ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋ ರೂಟ್ ಶತಕ: ಕೊಹ್ಲಿ, ಸ್ಮಿತ್, ವಿಲಿಯಮ್ಸನ್‌ ಅನ್ನು ಹಿಂದಿಕ್ಕಿದ ಇಂಗ್ಲೆಂಡ್ ಬ್ಯಾಟರ್

Joe root

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮರುನಿಗದಿತ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್‌ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದಾರೆ. ನಾಲ್ಕನೇ ವಿಕೆಟ್‌ಗೆ ಜಾನಿ ಬೈಸ್ಟ್ರೋವ್‌ ಜೊತೆಗೆ ದ್ವಿಶತಕದ ಜೊತೆಯಾಟವಾಡುವ ಮೂಲಕ ಪ್ರಭಾವಶಾಲಿ ಪ್ರದರ್ಶನ ನೀಡಿದ್ದಾರೆ.

ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 28ನೇ ಶತಕ ದಾಖಲಿಸುವ ಮೂಲಕ ಅಬ್ಬರದ ಆಟವಾಡಿದ್ದು, ಫ್ಯಾಬ್ 4 ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಸ್ವೀವನ್ ಸ್ಮಿತ್ ಹಾಗೂ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್‌ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಜೋ ರೂಟ್ 28ನೇ ಟೆಸ್ಟ್ ಶತಕ

ಜೋ ರೂಟ್ 28ನೇ ಟೆಸ್ಟ್ ಶತಕ

ಜೋ ರೂಟ್‌ ಅಮೋಘ 28ನೇ ಟೆಸ್ಟ್ ಶತಕ ದಾಖಲಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾರ್ಡನ್ ಡೇ ಕ್ರಿಕೆಟ್‌ನ ಅದ್ಭುತ ಬ್ಯಾಟರ್ ಆಗಿ ಮುಂದುವರಿದಿದ್ದಾರೆ. 2021ರ ಆರಂಭದಿಂದಲೂ ಇದುವರೆಗೂ 11 ಶತಕ ದಾಖಲಿಸಿರುವ ಜೋ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ತಲುಪಿದ್ದಾರೆ. ಇದಲ್ಲದೆ ಕೊಹ್ಲಿ, ಸ್ಮಿತ್ ಹಾಗೂ ವಿಲಿಯಮ್ಸನ್‌ (27) ಶತಕಗಳನ್ನ ಹಿಂದಿಕ್ಕಿ ಮುನ್ನಡೆದಿದ್ದಾರೆ.

121 ಪಂದ್ಯ ಹಾಗೂ 224 ಇನ್ನಿಂಗ್ಸ್‌ನಲ್ಲಿ 18 ಬಾರಿ ಅಜೇಯರಾಗಿ ಉಳಿದಿರುವ ಜೋ ರೂಟ್ ಇದುವರೆಗೂ 10,000ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. 50ಕ್ಕೂ ಹೆಚ್ಚು ರನ್ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಜೋ ರೂಟ್ 28 ಶತಕ ಮತ್ತು 5 ದ್ವಿಶತಕ ಮತ್ತು 54 ಅರ್ಧಶತಕಗಳನ್ನ ದಾಖಲಿಸಿದ್ದಾರೆ.

ಹನುಮ ವಿಹಾರಿ ಮಾಡಿದ ಎಡವಟ್ಟು: ಐದನೇ ಟೆಸ್ಟ್‌ನಲ್ಲಿ ಗೆಲುವಿನತ್ತ ಸಾಗಿದ ಇಂಗ್ಲೆಂಡ್

2021ರಿಂದ ಕೊಹ್ಲಿ, ಸ್ಮಿತ್ ಹಾಗೂ ವಿಲಿಯಮ್ಸನ್ ಸಿಡಿಸಿದ್ದು ಒಂದೇ ಶತಕ

ಮಾರ್ಡನ್ ಡೇ ಕ್ರಿಕೆಟ್‌ನಲ್ಲಿ ಫ್ಯಾಬ್ 4 ಖ್ಯಾತಿ ವಿರಾಟ್ ಕೊಹ್ಲಿ 2021ರಿಂದ ಒಂದೇ ಒಂದು ಶತಕ ಗಳಿಸಿಲ್ಲ. ಇನ್ನು ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಹಾಗೂ ಕಿವೀಸ್‌ ಕೇನ್ ವಿಲಿಯಮ್ಸನ್‌ ಒಂದು ಶತಕವಷ್ಟೇ ದಾಖಲಿಸಿದ್ದಾರೆ. ಆದ್ರೆ ಇದೇ ಅವಧಿಯಲ್ಲಿ ಜೋ ರೂಟ್ ಬರೋಬ್ಬರಿ 11 ಶತಕವನ್ನ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಆತನನ್ನು ಹೊರಗಿಟ್ಟ ಕಾರಣಕ್ಕೆ ಭಾರತ ಬೆಲೆ ತೆರಬೇಕಾಗಿದೆ: ದ್ರಾವಿಡ್ ನಿರ್ಧಾರದ ಬಗ್ಗೆ ಕನೆರಿಯಾ ಕಿಡಿ

ಜೋ ರೂಟ್ ಮುಡಿಗೇರಿದೆ ಅನೇಕ ದಾಖಲೆ

ಜೋ ರೂಟ್ ಮುಡಿಗೇರಿದೆ ಅನೇಕ ದಾಖಲೆ

2021ರ ವರ್ಷದಲ್ಲಿ ಕೆಲವು ಅಸಾಧಾರಣ ಪ್ರದರ್ಶನ ತೋರಿದ ಜೋ ರೂಟ್‌ ಅನೇಕ ವಿಶ್ವ ದಾಖಲೆಗಳನ್ನ ಸರಿಗಟ್ಟಿದರು. ಹೀಗಾಗಿ ಅನೇಕ ಸಂಭಾವ್ಯ ಅಭ್ಯರ್ಥಿಗಳನ್ನ ಹಿಂದಿಕ್ಕಿದ ಇಂಗ್ಲೆಂಡ್ ಕ್ರಿಕೆಟ್ ನಾಯಕ ರೂಟ್ ಇತ್ತೀಚೆಗೆ ಟೆಸ್ಟ್‌ ಕ್ರಿಕೆಟ್‌ನ ಅಗ್ರ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ಜೋ ರೂಟ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ 12ನೇ ಬ್ಯಾಟರ್ ಆಗಿ ಬಡ್ತಿ ಪಡೆದಿದ್ದು, ಇಂಗ್ಲೆಂಡ್ ಪರ ಎರಡನೇ ಅತಿ ಹೆಚ್ಚು ರನ್ ಕಲೆಹಾಕಿರುವ ಬ್ಯಾಟರ್ ಆಗಿದ್ದಾರೆ. ಅಲೆಸ್ಟರ್ ಕುಕ್ 12,472 ರನ್ ಕಲೆಹಾಕುವ ಮೂಲಕ ಐದನೇ ಸ್ಥಾನ ಪಡೆದಿದ್ದಾರೆ.

ಇನ್ನು ಮೊದಲ ಮೂರು ಸ್ಥಾನವನ್ನು ಸಚಿನ್ ತೆಂಡೂಲ್ಕರ್ (15921), ರಿಕಿ ಪಾಂಟಿಂಗ್ (13378), ಜಾಕ್ವೆಸ್ ಕಾಲಿಸ್ (13289) ರನ್ ಕಲೆಹಾಕಿದ್ದು ಪ್ರಸ್ತುತ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ 13288ರನ್‌ಗಳ ಮೂಲಕ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

Story first published: Tuesday, July 5, 2022, 16:47 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X