ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಸೋಲು; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಕುಸಿದ ಭಾರತ

IND vs ENG 5th Test; India Has Slipped Below Pakistan In the World Test Championship Table

ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ 5ನೇ ಟೆಸ್ಟ್‌ನಲ್ಲಿ ನಿಧಾನಗತಿಯ ಓವರ್‌ರೇಟ್‌ಗಾಗಿ ದಂಡ ವಿಧಿಸಲ್ಪಟ್ಟ ನಂತರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ.

ನಿಧಾನಗತಿ ಬೌಲಿಂಗ್‌ಗಾಗಿ ಭಾರತ ತಂಡಕ್ಕೆ ಪಂದ್ಯದ ಶುಲ್ಕದ ಶೇಕಡಾ 40ರಷ್ಟು ದಂಡವನ್ನು ವಿಧಿಸಿತು ಮತ್ತು ಜುಲೈ 5ರ ಮಂಗಳವಾರ ಅವರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಋತುವಿನಲ್ಲಿ 2 ಅಂಕಗಳನ್ನು ಕಳೆದುಕೊಂಡಿತು.

ಮತ್ತೆ ಕ್ರಿಕೆಟ್ ಅಂಗಳಕ್ಕಿಳಿಯಲಿದ್ದಾರೆ ಸೆಹ್ವಾಗ್, ಇರ್ಫಾನ್, ಯೂಸುಫ್; ಇಲ್ಲಿದೆ ಸಂಪೂರ್ಣ ವಿವರಮತ್ತೆ ಕ್ರಿಕೆಟ್ ಅಂಗಳಕ್ಕಿಳಿಯಲಿದ್ದಾರೆ ಸೆಹ್ವಾಗ್, ಇರ್ಫಾನ್, ಯೂಸುಫ್; ಇಲ್ಲಿದೆ ಸಂಪೂರ್ಣ ವಿವರ

2007ರ ನಂತರ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವ ಅವಕಾಶವನ್ನು ಭಾರತವು ಕಳೆದುಕೊಂಡಿತು. ಬರ್ಮಿಂಗ್‌ಹ್ಯಾಮ್‌ನಲ್ಲಿ ತಮ್ಮ ಅದ್ಭುತ ವಿಜಯದ ನಂತರ ಇಂಗ್ಲೆಂಡ್ ತಂಡ ಸರಣಿಯನ್ನು 2-2 ರೊಂದಿಗೆ ಸಮಬಲಗೊಳಿಸಿದರು.

ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಅಜೇಯ ಶತಕ

ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಅಜೇಯ ಶತಕ

ಅಂತಿಮ ಇನ್ನಿಂಗ್ಸ್‌ನಲ್ಲಿ ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ ಅವರ ಅಜೇಯ ಶತಕಗಳು ಭಾರತದ ಬೌಲಿಂಗ್ ಮೇಲೆ ಸವಾರಿ ಮಾಡುವ ಮೂಲಕ ಇಂಗ್ಲೆಂಡ್ ದಾಖಲೆಯ 378 ರನ್ ಚೇಸ್ ಮಾಡಿದರು. ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ 8ನೇ ಅತಿ ಹೆಚ್ಚು ಯಶಸ್ವಿ ಚೇಸ್‌ನಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದರು.

ಭಾರತ 2 ಅಂಕಗಳನ್ನು ಕಳೆದುಕೊಂಡ ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಏಷ್ಯಾದ ದೈತ್ಯರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದಿದೆ. ಭಾರತವು 75 ಅಂಕಗಳನ್ನು ಹೊಂದಿದ್ದರೆ (ಪಾಯಿಂಟ್ ಶೇಕಡಾ 52.08), ಪಾಕಿಸ್ತಾನದ PCT 52.38ಕ್ಕಿಂತ ಕಡಿಮೆಯಾಗಿದೆ.

IND vs ENG: ಮುಂದುವರೆದ ಎಡ್ಜ್‌ಬಾಸ್ಟನ್ ಶಾಪ; 55 ವರ್ಷಗಳಲ್ಲಿ ಒಂದೂ ಟೆಸ್ಟ್‌ ಪಂದ್ಯ ಗೆಲ್ಲದ ಭಾರತ!

132 ರನ್‌ಗಳ ಮುನ್ನಡೆ ಸಾಧಿಸಿದ್ದರೂ ಭಾರತಕ್ಕೆ ಸೋಲು

132 ರನ್‌ಗಳ ಮುನ್ನಡೆ ಸಾಧಿಸಿದ್ದರೂ ಭಾರತಕ್ಕೆ ಸೋಲು

ಗಮನಾರ್ಹವಾದ ಅಂಶವೆಂದರೆ, ಪಾಕಿಸ್ತಾನವು ಇದುವರೆಗಿನ ವರ್ಷದ ಏಕೈಕ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ (0-1) ತವರಿನಲ್ಲಿ ಸೋತಿತು. ಜುಲೈನಲ್ಲಿ ದ್ವೀಪ ರಾಷ್ಟ್ರದಲ್ಲಿ ಶ್ರೀಲಂಕಾ ವಿರುದ್ಧ 2 ಟೆಸ್ಟ್ ಸರಣಿಯನ್ನು ಎದುರಿಸುವಾಗ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ, ಭಾರತದ ಎದುರು ಮುನ್ನಡೆಯನ್ನು ವಿಸ್ತರಿಸಲು ಅವಕಾಶವನ್ನು ಹೊಂದಿರುತ್ತದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್‌ನಿಂದಾಗಿ ಸೋತಿತು. ಕಳೆದ ವರ್ಷದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಸೋತ ಫೈನಲಿಸ್ಟ್, ಇಂಗ್ಲಿಷ್ ಬ್ಯಾಟರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅವರು ಬ್ಯಾಟ್ ಮೂಲಕ ಹೆಚ್ಚು ಮಾತನಾಡುವ "ಬಾಜ್‌ಬಾಲ್' ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.

ಪಂದ್ಯ ಶುಲ್ಕದ ಶೇಕಡಾ 20ರಷ್ಟು ದಂಡ

ಪಂದ್ಯ ಶುಲ್ಕದ ಶೇಕಡಾ 20ರಷ್ಟು ದಂಡ

ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22ರ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇಕಡಾ 20ರಷ್ಟು ದಂಡ ವಿಧಿಸಲಾಗುತ್ತದೆ.

ಹೆಚ್ಚುವರಿಯಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಆಟದ ಪರಿಸ್ಥಿತಿಗಳ ಆರ್ಟಿಕಲ್ 16.11.2ರ ಪ್ರಕಾರ, ಒಂದು ತಂಡವು ಪ್ರತಿ ಓವರ್‌ಗೆ ಒಂದು ಅಂಕವನ್ನು ದಂಡ ವಿಧಿಸಲಾಗುತ್ತದೆ.

ಸಮಯ ಭತ್ಯೆಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಭಾರತವು ಎರಡು ಓವರ್‌ಗಳಲ್ಲಿ ಕಡಿಮೆಯಾದ ಕಾರಣ, ಭಾರತ ತಂಡದ ಸದಸ್ಯರಿಗೆ ಎರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳನ್ನು ಕಡಿತ ಮಾಡಲಾಯಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್ (ಜುಲೈ 5ರಂತೆ)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್ (ಜುಲೈ 5ರಂತೆ)

ಆಸ್ಟ್ರೇಲಿಯಾ - 84 ಅಂಕಗಳು.- 77.78 PCT
ದಕ್ಷಿಣ ಆಫ್ರಿಕಾ - 60 ಅಂಕಗಳು - 71.43 PCT
ಪಾಕಿಸ್ತಾನ - 44 ಅಂಕಗಳು - 52.38 PCT
ಭಾರತ - 75 ಅಂಕಗಳು - 52.98 PCT
ವೆಸ್ಟ್ ಇಂಡೀಸ್ - 54 ಅಂಕಗಳು - 50 PCT

Story first published: Wednesday, July 6, 2022, 10:20 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X