ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು, ಟೀಂ ಇಂಡಿಯಾಗೆ ನೋವುಂಟು ಮಾಡಿದೆ: ಇರ್ಫಾನ್ ಪಠಾಣ್

India vs England

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಮುಖಭಂಗ ಎದುರಿಸಿತು. ಭಾರತ ನೀಡಿದ್ದ 378ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿದ ಆಂಗ್ಲರು ಅಂತಿಮ ಪಂದ್ಯ ಗೆದ್ದು ಬೀಗಿದರು.

ಆದ್ರೆ ಈ ಪಂದ್ಯದಲ್ಲಿ ಭಾರತವು ಅನುಭವಿಸಿದ ಸೋಲು ಒಪ್ಪಿಕೊಳ್ಳುವುದು ತುಂಬಾನೆ ಕಷ್ಟವಾಗಿದೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ. ಝಾಕ್ ಕ್ರಾಲಿ ಮತ್ತು ಅಲೆಕ್ಸ್ ಲೀಸ್ ನಡುವಿನ 107 ರನ್ ಜೊತೆಯಾಟದಿಂದ ಅದ್ಭುತ ಆರಂಭ ಪಡೆದ ಇಂಗ್ಲೆಂಡ್ ಕೇವಲ ಮೂರು ವಿಕೆಟ್ ಕಳೆದುಕೊಂಡು 378 ರನ್ ಬೆನ್ನತ್ತುವಲ್ಲಿ ಯಶಸ್ವಿಯಾಯಿತು.

ಜಾನಿ ಬೈಸ್ಟ್ರೋವ್-ರೂಟ್ 269ರನ್‌ಗಳ ಜೊತೆಯಾಟ

ಜಾನಿ ಬೈಸ್ಟ್ರೋವ್-ರೂಟ್ 269ರನ್‌ಗಳ ಜೊತೆಯಾಟ

ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ಶತಕ ದಾಖಲಿಸಿದ್ದ ಜಾನಿ ಬೈಸ್ಟ್ರೋವ್ ಮತ್ತು ವಿಶ್ವದ ನಂಬರ್ ಒನ್ ಬ್ಯಾಟರ್ ಜೋ ರೂಟ್‌ ಭಾರತ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ಜೋ ರೂಟ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 28 ನೇ ಶತಕ ದಾಖಲಿಸಿದ್ರೆ, ಜಾನಿ ಬೈಸ್ಟ್ರೋವ್ ಟೆಸ್ಟ್ ಕ್ರಿಕೆಟ್‌ನಲ್ಲಿ 12ನೇ ಶತಕವನ್ನ ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.

ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ಗೆಲುವಿಗೆ 119ರನ್‌ಗಳಷ್ಟೇ ಬಾಕಿ ಉಳಿದಿತ್ತು ಮತ್ತು ಏಳು ವಿಕೆಟ್‌ಗಳು ಕೈನಲ್ಲಿದ್ದವು. ಅಜೇಯ 72 ರನ್‌ಗಳೊಂದಿಗೆ ಅಂತಿಮ ದಿನದಾಟವಾಡಿದ ಬೈಸ್ಟ್ರೋವ್ 145 ಎಸೆತಗಳಲ್ಲಿ ಅಜೇಯ 114 ರನ್‌ ಕಲೆಹಾಕಿದ್ರೆ, ಜೋ ರೂಟ್ 173 ಎಸೆತಗಳಲ್ಲಿ ಅಜೇಯ 142ರನ್ ಸಿಡಿಸಿದರು.

Ind vs Eng 5th Test: ಟೀಂ ಇಂಡಿಯಾಗೆ ಹೀನಾಯ ಸೋಲು, ಸರಣಿ ಸಮಬಲ ಸಾಧಿಸಿದ ಇಂಗ್ಲೆಂಡ್‌

ಇಂಗ್ಲೆಂಡ್‌ಗೆ ಗೆಲುವು, ಭಾರತಕ್ಕೆ ಹೆಚ್ಚು ನೋವು ಎಂದ ಇರ್ಫಾನ್ ಪಠಾಣ್

ಭಾರತವು ಹೆಚ್ಚಿನ ಹೋರಾಟವನ್ನು ನೀಡಲು ವಿಫಲವಾದ ನಂತರ, ಈಗಾಗಲೇ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದ ಇರ್ಫಾನ್ ಪಠಾಣ್ ಟ್ವಿಟ್ಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

''ಇಂಗ್ಲೆಂಡ್ ತಂಡದ ಈ ಗೆಲುವು ಟೀಮ್ ಇಂಡಿಯಾವನ್ನು ನೋಯಿಸಿತು. ಏಕೆಂದರೆ ಆ ಗೆಲುವು ತುಂಬಾ ಸುಲಭವಾಗಿತ್ತು" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸೋಲು; ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಕುಸಿದ ಭಾರತ

ಸೋಲಿನ ಬಳಿಕ ತಂಡವನ್ನ ಹೊಗಳಿದ ಜಸ್ಪ್ರೀತ್ ಬುಮ್ರಾ

ಸೋಲಿನ ಬಳಿಕ ತಂಡವನ್ನ ಹೊಗಳಿದ ಜಸ್ಪ್ರೀತ್ ಬುಮ್ರಾ

ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಸೋಲಿನ ಬಳಿಕ ತಂಡದ ಕಠಿಣ ಪ್ರಯತ್ನವನ್ನ ಹೊಗಳಿದ್ದಾರೆ. ಪಂದ್ಯ ಸೋತಿರಬಹುದು, ಆದ್ರೆ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ ಎಂದು ಹೇಳಿದ್ದಾರೆ.

"ಇಫ್ಸ್ ಮತ್ತು ಬಟ್ಸ್ ಯಾವಾಗಲೂ ಒಂದು ವಿಷಯವಾಗಬಹುದು, ಆದರೆ ಕ್ರಿಕೆಟ್ ಆಟವು ಹೀಗೆಯೇ ಸಾಗುತ್ತದೆ. ಇಂಗ್ಲೆಂಡ್ ಹೋರಾಡುತ್ತಲೇ ಇತ್ತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ನಮಗಿಂತ ಉತ್ತಮವಾಗಿ ಆಡಿತು. ಎರಡೂ ತಂಡಗಳು ಉತ್ತಮ ಕ್ರಿಕೆಟ್ ಆಡಿದವು" ಎಂದು ತಮ್ಮ ಹೇಳಿಕೆಯಲ್ಲಿ ಬುಮ್ರಾ ಉಲ್ಲೇಖಿಸಿದ್ದಾರೆ.

ಇಂಗ್ಲೆಂಡ್ 378ರನ್ ಅನ್ನು ಅತ್ಯಂತ ಸುಲಭವಾಗಿ ಬೆನ್ನತ್ತಿ ದಾಖಲೆಯ ಗೆಲುವು ಪಡೆದಿದೆ. ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದು, ಸರಣಿಯಲ್ಲಿ ಸಮಬಲ ಸಾಧಿಸಿದೆ.

Story first published: Wednesday, July 6, 2022, 10:18 [IST]
Other articles published on Jul 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X