IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ

Ind vs Eng ಕ್ರೀಡಾಂಗಣದಲ್ಲಿ ಏನಿದು ಆತಂಕಕಾರಿ ಸುದ್ದಿ | *Cricket | OneIndia Kannada

ಕಳೆದ ವರ್ಷ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇದೀಗ ಮರು ಆಯೋಜನೆಯಾಗಿದ್ದು, ಜುಲೈ 1ರಿಂದ ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಎಡ್ಜ್ ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನೆರೆದಿದ್ದ ಇಂಗ್ಲೆಂಡ್ ಅಭಿಮಾನಿಗಳು ಅವಮಾನ ಮಾಡಿದ ಘಟನೆ ಜರುಗಿದೆ.

IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!

ಹೌದು, ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 20 ರನ್ ಕಲೆಹಾಕಿ ಬೆನ್ ಸ್ಟೋಕ್ಸ್ ಎಸೆತದಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇದಕ್ಕೂ ಮುನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ 11 ರನ್ ಕಲೆ ಹಾಕಿದ್ದ ವಿರಾಟ್ ಕೊಹ್ಲಿ ಈ ಟೆಸ್ಟ್ ಪಂದ್ಯದಲ್ಲಿ ಒಟ್ಟು 31 ರನ್ ಕಲೆಹಾಕಿದಂತಾಗಿದ್ದು, ತಮ್ಮ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಇದರ ನಡುವೆಯೇ ವಿರಾಟ್ ಕೊಹ್ಲಿ ಪಂದ್ಯದ ಮೂರನೇ ದಿನದಾಟದಂದು ಔಟ್ ಆದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ನೆರೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರೇಮಿಗಳು ವಿರಾಟ್ ಕೊಹ್ಲಿಗೆ 'ಚೀರಿಯೋ' ಕೂಗಿದ್ದಾರೆ. ಚೀರಿಯೋ ಪದವು ಗುಡ್ ಬೈ ಎಂಬರ್ಥವನ್ನು ನೀಡಲಿದ್ದು, ಅಲ್ಪ ಮೊತ್ತಕ್ಕೆ ಔಟ್ ಆದ ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ಪ್ರೇಕ್ಷಕರು ಜೋರಾಗಿ ಚೀರಿಯೋ ಎಂದು ಕೂಗಿ ಅವಮಾನಿಸಿದ್ದಾರೆ.

ಈ ವಿಡಿಯೋವನ್ನು ಜಾನಿ ಬೇರ್ ಸ್ಟೋ'ಸ್ ಬಾರ್ಬಿ ಆರ್ಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಚೀರಿಯೋ ವಿರಾಟ್ ಕೊಹ್ಲಿ ಎಂದು ಬರೆದುಕೊಳ್ಳುವುದರ ಮೂಲಕ ಕೊಹ್ಲಿ ಕಾಲೆಳೆದಿದೆ.

ಪಂದ್ಯದ ವೇಳೆ ಕೊಹ್ಲಿ ಮತ್ತು ಬೇರ್ ಸ್ಟೋ ನಡುವೆ ನಡೆದಿತ್ತು ಮಾತಿನ ಚಕಮಕಿ

ಪಂದ್ಯದ ವೇಳೆ ಕೊಹ್ಲಿ ಮತ್ತು ಬೇರ್ ಸ್ಟೋ ನಡುವೆ ನಡೆದಿತ್ತು ಮಾತಿನ ಚಕಮಕಿ

ಇನ್ನು ಇದೇ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಜಾನಿ ಬೇರ್ ಸ್ಟೋ ಬ್ಯಾಟಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಾನಿ ಬೇರ್ ಸ್ಟೋ ಹಾಗೂ ವಿರಾಟ್ ಕೊಹ್ಲಿ ನಡುವೆ ಕೆಲಕಾಲ ಮೈದಾನದಲ್ಲಿ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲ ವಿರಾಟ್ ಕೊಹ್ಲಿ 'ಬೇರ್ ಸ್ಟೋಗೆ ಚೆಂಡನ್ನು ಹೊರತುಪಡಿಸಿ ಮೈದಾನದಲ್ಲಿರುವ ಎಲ್ಲವೂ ಕಾಣಿಸುತ್ತದೆ' ಎಂದು ಕಾಮೆಂಟ್ ಮಾಡಿ ಕಾಲೆಳೆದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಬೇರ್ ಸ್ಟೋ ಆ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು. ಹೀಗೆ ಈ ಇಬ್ಬರ ನಡುವಿನ ಈ ಆನ್ ಫೀಲ್ಡ್ ಮಾತಿನ ಚಕಮಕಿಯಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಅಭಿಮಾನಿಗಳ ನಡುವೆ ವೈರತ್ವ ಉಂಟಾಗಿದೆ ಹಾಗೂ ಮೈದಾನದಲ್ಲಿ ಇಂಗ್ಲೆಂಡ್ ಪ್ರೇಕ್ಷಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನಬಹುದು.

ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದ ಜಾನಿ

ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದ ಜಾನಿ

ಇನ್ನು ಇಬ್ಬರ ನಡುವೆ ಉಂಟಾಗಿದ್ದ ಈ ಮಾತಿನ ಚಕಮಕಿ ಕುರಿತು ಇನ್ನಿಂಗ್ಸ್ ಮುಕ್ತಾಯದ ನಂತರ ಮಾತನಾಡಿದ ಜಾನಿ ಬೇರ್ ಸ್ಟೋ ಕೊಹ್ಲಿ ಮತ್ತು ತನ್ನ ನಡುವೆ ಯಾವುದೇ ರೀತಿಯ ಮನಸ್ತಾಪವಿಲ್ಲ ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ತೆರೆ ಎಳೆದಿದ್ದರು.

ಸೋಲಿನ ಭೀತಿಯಲ್ಲಿ ಭಾರತ

ಸೋಲಿನ ಭೀತಿಯಲ್ಲಿ ಭಾರತ

ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯದ ಸಮಯಕ್ಕೆ ಬೃಹತ್ ಮುನ್ನಡೆ ಕಾಯ್ದುಕೊಂಡು ಪಂದ್ಯ ಗೆಲ್ಲುವ ಭರವಸೆ ಮೂಡಿಸಿದ್ದ ಟೀಮ್ ಇಂಡಿಯಾ ಇದೀಗ ನಾಲ್ಕನೇ ದಿನದಾಟದ ಮುಕ್ತಾಯದ ಹಂತಕ್ಕೆ ಸೋಲಿನ ದವಡೆಗೆ ಸಿಲುಕಿದೆ. ಹೌದು, ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿತ್ತು ಹಾಗೂ ಇಂಗ್ಲೆಂಡ್ 284 ರನ್‌ಗಳಿಗೆ ಆಲ್ ಔಟ್ ಆಯಿತು. ಪರಿಣಾಮವಾಗಿ ಮೊದಲನೇ ಇನ್ನಿಂಗ್ಸ್‌ ಮುಕ್ತಾಯವಾದ ನಂತರ ಟೀಮ್ ಇಂಡಿಯಾ 132 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ನಂತರ ದ್ವಿತೀಯ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್ಔಟ್ ಆದ ಭಾರತ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 378 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇತ್ತ ಈ ಗುರಿಯನ್ನು ಬೆನ್ನತ್ತಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್ ಕಲೆ ಹಾಕಿದ್ದು ಗೆಲ್ಲಲು ಇನ್ನೂ 119 ರನ್ ಬಾರಿಸಬೇಕಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 10:21 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X