ಸದ್ಯ ಬರ್ಮಿಂಗ್ಹ್ಯಾಮ್ ಎಡ್ಜ್ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಎರಡನೇ ದಿನದಾಟದ ಮುಕ್ತಾಯದ ಹಂತಕ್ಕೆ ಇಂಗ್ಲೆಂಡ್ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿ 5 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿ 332 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದ ನ್ಯೂಜಿಲೆಂಡ್ ವಿರುದ್ಧ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ವೈಟ್ ವಾಷ್ ಬಳಿದಿದ್ದ ಬೆನ್ ಸ್ಟೋಕ್ಸ್ ಪಡೆ ಇದೀಗ ಅದೇ ರೀತಿಯ ಪ್ರದರ್ಶನವನ್ನು ಟೀಂ ಇಂಡಿಯಾ ವಿರುದ್ಧ ತಮ್ಮದೇ ನೆಲದಲ್ಲಿ ನೀಡುವಲ್ಲಿ ಯಶಸ್ವಿಯಾಗಿಲ್ಲ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳು ಮುಕ್ತಾಯವಾದ ನಂತರ ಇಂಗ್ಲೆಂಡ್ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು, ಈ ಪಂದ್ಯದಲ್ಲಿ ಸೋಲುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ ಎಂಬ ಅಭಿಪ್ರಾಯಗಳನ್ನು ಕ್ರಿಕೆಟ್ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಅಬ್ಬರಿಸಿದ್ದ ಇಂಗ್ಲೆಂಡ್ ಟೀಮ್ ಇಂಡಿಯಾ ವಿರುದ್ಧದ ಈ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿಸುತ್ತಿರುವುದರ ಹಿಂದಿನ ಕಾರಣವೇನು ಇರಬಹುದು ಎಂಬುದರ ಕುರಿತು ಹಲವಾರು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸುತ್ತಿದ್ದು, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದ ಜಾನಿ ಬೈರ್ ಸ್ಟೋ ಟೀಮ್ ಇಂಡಿಯಾ ವಿರುದ್ಧ ನಿಧಾನಗತಿಯ ಪ್ರದರ್ಶನ ನೀಡುತ್ತಿರುವುದಕ್ಕೆ ಕಾರಣವೇನೆಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಈ ಕೆಳಕಂಡಂತೆ ತಿಳಿಸಿದ್ದಾರೆ.
ಇಂಥ ಬೌಲಿಂಗ್‌ನ್ನು ಬೈರ್ ಸ್ಟೋ ಎದುರಿಸಿರಲಿಲ್ಲ
ನ್ಯೂಜಿಲೆಂಡ್ ವಿರುದ್ಧ ವೇಗವಾಗಿ ರನ್ ಗಳಿಸಿದ್ದ ಬೈರ್ ಸ್ಟೋ ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ 47 ಎಸೆತಗಳಲ್ಲಿ 12 ರನ್ ಕಲೆಹಾಕಿ ಅಜೇಯರಾಗಿ ಉಳಿದಿದ್ದರು. ಈ ಕುರಿತಾಗಿ ಮಾತನಾಡಿದ ಇಂಗ್ಲೆಂಡ್ ಮಾಜಿ ಆಟಗಾರ ಗ್ರೇಮ್ ಸ್ವಾನ್ ಬೇರ್ ಸ್ಟೋ ಟೀಮ್ ಇಂಡಿಯಾ ರೀತಿಯ ಬಲಿಷ್ಠ ಬೌಲಿಂಗ್‌ನ್ನು ಈ ಹಿಂದೆ ಎದುರಿಸಿರಲಿಲ್ಲ ಹೀಗಾಗಿ ವೇಗದ ಬ್ಯಾಟಿಂಗ್ ನಡೆಸುತ್ತಿದ್ದರು, ಆದರೆ ಇದೀಗ ನಿಧಾನವಾಗಿ ರನ್ ಗಳಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಆಸರೆಯಾದ ಬೈರ್ ಸ್ಟೋ
ಪಂದ್ಯದ ಎರಡನೇ ದಿನದಾಟದಲ್ಲಿ ಬೈರ್ ಸ್ಟೋ ನಿಧಾನಗತಿಯ ಆಟವನ್ನಾಡಿದರೂ ಸಹ ಮೂರನೇ ದಿನದಾಟದಂದು ಅರ್ಧಶತಕವನ್ನು ಪೂರೈಸಿದರು. 81 ಎಸೆತಗಳಲ್ಲಿ ಬೈರ್ ಸ್ಟೋ 50 ರನ್ ಕಲೆ ಹಾಕಿದರು. ಮೊದಲ 64 ಎಸೆತಗಳಲ್ಲಿ 16 ರನ್ ಬಾರಿಸಿದ್ದ ಬೈರ್ ಸ್ಟೋ ನಂತರ 17 ಎಸೆತಗಳಲ್ಲಿ 34 ರನ್ ಚಚ್ಚಿದರು.
Karnataka Rain ಮುಂದಿನ ಕೆಲವು ದಿನಗಳು Orange alert | *Karnataka | OneIndia Kannada
ನ್ಯೂಜಿಲೆಂಡ್ ವಿರುದ್ಧ 77 ಎಸೆತಗಳಲ್ಲಿ ಶತಕ ಚಚ್ಚಿದ್ದ ಬೈರ್ ಸ್ಟೋ
ಇನ್ನು ಕಳೆದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಜಾನಿ ಬೈರ್ ಸ್ಟೋ 77 ಎಸೆತಗಳಲ್ಲಿ ಶತಕ ಪೂರೈಸುವುದರ ಮೂಲಕ ಇಂಗ್ಲೆಂಡ್ ಪರ ವೇಗವಾಗಿ ಟೆಸ್ಟ್ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಹಿಂದೆ ಇಂಗ್ಲೆಂಡ್‌ನ ಗಿಲ್ಬರ್ಟ್ ಜೆಸ್ಸಾಪ್ ಆಸ್ಟ್ರೇಲಿಯಾ ವಿರುದ್ಧ ಅತಿ ವೇಗದ ಟೆಸ್ಟ್ ಶತಕ ದಾಖಲಿಸಿದ್ದರು.