ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾ

IND vs ENG 5th test: England lost 5 wickets for 84 runs in the first innings and trail by 332 runs

ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿ 332 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.

ಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿ

ಪಂದ್ಯದ ಮೊದಲನೇ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 338 ರನ್ ಕಲೆಹಾಕಿದ್ದ ಟೀಮ್ ಇಂಡಿಯಾ ಎರಡನೇ ದಿನದಾಟದಂದು ರವೀಂದ್ರ ಜಡೇಜಾ ಶತಕ ಹಾಗೂ ಜಸ್ಪ್ರೀತ್ ಬುಮ್ರಾ ಅಜೇಯ 31 ರನ್ ಆಟದ ನೆರವಿನಿಂದ 416 ರನ್ ಕಲೆಹಾಕಿ ಆಲ್ ಔಟ್ ಆಯಿತು.

ಇದು ಬುಮ್ರಾನಾ ಅಥವಾ ಯುವಿನಾ?: ಬುಮ್ರಾ ಅಬ್ಬರದ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ತೆಂಡೂಲ್ಕರ್!ಇದು ಬುಮ್ರಾನಾ ಅಥವಾ ಯುವಿನಾ?: ಬುಮ್ರಾ ಅಬ್ಬರದ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ತೆಂಡೂಲ್ಕರ್!

ಹೀಗೆ ತನ್ನ ಮೊದಲ 5 ವಿಕೆಟ್‌ಗಳನ್ನು ಅಲ್ಪಮೊತ್ತಕ್ಕೆ ಕಳೆದುಕೊಂಡಿದ್ದ ಟೀಮ್ ಇಂಡಿಯಾ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಶತಕದಾಟದ ನೆರವಿನಿಂದ ಬೃಹತ್ ರನ್ ಕಲೆಹಾಕಿದರೆ, ಎರಡನೇ ದಿನದಾಟದಂದು ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಟೀಮ್ ಇಂಡಿಯಾ ರೀತಿಯೇ ತನ್ನ ಮೊದಲ 5 ವಿಕೆಟ್‍ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮಳೆಯ ಅಡ್ಡಿ, ನೆಲಕಚ್ಚಿದ ಆಂಗ್ಲರು

ಮಳೆಯ ಅಡ್ಡಿ, ನೆಲಕಚ್ಚಿದ ಆಂಗ್ಲರು

ಒಂದೆಡೆ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿದರೆ, ಮತ್ತೊಂದೆಡೆ ಮಳೆರಾಯ 2 -3 ಬಾರಿ ಪಂದ್ಯ ಸ್ಥಗಿತಗೊಳ್ಳುವಷ್ಟು ಅಡ್ಡಿಯನ್ನುಂಟುಮಾಡಿದ್ದಾನೆ. ಹೀಗಾಗಿ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ನಿರೀಕ್ಷಿಸಿದಷ್ಟು ಓವರ್‌ಗಳ ಆಟ ನಡೆಯಲಿಲ್ಲ. ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 27 ಓವರ್ ಮಾತ್ರ ಬೌಲಿಂಗ್ ಮಾಡಿದ್ದು, ಆಂಗ್ಲರು ತಮ್ಮ ಮೊದಲ 5 ವಿಕೆಟ್‍ಗಳನ್ನು ವೇಗವಾಗಿ ಕಳೆದುಕೊಂಡಿದ್ದಾರೆ. ಹೀಗೆ ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ ಸದ್ಯ ನೆಲಕಚ್ಚಿದೆ.

ಕಣದಲ್ಲಿದ್ದಾರೆ ಅಪಾಯಕಾರಿ ಸ್ಟೋಕ್ಸ್ ಮತ್ತು ಬೈರ್ ಸ್ಟೋ

ಕಣದಲ್ಲಿದ್ದಾರೆ ಅಪಾಯಕಾರಿ ಸ್ಟೋಕ್ಸ್ ಮತ್ತು ಬೈರ್ ಸ್ಟೋ

ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾಗಿ ಅಲೆಕ್ಸ್ ಲೀಸ್ ಮತ್ತು ಜ್ಯಾಕ್ ಕ್ರಾವ್ಲೆ ಕಣಕ್ಕಿಳಿದರು. ಆದರೆ ಈ ಜೋಡಿ ಎರಡಂಕಿಯನ್ನೂ ದಾಟದೇ ನಿರಾಸೆ ಮೂಡಿಸಿತು. ಅಲೆಕ್ಸ್ ಲೀಸ್ 6 ರನ್ ಗಳಿಸಿ ಔಟ್ ಆದರೆ, ಜಾಕ್ ಕ್ರಾವ್ಲೆ 9 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಒಲ್ಲಿ ಪೋಪ್ 10 ರನ್, ಜೋ ರೂಟ್ 31 ರನ್ ಗಳಿಸಿ ಔಟ್ ಆದರು ಹಾಗೂ ಜಾಕ್ ಲೀಚ್ ಡಕ್ ಔಟ್ ಆದರು. ಸದ್ಯ ದಿನದಾಟದಂತ್ಯಕ್ಕೆ ಜಾನಿ ಬೈರ್ ಸ್ಟೋವ್ 12 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದಾರೆ ಹಾಗೂ ನಾಯಕ ಬೆನ್ ಸ್ಟೋಕ್ಸ್ ಯಾವುದೇ ರನ್ ಕಲೆಹಾಕದೇ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಬುಮ್ರಾ

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ ಬುಮ್ರಾ

ಇನ್ನು ಟೀಮ್ ಇಂಡಿಯಾ ಪರ ಬೌಲರ್‌ಗಳು ಉತ್ತಮ ಪ್ರದರ್ಶನವನ್ನು ನೀಡಿದ್ದು, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಮೇಲೆ ಹಿಡಿತವನ್ನು ಸಾಧಿಸಿದ್ದಾರೆ. ಭಾರತದ ಪರ ನಾಯಕ ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಈ ಮೂರು ಬೌಲರ್‌ಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬೌಲರ್ ಕೂಡ ಬೌಲಿಂಗ್ ಮಾಡಿಲ್ಲ.

ಹೀಗೆ ಮೊದಲು ಬ್ಯಾಟಿಂಗ್ ಮೂಲಕ ಓವರ್‌ವೊಂದರಲ್ಲಿ 35 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿ ಮಿಂಚಿದ ಜಸ್ ಪ್ರೀತ್ ಬುಮ್ರಾ ಇದೀಗ ಬೌಲಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 83 ರನ್‌ಗಳಿಗೆ ತನ್ನ ಮೊದಲ 5 ವಿಕೆಟ್‍ಗಳನ್ನು ಕಳೆದುಕೊಂಡಿದ್ದರೆ, ಟೀಮ್ ಇಂಡಿಯಾ 98 ರನ್‌ಗಳಿಗೆ 5 ವಿಕೆಟ್‍ಗಳನ್ನು ಕಳೆದುಕೊಂಡಿತ್ತು.

Story first published: Sunday, July 3, 2022, 0:41 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X