನು ಹೊರಗಿಟ್ಟ ಕಾರಣಕ್ಕೆ ಭಾರತ ಬೆಲೆ ತೆರಬೇಕಾಗಿದೆ: ದ್ರಾವಿಡ್ ನಿರ್ಧಾರದ ಬಗ್ಗೆ ಕನೆರಿಯಾ ಕಿಡಿ

ಬೈಸ್ಟ್ರೋವ್ ಕೇವಲ 14 ರನ್ ಗಳಿಸಿದ್ದರು

ಬೈಸ್ಟ್ರೋವ್ ಕೇವಲ 14 ರನ್ ಗಳಿಸಿದ್ದರು

ಇಂಗ್ಲೆಂಡ್‌ನ ಇನ್‌ ಫಾರ್ಮ್ ಬ್ಯಾಟರ್ ಜಾನಿ ಬೈಸ್ಟ್ರೋವ್ ಕೇವಲ 14 ರನ್‌ ಗಳಿಸಿದ್ದರು. ಆಗ ಇಂಗ್ಲೆಂಡ್ ಸ್ಕೋರ್‌ಬೋರ್ಡ್‌ನಲ್ಲಿ ಕೇವಲ 157 ರನ್‌ಗಳಿದ್ದವು. ನಂತರ ಬೈರ್‌ಸ್ಟೋ ವಿಹಾರಿ ಅವರ ಎಡವಟ್ಟಿನಿಂದ ಜೀವದಾನ ಪಡೆದರು. ಅವರು ಭಾರತದ ಬೌಲರ್‌ಗಳು ಅಥವಾ ಫೀಲ್ಡರ್‌ಗಳಿಗೆ ತಮ್ಮ ವಿಕೆಟ್ ಪಡೆಯಲು ಮತ್ತೊಂದು ಅವಕಾಶವನ್ನು ನೀಡಲಿಲ್ಲ. ನಾಲ್ಕನೇ ದಿನದಾಟದಲ್ಲಿ ಅಜೇಯ 72 ರನ್‌ಗಳೊಂದಿಗೆ ಅಂತಿಮ ದಿನದಾಟಕ್ಕೆ ಕ್ರೀಸ್‌ನಲ್ಲಿದ್ದಾರೆ. ಅವರು 87 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಬೈರ್‌ಸ್ಟೋ ನಾಲ್ಕನೇ ವಿಕೆಟ್‌ಗೆ ಜೋ ರೂಟ್ ಜೊತೆಗೂಡಿ 150 ರನ್ಗಳ ಜೊತೆಯಾಟವಾಡಿದ್ದಾರೆ.

ಭಾರತ ಇಂಗ್ಲೆಂಡ್‌ಗೆ 378 ರನ್‌ಗಳ ಬೃಹತ್ ಗುರಿ ನೀಡಿದೆ. ಮೂರನೇ ದಿನದವರೆಗೂ ಭಾರತ ಟೆಸ್ಟ್‌ನಲ್ಲಿ ಪ್ರಾಬಲ್ಯ ಮೆರೆದರೆ, ನಾಲ್ಕನೇ ದಿನದಂದು ಇಂಗ್ಲೆಂಡ್ ಉತ್ತಮ ಆಟವಾಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ಮೂರು ವಿಕೆಟ್‌ಗೆ 259 ರನ್ ಗಳಿಸಿದೆ. ಕ್ರೀಸ್‌ನಲ್ಲಿ ಜೋ ರೂಟ್ ಮತ್ತು ಬೈರ್‌ಸ್ಟೋವ್ ಅಜೇಯರಾಗಿ ಉಳಿದಿದ್ದು, ಇನ್ನು ಏಳು ವಿಕೆಟ್‌ಗಳು ಬಾಕಿ ಉಳಿದಿರುವ ಇಂಗ್ಲೆಂಡ್‌ಗೆ ಗೆಲ್ಲಲು 119 ರನ್‌ಗಳ ಅಗತ್ಯವಿದೆ. ಇಂಗ್ಲೆಂಡ್ ಪರ ಅಲೆಕ್ಸ್ ಲೀಸ್ (56), ಝಾಕ್ ಕ್ರೌಲಿ (46) ಮತ್ತು ಒಲ್ಲಿ ಪೋಪ್ (0), ಜೋ ರೂಟ್ ಅಜೇಯ 76, ಜಾನಿ ಬೈಸ್ಟ್ರೋವ್ ಅಜೇಯ 72 ರನ್ ಕಲೆಹಾಕಿದ್ದಾರೆ.

Story first published: Tuesday, July 5, 2022, 16:12 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X