IND vs ENG: ಮುಂದುವರೆದ ಎಡ್ಜ್‌ಬಾಸ್ಟನ್ ಶಾಪ; 55 ವರ್ಷಗಳಲ್ಲಿ ಒಂದೂ ಟೆಸ್ಟ್‌ ಪಂದ್ಯ ಗೆಲ್ಲದ ಭಾರತ!

ಮಂಗಳವಾರ, ಜುಲೈ 5ರಂದು ಕೊನೆಯಾದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಮರುನಿಗದಿಪಡಿಸಲಾದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಏಳು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದೆ. ಇದೇ ವೇಳೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಚೊಚ್ಚಲ ಟೆಸ್ಟ್ ಗೆಲುವಿಗಾಗಿ ಭಾರತದ ಕಾಯುವಿಕೆ ಮುಂದುವರೆದಿದೆ.

IND vs ENG 5ನೇ ಟೆಸ್ಟ್ ಸೋಲು: ಭಾರತದ ರಕ್ಷಣಾತ್ಮಕ, ಅಂಜಿಕೆಯುಳ್ಳ ಬ್ಯಾಟಿಂಗ್ ಬಗ್ಗೆ ಟೀಕಿಸಿದ ರವಿಶಾಸ್ತ್ರಿIND vs ENG 5ನೇ ಟೆಸ್ಟ್ ಸೋಲು: ಭಾರತದ ರಕ್ಷಣಾತ್ಮಕ, ಅಂಜಿಕೆಯುಳ್ಳ ಬ್ಯಾಟಿಂಗ್ ಬಗ್ಗೆ ಟೀಕಿಸಿದ ರವಿಶಾಸ್ತ್ರಿ

ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿಯು 5ನೇ ದಿನದಂದು ಇಂಗ್ಲೆಂಡ್‌ಗೆ ತ್ವರಿತ ಆರಂಭವನ್ನು ಒದಗಿಸಿದರು. ಹೀಗಾಗಿ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತವು ಹೀನಾಯವಾಗಿ ಸೋತಿದ್ದು, ಭಾರತೀಯ ಬೌಲರ್‌ಗಳ ಮೇಲೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸವಾರಿ ಮಾಡಿದರು. 378 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಇಂಗ್ಲೆಂಡ್ ದಾಖಲೆ ಬರೆದಿದೆ.

ಅತ್ಯಂತ ಯಶಸ್ವಿ ರನ್-ಚೇಸ್

ಅತ್ಯಂತ ಯಶಸ್ವಿ ರನ್-ಚೇಸ್

ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ ಪಂದ್ಯದ 5ನೇ ದಿನದ ಮೊದಲ ಸೆಷನ್‌ನಲ್ಲಿ 378 ರನ್ ಗಳಿಸಿದ ನಂತರ ಟೆಸ್ಟ್‌ನಲ್ಲಿ ತಮ್ಮ ಅತ್ಯಂತ ಯಶಸ್ವಿ ರನ್-ಚೇಸ್ ಅನ್ನು ದಾಖಲಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಲೆಕ್ಸ್ ಲೀಸ್ ಮತ್ತು ಝಾಕ್ ಕ್ರಾಲಿ ಆರಂಭಿಕ ವಿಕೆಟ್‌ಗೆ 107 ರನ್‌ಗಳ ಜೊತೆಯಾಟವನ್ನು ನೀಡಿದ ನಂತರ ಇಂಗ್ಲೆಂಡ್ ಸುಮಾರು ಎರಡು ಓವರ್‌ಗಳ ಅಂತರದಲ್ಲಿ ಮೂರು ತ್ವರಿತ ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಭಾರತವು ಗೆಲುವಿನ ಭರವಸೆಯನ್ನು ಪಡೆದಿತ್ತು.

ಮುರಿಯದ ನಾಲ್ಕನೇ ವಿಕೆಟ್‌ಗೆ 268 ರನ್‌ಗಳ ಜೊತೆಯಾಟ

ಮುರಿಯದ ನಾಲ್ಕನೇ ವಿಕೆಟ್‌ಗೆ 268 ರನ್‌ಗಳ ಜೊತೆಯಾಟ

ಭಾರತ ಟೆಸ್ಟ್ ನಾಯಕ ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದ ನಂತರ ಮಿಂಚಿನ ಅರ್ಧಶತಕ ಗಳಿಸಿದ ಅಲೆಕ್ಸ್ ಲೀಸ್ ರನ್ ಔಟ್ ಆದರು. ಅಲ್ಲಿಂದ ಮುಂದೆ ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಮುರಿಯದ ನಾಲ್ಕನೇ ವಿಕೆಟ್‌ಗೆ 268 ರನ್‌ಗಳ ಜೊತೆಯಾಟವನ್ನು ನೀಡಿದರು. ಇದರಿಂದ ಆತಿಥೇಯ ಇಂಗ್ಲೆಂಡ್ ತಂಡ ದಾಖಲೆಯ 378 ರನ್ ಚೇಸ್ ಮಾಡಲು ಸಾಧ್ಯವಾಯಿತು.

ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಇಬ್ಬರೂ ಅಜೇಯ ಶತಕಗಳನ್ನು ಗಳಿಸಿದರು. ಕೊನೆಯ ದಿನ ಇಂಗ್ಲೆಂಡ್ ತಂಡ ಹೆಚ್ಚು ಬೆವರು ಹರಿಸದೆ ಪಂದ್ಯವನ್ನು ಗೆದ್ದಿತು. ಜೋ ರೂಟ್ 142 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರ ಶತಕಗಳ ಸಂಖ್ಯೆಯನ್ನು ಮೀರಿಸಿದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತ ವಿನ್‌ಲೆಸ್

ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತ ವಿನ್‌ಲೆಸ್

ಈ ಮಧ್ಯೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಭಾರತ ಗೆಲುವು ಸಾಧಿಸದೆ ನಿರಾಸೆ ಅನುಭವಿಸಿದೆ. ಎಂಟು ಪಂದ್ಯಗಳಲ್ಲಿ ಭಾರತ ಏಳರಲ್ಲಿ ಸೋತಿದ್ದರೆ, ಕಪಿಲ್ ದೇವ್ ನಾಯಕತ್ವದ ಭಾರತ ತಂಡ 1986ರಲ್ಲಿ ಡ್ರಾ ಸಾಧಿಸಿತ್ತು.

2018ರಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 194 ರನ್‌ಗಳನ್ನು ಚೇಸ್ ಮಾಡಲು ಹೊರಟ ಭಾರತ ತಂಡಕ್ಕೆ ಬರ್ಮಿಂಗ್‌ಹ್ಯಾಮ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಗೆಲುವು ದಾಖಲಿಸುವ ಉತ್ತಮ ಅವಕಾಶವಿತ್ತು.

ಅಂದಿನ ಭಾರತದ ನಾಯಕ ವಿರಾಟ್ ಕೊಹ್ಲಿ 51 ರನ್ ಗಳಿಸಿದ್ದರು, ಆದರೆ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ನಾಲ್ಕು ವಿಕೆಟ್ ಪಡೆದ ನಂತರ ಭಾರತ 163 ರನ್‌ಗಳಿಗೆ ಆಲೌಟ್ ಆಗಿ ನಿರಾಸೆ ಅನುಭವಿಸಿತ್ತು. ಹೀಗಾಗಿ ಭಾರತ ಟೆಸ್ಟ್ ತಂಡಕ್ಕೆ ಎಡ್ಜ್‌ಬಾಸ್ಟನ್ ಶಾಪ ಮುಂದುವರೆದಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 18:14 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X