ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದು ಬುಮ್ರಾನಾ ಅಥವಾ ಯುವಿನಾ?: ಬುಮ್ರಾ ಅಬ್ಬರದ ಬ್ಯಾಟಿಂಗ್ ಕಂಡು ತಲೆ ಕೆಡಿಸಿಕೊಂಡ ತೆಂಡೂಲ್ಕರ್!

IND vs ENG 5th test: Is this Bumrah or Yuvraj Singh? Netizens hailed Bumrahs 35 runs in an over

ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಕಳೆದ ವರ್ಷ ಕೊರೋನಾವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟು ಈಗ ಮರು ಆಯೋಜನೆಯಾಗಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ನಿನ್ನೆಯಿಂದ ( ಜುಲೈ 1 ) ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆರಂಭವಾಗಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿತ್ತು. ಆದರೆ ನಂತರ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಶತಕಗಳನ್ನು ಸಿಡಿಸಿ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು.

ಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿಟೆಸ್ಟ್ ಕ್ರಿಕೆಟ್‍: ಒಂದು ಓವರ್‌ನಲ್ಲಿ ಹೆಚ್ಚು ರನ್ ಚಚ್ಚಿದ ಟಾಪ್ 10 ಬ್ಯಾಟ್ಸ್‌ಮನ್‌, ರನ್ ನೀಡಿದ ಬೌಲರ್ಸ್ ಪಟ್ಟಿ

ಇತ್ತ ಇನ್ನಿಂಗ್ಸ್‌ನ ಅಂತಿಮ ಹಂತದಲ್ಲಿ ಅಬ್ಬರಿಸಿ ಬೊಬ್ಬಿರಿದ ಜಸ್ಪ್ರೀತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಎಸೆದ ಓವರ್ ಒಂದರಲ್ಲಿ ಬರೋಬ್ಬರಿ 35 ರನ್ ದಾಖಲಿಸಿ ವಿಶ್ವ ದಾಖಲೆಯನ್ನು ಬರೆದರು. ಹೌದು, ಬುಮ್ರಾಗೆ ಸ್ಟುವರ್ಟ್ ಬ್ರಾಡ್ ಎಸೆದ ಇನ್ನಿಂಗ್ಸ್‌ನ 84ನೇ ಓವರ್‌ನಲ್ಲಿ 4, 5 ( ವೈಡ್ ಫೋರ್), 6 ( ನೋಬಾಲ್ ), 4, 4, 4, 6 ಮತ್ತು 1 ರನ್ ಹರಿದು ಬಂದವು. 5 ರನ್ ವೈಡ್ ಫೋರ್ ಮತ್ತು 1 ರನ್ ನೋಬಾಲ್ ಮೂಲಕ ಬಂದರೆ ಉಳಿದ 29 ರನ್ ಜಸ್ಪ್ರೀತ್ ಬುಮ್ರಾ ಬ್ಯಾಟ್‌ನಿಂದ ಹರಿದು ಬಂದ ರನ್ ಆಗಿದೆ.

ಈ ಮೂಲಕ ಟೆಸ್ಟ್ ಕ್ರಿಕೆಟ್‍ನ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ವಿಶ್ವ ದಾಖಲೆ ನಿರ್ಮಾಣವಾಯಿತು. ಇನ್ನು ಈ ಓವರ್‌ನಲ್ಲಿ 35 ರನ್ ನೀಡಿ ಬೇಡವಾದ ಕೆಟ್ಟ ದಾಖಲೆಗೆ ಒಳಗಾದ ಇಂಗ್ಲೆಂಡ್ ತಂಡದ ಬೌಲರ್ ಸ್ಟುವರ್ಟ್ ಬ್ರಾಡ್ ಈ ಹಿಂದೆ 2007ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯುವರಾಜ್ ಸಿಂಗ್‌ಗೆ ಬೌಲಿಂಗ್ ಮಾಡಿ ಓವರ್‌ನಲ್ಲಿ ಬರೋಬ್ಬರಿ 36 ರನ್ ನೀಡಿ ದುಬಾರಿಯಾಗಿದ್ದರು. ಹೀಗೆ ಟೀಮ್ ಇಂಡಿಯಾ ವಿರುದ್ಧ 2 ಕೆಟ್ಟ ದಾಖಲೆಯನ್ನು ಸ್ಟುವರ್ಟ್ ಬ್ರಾಡ್ ಹೊಂದಿದಂತಾಗಿದೆ. ಇದೇ ಸಮಯದಲ್ಲಿ ಜಸ್ ಪ್ರೀತ್ ಬೂಮ್ರಾ ನಿರ್ಮಿಸಿದ ಈ ವಿಶ್ವದಾಖಲೆಯ ಕುರಿತು ಹಲವಾರು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಟ್ವೀಟ್ ಹಾಗೂ ಪೋಸ್ಟ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದು, ಅವುಗಳ ಪಟ್ಟಿ ಕೆಳಕಂಡಂತಿದೆ.

ಇದು ಯುವಿನಾ ಅಥವಾ ಬುಮ್ರಾನಾ ಎಂದು ತಲೆಕೆಡಿಸಿಕೊಂಡ ಸಚಿನ್

ಇದು ಯುವಿನಾ ಅಥವಾ ಬುಮ್ರಾನಾ ಎಂದು ತಲೆಕೆಡಿಸಿಕೊಂಡ ಸಚಿನ್

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಬ್ಯಾಟಿಂಗ್ ನಡೆಸುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್ ಇದು ಜಸ್ ಪ್ರೀತ್ ಬುಮ್ರಾನಾ ಅಥವಾ ಯುವರಾಜ್ ಸಿಂಗ್‌ಆ? 2007ರ ಸನ್ನಿವೇಶ ನೆನಪಿಗೆ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಜಸ್ಪ್ರೀತ್ ಬುಮ್ರಾ ಅಬ್ಬರದ ಬ್ಯಾಟಿಂಗ್ ಕಂಡು ಸಚಿನ್ ತೆಂಡೂಲ್ಕರ್ ಅಚ್ಚರಿಗೊಳಗಾಗಿದ್ದಾರೆ.

ಯುವಿ ಮತ್ತು ಬುಮ್ರಾ ಸ್ಟುವರ್ಟ್ ಬ್ರಾಡ್‌ಗೆ ದುಸ್ವಪ್ನ ಎಂದ ಭಾರತ್ ಆರ್ಮಿ

ಯುವಿ ಮತ್ತು ಬುಮ್ರಾ ಸ್ಟುವರ್ಟ್ ಬ್ರಾಡ್‌ಗೆ ದುಸ್ವಪ್ನ ಎಂದ ಭಾರತ್ ಆರ್ಮಿ

ಜಸ್ ಪ್ರೀತ್ ಬೂಮ್ರಾ ಅಬ್ಬರದ ಬ್ಯಾಟಿಂಗ್ ಕುರಿತು ಟ್ವೀಟ್ ಮಾಡಿರುವ ಭಾರತ್ ಆರ್ಮಿ ಬುಮ್ರಾ ಮತ್ತು ಯುವರಾಜ್ ಸಿಂಗ್ ಜತೆಗಿರುವ ಚಿತ್ರವನ್ನು ಹಂಚಿಕೊಂಡು 'ಸ್ಟುವರ್ಟ್ ಬ್ರಾಡ್ ಅವರ ಕೆಟ್ಟ ದುಸ್ವಪ್ನಗಳು' ಎಂದು ಬರೆದುಕೊಂಡಿದೆ. ಈ ಮೂಲಕ ಸ್ಟುವರ್ಟ್ ಬ್ರಾಡ್ ಅವರಿಗೆ ಯುವರಾಜ್ ಸಿಂಗ್ ಮತ್ತು ಜಸ್ ಪ್ರೀತ್ ಬುಮ್ರಾ ಇಬ್ಬರೂ ಮರೆಯಲಾಗದಂತಹ ರನ್ ಚಚ್ಚಿದ್ದಾರೆ ಎಂಬುದನ್ನು ಭಾರತ್ ಆರ್ಮಿ ತಿಳಿಸಿದೆ.

ಹಳೆ ಚಟಗಳು ಬೇಗನೆ ಸಾಯುವುದಿಲ್ಲ

ಹಳೆ ಚಟಗಳು ಬೇಗನೆ ಸಾಯುವುದಿಲ್ಲ

ಸ್ಟುವರ್ಟ್ ಬ್ರಾಡ್ ಯುವರಾಜ್ ಸಿಂಗ್ ಬಳಿ 36 ರನ್ ಮತ್ತು ಜಸ್ ಪ್ರೀತ್ ಬುಮ್ರಾ ಬಳಿ 35 ರನ್ ಬಾರಿಸಿಕೊಂಡ ನಂತರ ಒಂದೇ ರೀತಿಯ ಪ್ರತಿಕ್ರಿಯೆ ನೀಡುತ್ತಿರುವ ಚಿತ್ರಗಳನ್ನು ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಹಂಚಿಕೊಂಡಿದ್ದು, ಹಳೇ ಚಟಗಳು ಸಾಯುವುದು ಕಷ್ಟ ಎಂದು ಬರೆದುಕೊಂಡು ಬ್ರಾಡ್ ಕಾಲೆಳೆದಿದ್ದಾರೆ.

Story first published: Saturday, July 2, 2022, 20:00 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X