ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್: ಸಂಕಷ್ಟದಲ್ಲಿರುವ ಇಂಗ್ಲೆಂಡ್ ಫಾಲೋಆನ್ ತಪ್ಪಿಸಿಕೊಳ್ಳಲು ಇಷ್ಟು ರನ್ ಗಳಿಸಲೇಬೇಕು!

IND vs ENG 5th test: England need to score 132 more runs to avoid follow on in the 3rd day

ಪ್ರಸ್ತುತ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಆತಿಥೇಯ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಮಾತ್ರವಲ್ಲದೇ ಇದೀಗ ಫಾಲೋ ಆನ್ ಭೀತಿಯಲ್ಲಿ ಕೂಡ ಇದೆ.

ಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾಅಲ್ಪಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್; ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದ ಬುಮ್ರಾ

ಹೌದು, ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಆಯ್ದುಕೊಂಡು ಪ್ರವಾಸಿ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಬೆನ್ ಸ್ಟೋಕ್ಸ್ ಆಯ್ಕೆಯಂತೆ ಮೊದಲಿಗೆ ಇಂಗ್ಲೆಂಡ್ ತಂಡದ ಬೌಲಿಂಗ್ ತಂತ್ರ ಉತ್ತಮವಾಗಿ ಕೆಲಸ ಮಾಡಿತು. ಆದರೆ ನಂತರದಲ್ಲಿ ಟೀಮ್ ಇಂಡಿಯಾ ಎದುರು ಇಂಗ್ಲೆಂಡ್ ಬೌಲಿಂಗ್ ವಿಭಾಗ ಮಂಕಾಯಿತು. 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾ ರಿಷಭ್ ಪಂತ್ 146, ರವೀಂದ್ರ ಜಡೇಜಾ 104 ಮತ್ತು ಜಸ್ ಪ್ರೀತ್ ಬುಮ್ರಾರ ಅಜೇಯ 31 ರನ್‌ಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿ ಆಲ್ ಔಟ್ ಆಯಿತು.

IND vs ENG 5ನೇ ಟೆಸ್ಟ್: ಶತಕ ಬಾರಿಸಿದರೂ 3 ರನ್‌ಗಳಿಂದ ಕೊಹ್ಲಿ ದಾಖಲೆ ಕೈತಪ್ಪಿಸಿಕೊಂಡ ಪಂತ್IND vs ENG 5ನೇ ಟೆಸ್ಟ್: ಶತಕ ಬಾರಿಸಿದರೂ 3 ರನ್‌ಗಳಿಂದ ಕೊಹ್ಲಿ ದಾಖಲೆ ಕೈತಪ್ಪಿಸಿಕೊಂಡ ಪಂತ್

ಇತ್ತ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 84 ರನ್ ಕಲೆಹಾಕಿ ತನ್ನ ಮೊದಲ 5 ವಿಕೆಟ್‍ಗಳನ್ನು ಕಳೆದುಕೊಂಡು 332 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ. ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಇಂಗ್ಲೆಂಡ್ ಫಾಲೋ ಆನ್ ಭೀತಿಯನ್ನು ಎದುರಿಸುತ್ತಿದ್ದು, ಇನ್ನೂ ಎಷ್ಟು ರನ್ ಕಲೆಹಾಕಿದರೆ ಫಾಲೋ ಆನ್‌ನಿಂದ ಪಾರಾಗಲಿದೆ ಎಂಬುದರ ಕುರಿತಾದ ಮಾಹಿತಿ ಮುಂದೆ ಓದಿ.

ಫಾಲೋ ಆನ್‌ನಿಂದ ಪಾರಾಗಲು ಎಷ್ಟು ರನ್ ಗಳಿಸಬೇಕು?

ಫಾಲೋ ಆನ್‌ನಿಂದ ಪಾರಾಗಲು ಎಷ್ಟು ರನ್ ಗಳಿಸಬೇಕು?

ಸದ್ಯ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿ 332 ರನ್‌ಗಳ ಹಿನ್ನಡೆಯನ್ನು ಅನುಭವಿಸಿರುವ ಇಂಗ್ಲೆಂಡ್ ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನೂ 132 ರನ್ ಬಾರಿಸಲೇಬೇಕಾದ ಅಗತ್ಯವಿದೆ. ಅಂದರೆ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 216 ರನ್‌ಗಳ ಒಳಗೆ ಆಲೌಟ್ ಮಾಡಿದ್ದೇ ಆದರೆ ಇಂಗ್ಲೆಂಡ್ ತಂಡವೇ ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿ ಫಾಲೋಆನ್ ನಿಯಮವನ್ನು ಅನುಸರಿಸಲಿದೆ.

ಕಣದಲ್ಲಿದ್ದಾರೆ ಬೈರ್ ಸ್ಟೋ ಮತ್ತು ಬೆನ್ ಸ್ಟೋಕ್ಸ್

ಕಣದಲ್ಲಿದ್ದಾರೆ ಬೈರ್ ಸ್ಟೋ ಮತ್ತು ಬೆನ್ ಸ್ಟೋಕ್ಸ್

ಇನ್ನು ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರೂ ಸಹ ಎರಡನೇ ದಿನದಾಟದಂತ್ಯಕ್ಕೆ ಇಬ್ಬರು ಬಲಿಷ್ಠ ಆಟಗಾರರು ಕ್ರೀಸ್ ಕಾಯ್ದುಕೊಂಡಿರುವುದು ಆಂಗ್ಲರಿಗೆ ತುಸು ಸಮಾಧಾನಕರ ಸಂಗತಿಯಾಗಿದೆ. ಕಳೆದ ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಮಿಂಚಿದ ಜಾನಿ ಬೈರ್ ಸ್ಟೋ ಮತ್ತು ನೂತನ ನಾಯಕ ಬೆನ್ ಸ್ಟೋಕ್ಸ್ ಕಣದಲ್ಲಿರುವುದು ಇಂಗ್ಲೆಂಡ್ ಪಾಳಯದಲ್ಲಿ ಭರವಸೆ ಮೂಡಿಸಿದೆ. ಅಷ್ಟು ಮಾತ್ರವಲ್ಲದೇ ಟೀಮ್ ಇಂಡಿಯಾ ಕೂಡ ಇದೇ ರೀತಿ ಅಲ್ಪ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡು ನಂತರ ಪುಟಿದೆದ್ದದ್ದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಜಾನಿ ಬೆರಿಸ್ಟೋ ಕಣ್ಣೀರ ಕಥೆ | Oneindia Kannada
ಪಂದ್ಯ ಟೀಮ್ ಇಂಡಿಯಾ ಬೌಲಿಂಗ್ ಗೇಮ್ ಪ್ಲಾನ್ ಮೇಲೆ ನಿಂತಿದೆ

ಪಂದ್ಯ ಟೀಮ್ ಇಂಡಿಯಾ ಬೌಲಿಂಗ್ ಗೇಮ್ ಪ್ಲಾನ್ ಮೇಲೆ ನಿಂತಿದೆ

ಇನ್ನು ಎರಡನೇ ದಿನದಾಟದಂದು ಟೀಮ್ ಇಂಡಿಯಾ 5 ವಿಕೆಟ್‍ಗಳನ್ನು ಕಬಳಿಸಿದೆ. ಟೀಮ್ ಇಂಡಿಯಾ ಪರ ಬೌಲಿಂಗ್ ಮಾಡಿರುವುದು ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಮತ್ತು ಮಹಮ್ಮದ್ ಸಿರಾಜ್ ಈ 3 ಬೌಲರ್‌ಗಳು ಮಾತ್ರ. ಹೀಗೆ ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಅವರಿಗೆ ಬೌಲಿಂಗ್ ಮಾಡುವ ಅವಕಾಶವನ್ನೇ ನೀಡದ ಟೀಮ್ ಇಂಡಿಯಾ ವಿಭಿನ್ನವಾದ ಯೋಜನೆ ಹೆಣೆದಿದ್ದು, ಮೂರನೇ ದಿನದಾಟದಂದು ಆರಂಭದಲ್ಲಿ ನೂತನ ಬೌಲರ್‌ಗಳನ್ನು ಕಣಕ್ಕಿಳಿಸಿದರೆ ವಿಕೆಟ್ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

Story first published: Sunday, July 3, 2022, 13:57 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X