ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng 5th Test: ಭಾರತವನ್ನ ಮುನ್ನಡೆಸಲಿರುವ ಬುಮ್ರಾ, ರೋಹಿತ್ ಶರ್ಮಾ ಔಟ್

Jasprit bumrah

ಶುಕ್ರವಾರದಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಕೋವಿಡ್-19 ಸೋಂಕಿನಿಂದ ಗುಣಮುಖರಾಗದ ಕಾರಣದಿಂದಾಗಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ತಂಡದ ನಾಯಕರಾಗಿದ್ದಾರೆ.

ಬಿಸಿಸಿಐ ಬುಮ್ರಾಗೆ ನಾಯಕತ್ವ ನೀಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬುಮ್ರಾ 35 ವರ್ಷಗಳ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ವೇಗಿಯೊಬ್ಬರು ನಾಯಕರಾಗಿದ್ದಾರೆ.

ಕಪಿಲ್ ದೇವ್ ಬಳಿಕ ಟೀಂ ಇಂಡಿಯಾ ನಾಯಕನಾದ ವೇಗಿ ಬುಮ್ರಾ

1987ರಲ್ಲಿ ಕಪಿಲ್ ದೇವ್ ಟೀಂ ಇಂಡಿಯಾ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆ ಬಳಿಕ ಟೆಸ್ಟ್ ತಂಡಕ್ಕೆ ಯಾವೊಬ್ಬ ವೇಗಿಯು ನಾಯಕರಾಗಿಲ್ಲ. ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ನಾಯಕನಾಗಿದ್ದರೂ ಸಹ ವೇಗದ ಬೌಲರ್ ಭಾರತದ ಚುಕ್ಕಾಣಿ ಹಿಡಿದಿರಲಿಲ್ಲ. ಆದ್ರೀಗ 35 ವರ್ಷಗಳ ಬಳಿಕ ವೇಗಿಗೆ ನಾಯಕತ್ವ ಸಿಕ್ಕಿದ್ದು, ಜಸ್ಪ್ರೀತ್ ಬುಮ್ರಾ ನಾಯಕರಾಗಿದ್ದಾರೆ.
ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನಾಯಕನಾಗಿದ್ದ ರಿಷಭ್ ಪಂತ್ ಉಪನಾಯಕರಾಗಿ ಆಯ್ಕೆಗೊಂಡಿದ್ದಾರೆ.

IND vs ENG: ಬಲಿಷ್ಠ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಗೆಲುವಿನ ಮೇಲೆ ಕಣ್ಣಿಟ್ಟ ಭಾರತ; ಹೇಗಿದೆ ಸಿದ್ಧತೆ?

ಭಾರತ ಸಂಭಾವ್ಯ ಪ್ಲೇಯಿಂಗ್ 11

ಭಾರತ ಸಂಭಾವ್ಯ ಪ್ಲೇಯಿಂಗ್ 11

ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್/ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ / ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ (ನಾಯಕ)

Ind vs Eng 5th Test: ಪಂದ್ಯದ ಪ್ರಿವ್ಯೂ, ಹೆಡ್‌ ಟು ಹೆಡ್, ಪ್ಲೇಯಿಂಗ್‌ 11 ಡೀಟೈಲ್ಸ್‌

ಇಂಗ್ಲೆಂಡ್ ಪ್ಲೇಯಿಂಗ್ 11

ಇಂಗ್ಲೆಂಡ್ ಪ್ಲೇಯಿಂಗ್ 11

ಐದನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಈಗಾಗಲೇ ಆಡಲಿರುವ 11 ಆಟಗಾರರ ತಂಡವನ್ನು ಘೋಷಣೆ ಮಾಡಿದೆ. ಅನುಭವಿ ಆಟಗಾರ ಜೇಮ್ಸ್ ಆಂಡರ್ಸನ್ ಮತ್ತೆ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಆಂಡರ್ಸನ್ ಆಡುವ ಬಳಗದಿಂದ ಹೊರಗುಳಿದಿದ್ದರು. ವಿಕೆಟ್ ಕೀಪರ್ ಬೆನ್‌ ಫೋಕ್ಸ್‌ ಕೋವಿಡ್ ಕಾರಣದಿಂದ ಹೊರಗುಳಿದಿದ್ದಾರೆ. ಪರಿಣಾಮ ಸ್ಯಾಮ್ ಬಿಲ್ಲಿಂಗ್ಸ್ ಗ್ಲೌಸ್‌ ತೊಡಲಿದ್ದಾರೆ.

ಇಂಗ್ಲೆಂಡ್ ತಂಡ:
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್

ಪಿಚ್ ರಿಪೋರ್ಟ್‌

ಪಿಚ್ ರಿಪೋರ್ಟ್‌

ಭಾರತ-ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಈ ಮೈದಾನವು ಸಾಮಾನ್ಯವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಮಾನವಾಗಿ ಅನುಕೂಲಕರವಾಗಿದೆ. ಆದರೆ ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. ಇದಕ್ಕೆ ಹಿಂದಿನ ದಾಖಲೆಗಳೇ ಕಾರಣ.

ಮೊದಲ ದಿನದ ಆಟ ಇಲ್ಲಿನ ವೇಗಿಗಳಿಗೆ ಉತ್ತಮ ಸ್ವಿಂಗ್ ಆಗಿತ್ತು. ಅದೇ ರೀತಿ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಸ್ವರೂಪವನ್ನು ಅರ್ಥಮಾಡಿಕೊಳ್ಳದೆ ಎಡವುತ್ತಾರೆ. ಸರಾಸರಿಯಾಗಿ, ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡವು 300+ ರನ್ ಗಳಿಸುತ್ತದೆ. 300 ರನ್ ದಾಟುವುದೊಂದೇ ಗೆಲ್ಲುವ ಅವಕಾಶ.

ಇನ್ನು ಬೌಲಿಂಗ್ ವಿಷಯದಲ್ಲಿ ಭಾರತದ ಶಕ್ತಿ ಎಂದರೆ 3 ವೇಗದ ಬೌಲರ್‌ಗಳು ಮತ್ತು 2 ಸ್ಪಿನ್ನರ್‌ಗಳು. ಆದರೆ ಈ ಮೈದಾನದಲ್ಲಿ 4 ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಬೇಕಾಗಬಹುದು. ಇಂಗ್ಲೆಂಡ್ ತಂಡ ಎಲ್ಲಾ 5 ಬೌಲರ್‌ಗಳನ್ನು ವೇಗದ ಬೌಲರ್‌ಗಳಾಗಿ ಕಣಕ್ಕಿಳಿಸಿದರೂ ಆಶ್ಚರ್ಯಪಡಬೇಕಾಗಿಲ್ಲ.

Story first published: Friday, July 1, 2022, 10:03 [IST]
Other articles published on Jul 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X