ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಟ್ಟು 53 ಟೆಸ್ಟ್ ಪಂದ್ಯಗಳಲ್ಲಿ 350+ ರನ್ ಗುರಿ ನೀಡಿದೆ ಭಾರತ; ಗೆದ್ದದ್ದು ಎಷ್ಟರಲ್ಲಿ? ಬಿದ್ದದ್ದು ಎಷ್ಟರಲ್ಲಿ?

IND vs ENG 5th test: India lost a test match for the first time while defending 350+ runs

ಕೊರೊನಾವೈರಸ್ ಕಾರಣದಿಂದಾಗಿ ಕಳೆದ ವರ್ಷದಿಂದ ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಈ ವರ್ಷ ಮರು ಆಯೋಜನೆಯಾಗಿತ್ತು. ಇದೇ ಜುಲೈ 1ರಿಂದ 5ರವರೆಗೆ ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲುಂಡಿದೆ. ಪಂದ್ಯದಲ್ಲಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ.

ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್‌ಗೆ ಸಿಗಲಿದೆ ಮತ್ತೊಂದು ಅವಕಾಶವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್‌ಗೆ ಸಿಗಲಿದೆ ಮತ್ತೊಂದು ಅವಕಾಶ

ಹೌದು, ಕಳೆದ ವರ್ಷ ಅಂತಿಮ ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟ ವೇಳೆಗೆ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿತ್ತು ಹಾಗೂ ಈ ಅಂತಿಮ ಪಂದ್ಯವನ್ನು ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ ಸರಣಿ ಟೀಮ್ ಇಂಡಿಯಾ ಕೈವಶವಾಗುತ್ತಿತ್ತು. ಆದರೆ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದ ತರುವಾಯ ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 378 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿಯೂ ಸಹ ಸೋತಿದೆ.

ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್

ಮೊದಲನೇ ಇನ್ನಿಂಗ್ಸ್‌ನಲ್ಲಿ 416 ರನ್ ಕಲೆಹಾಕಿ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಆಲ್ ಔಟ್ ಮಾಡಿದ್ದ ಟೀಮ್ ಇಂಡಿಯಾ 132 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್ ಔಟ್ ಆದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 378 ರನ್‌ಗಳ ಬೃಹತ್ ಗುರಿ ನೀಡಿತು. ಇನ್ನು ಇಲ್ಲಿಯವರೆಗೂ ಇಷ್ಟು ದೊಡ್ಡ ಮೊತ್ತದ ರನ್ ಚೇಸ್ ಮಾಡಿರದೇ ಇದ್ದ ಇಂಗ್ಲೆಂಡ್ ಈ ಮೊತ್ತವನ್ನು ಭೇದಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಬೃಹತ್ ಮೊತ್ತವನ್ನು ಕೂಡಾ ಚೇಸ್ ಮಾಡಿದ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 378 ರನ್ ಕಲೆಹಾಕಿ ಗೆಲುವಿನ ಕೇಕೆ ಹಾಕಿತು. ಹೀಗೆ ಟೀಮ್ ಇಂಡಿಯಾ 350ಕ್ಕೂ ಹೆಚ್ಚು ರನ್ ಗುರಿಯನ್ನು ನೀಡಿದ 53ನೇ ಟೆಸ್ಟ್ ಪಂದ್ಯ ಇದಾಗಿದ್ದು, ಈ ಪೈಕಿ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಎಷ್ಟು ಪಂದ್ಯಗಳಲ್ಲಿ ಸೋತಿದೆ ಎಂಬುದರ ಕುರಿತಾದ ವಿವರ ಮುಂದಿದೆ ಓದಿ.

350+ ಗುರಿ ನೀಡಿ ಗೆದ್ದದ್ದೆಷ್ಟು? ಸೋತದ್ದೆಷ್ಟು?

350+ ಗುರಿ ನೀಡಿ ಗೆದ್ದದ್ದೆಷ್ಟು? ಸೋತದ್ದೆಷ್ಟು?

ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‍ನಲ್ಲಿ ಇಲ್ಲಿಯವರೆಗೂ ಒಟ್ಟು 53 ಬಾರಿ ಎದುರಾಳಿ ತಂಡಗಳಿಗೆ 350ಕ್ಕೂ ಹೆಚ್ಚು ರನ್ ಗುರಿಯನ್ನು ನೀಡಿದೆ. ಈ ಪೈಕಿ 37 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ ಹಾಗೂ ಒಂದು ಪಂದ್ಯದಲ್ಲಿ ಮಾತ್ರ ಟೀಮ್ ಇಂಡಿಯಾ ಸೋತಿದೆ.

ಪಂದ್ಯದ ಮೂಲಕ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ

ಪಂದ್ಯದ ಮೂಲಕ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ

ಇನ್ನು ಇಂಗ್ಲೆಂಡ್ ವಿರುದ್ಧದ ಈ ಸೋಲಿನ ಮೂಲಕ ಟೀಮ್ ಇಂಡಿಯಾ ಕೆಟ್ಟ ದಾಖಲೆಯನ್ನು ಬರೆದಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 350ಕ್ಕೂ ಹೆಚ್ಚು ರನ್ ಗುರಿಯನ್ನು ನೀಡಿ ಸೋತಿದೆ. ಅದರಲ್ಲಿಯೂ ಜಸ್ಪ್ರೀತ್ ಬುಮ್ರಾ ನಾಯಕತ್ವ ನಿರ್ವಹಿಸಿದ ಮೊದಲನೇ ಪಂದ್ಯದಲ್ಲಿಯೇ ಈ ಬೇಡವಾದ ದಾಖಲೆ ಬರೆದಿದೆ.

ಈ ಬಾರಿಯೂ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಸಿಗಲಿಲ್ಲ ಗೆಲುವು

ಈ ಬಾರಿಯೂ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಸಿಗಲಿಲ್ಲ ಗೆಲುವು

ಇನ್ನು ಟೀಮ್ ಇಂಡಿಯಾ ಎಡ್ಜ್‌ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ಎಂಟನೇ ಟೆಸ್ಟ್ ಪಂದ್ಯ ಇದಾಗಿತ್ತು. ಹಾಗೂ ಈ ಕ್ರೀಡಾಂಗಣದಲ್ಲಿ ನಡೆದ ಕಳೆದ 7 ಟೆಸ್ಟ್ ಪಂದ್ಯಗಳ ಪೈಕಿ ಯಾವುದೇ ಪಂದ್ಯದಲ್ಲಿಯೂ ಗೆಲ್ಲಲಾಗದೇ ಹಿನ್ನಡೆ ಅನುಭವಿಸಿದ್ದ ಟೀಂ ಇಂಡಿಯಾ ಇದೀಗ ಎಂಟನೇ ಪಂದ್ಯದಲ್ಲಿಯೂ ಕೂಡ ಸೋತು ತನ್ನ ಕೆಟ್ಟ ದಾಖಲೆಯನ್ನು ಈ ಕ್ರೀಡಾಂಗಣದಲ್ಲಿ ಮುಂದುವರಿಸಿದೆ.

Story first published: Wednesday, July 6, 2022, 8:11 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X