ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ಕುಸಿದಿದ್ದ ಭಾರತಕ್ಕೆ ಪಂತ್ - ಜಡೇಜಾ ಆಸರೆ; ಪಂತ್ ಅಬ್ಬರಕ್ಕೆ ಧೋನಿ ಸಾರ್ವಕಾಲಿಕ ದಾಖಲೆ ಉಡೀಸ್

IND vs ENG 5th test: Pant and Jadejas partnership rescues Team India from low scoring in 1st innings

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಂಗ್ಲರ ವಿರುದ್ಧ ಕಳೆದ ವರ್ಷದಿಂದ ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಮೊದಲನೇ ದಿನದಾಟ ಮುಕ್ತಾಯದ ಹಂತಕ್ಕೆ 7 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕಿದೆ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಆಯ್ದುಕೊಂಡು ತಮ್ಮ ಎದುರಾಳಿ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಇತ್ತ ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಶುಬ್ ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರಾ ಕಣಕ್ಕಿಳಿದರು. ಆದರೆ ಈ ಜೋಡಿ ಹೇಳಿಕೊಳ್ಳುವಂತಹ ಉತ್ತಮ ಆರಂಭವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಲಿಲ್ಲ. ನಂತರ ಕಣಕ್ಕಿಳಿದ ಹನುಮವಿಹಾರಿ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕೂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.

ಭಾರತ vs ಡರ್ಬಿಶೈರ್ ಪಂದ್ಯದ ಟಾಸ್ ವರದಿ; ದಿನೇಶ್ ಕಾರ್ತಿಕ್ ನಾಯಕತ್ವದ ತಂಡದ ಆಡುವ ಬಳಗ ಹೀಗಿದೆಭಾರತ vs ಡರ್ಬಿಶೈರ್ ಪಂದ್ಯದ ಟಾಸ್ ವರದಿ; ದಿನೇಶ್ ಕಾರ್ತಿಕ್ ನಾಯಕತ್ವದ ತಂಡದ ಆಡುವ ಬಳಗ ಹೀಗಿದೆ

ಈ ಮೂಲಕ ಟೀಮ್ ಇಂಡಿಯಾ 98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಆರನೇ ವಿಕೆಟ್‍ಗೆ ಜತೆಯಾದ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ 222 ರನ್‌ಗಳ ಜತೆಯಾಟವಾಡುವ ಮೂಲಕ ಟೀಮ್ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿತ ಕಂಡು ಮುಖಭಂಗಕ್ಕೆ ಒಳಗಾಗುವುದನ್ನು ತಪ್ಪಿಸಿದರು.

ಆರಂಭಿಕ ಆಘಾತಕ್ಕೊಳಗಾದ ಟೀಮ್ ಇಂಡಿಯಾ; ಆಸರೆಯಾದ ಪಂತ್ ಮತ್ತು ಜಡೇಜಾ

ಆರಂಭಿಕ ಆಘಾತಕ್ಕೊಳಗಾದ ಟೀಮ್ ಇಂಡಿಯಾ; ಆಸರೆಯಾದ ಪಂತ್ ಮತ್ತು ಜಡೇಜಾ

ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶುಬ್ ಮನ್ ಗಿಲ್ 17 ರನ್ ಕಲೆಹಾಕಿದರೆ ಚೇತೇಶ್ವರ್ ಪೂಜಾರ 13 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ 20, ವಿರಾಟ್ ಕೊಹ್ಲಿ 11, ಶ್ರೇಯಸ್ ಅಯ್ಯರ್ 15, ಶಾರ್ದೂಲ್ ಠಾಕೂರ್ 1 ರನ್ ಗಳಿಸಿ ಔಟ್ ಆದರು. ರಿಷಭ್ ಪಂತ್ 111 ಎಸೆತಗಳಲ್ಲಿ 146 ರನ್ ಕಲೆಹಾಕಿ ಅಬ್ಬರಿಸಿದರು ಹಾಗೂ ರವೀಂದ್ರ ಜಡೇಜಾ 163 ಎಸೆತಗಳಲ್ಲಿ ಅಜೇಯ 83 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ ಹಾಗೂ ಮೊಹಮ್ಮದ್ ಶಮಿ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದಿದ್ದಾರೆ.

ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 3 ವಿಕೆಟ್ ಪಡೆದರೆ, ಮ್ಯಾಟಿ ಪಾಟ್ಸ್ 2 ವಿಕೆಟ್ ಹಾಗೂ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದರು.

ಧೋನಿ ಸಾರ್ವಕಾಲಿಕ ದಾಖಲೆ ಮುರಿದ ರಿಷಭ್ ಪಂತ್

ಧೋನಿ ಸಾರ್ವಕಾಲಿಕ ದಾಖಲೆ ಮುರಿದ ರಿಷಭ್ ಪಂತ್

ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಆಪದ್ಬಾಂಧವನಾದ ರಿಷಭ್ ಪಂತ್ 89 ಎಸೆತಗಳಿಗೆ ಶತಕ ಪೂರೈಸುವುದರ ಮೂಲಕ ಕ್ರಿಕೆಟ್ ಇತಿಹಾಸದಲ್ಲಿಯೇ ಟೀಮ್ ಇಂಡಿಯಾ ಪರ ಅತೀ ವೇಗವಾಗಿ ಟೆಸ್ಟ್ ಶತಕ ದಾಖಲಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ದಾಖಲೆ ಈ ಹಿಂದೆ ಎಂ ಎಸ್ ಧೋನಿ ಅವರ ಹೆಸರಿನಲ್ಲಿತ್ತು. ಧೋನಿ 2006ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 93 ಎಸೆತಗಳಲ್ಲಿ ಶತಕ ಬಾರಿಸಿದ್ದರು.


ಅಷ್ಟೇ ಅಲ್ಲದೆ ರಿಷಭ್ ಪಂತ್ ಏಷ್ಯಾ ಆಚೆಗಿನ ದೇಶಗಳಲ್ಲಿ ಅತಿವೇಗವಾಗಿ ಶತಕ ಬಾರಿಸಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ವೀರೇಂದ್ರ ಸೆಹ್ವಾಗ್ 2006ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 79 ಎಸೆತಗಳಲ್ಲಿ ಶತಕ ಬಾರಿಸಿ ಏಷ್ಯಾ ಆಚೆಗಿನ ದೇಶಗಳಲ್ಲಿ ವೇಗದ ಶತಕ ಬಾರಿಸಿರುವ ಭಾರತೀಯ ಎನಿಸಿಕೊಂಡಿದ್ದರೆ, ಮೊಹಮ್ಮದ್ ಅಜರುದ್ದೀನ್ 1990ರಲ್ಲಿ ಇಂಗ್ಲೆಂಡ್ ವಿರುದ್ಧ 88 ಎಸೆತಗಳಲ್ಲಿ ಶತಕ ಪೂರೈಸಿದ್ದರು.

ಪಂತ್ ಈಸ್ ಬ್ಯಾಕ್: ಪತ್ರಕರ್ತನ ಪ್ರಶ್ನೆಗೆ ಪಂತ್ ಕೊಟ್ಟ ಉತ್ತರ ಫುಲ್ ವೈರಲ್ | Oneindia Kannada
ಮತ್ತೊಂದು ದಾಖಲೆ ಬರೆದ ರಿಷಭ್ ಪಂತ್

ಮತ್ತೊಂದು ದಾಖಲೆ ಬರೆದ ರಿಷಭ್ ಪಂತ್

ಎಂಎಸ್ ಧೋನಿ ಅವರ ಸಾರ್ವಕಾಲಿಕ ದಾಖಲೆ ಮುರಿಯುವುದರ ಜತೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗವಾಗಿ 2000 ರನ್ ಪೂರೈಸಿದ ಅತಿ ಕಿರಿಯ ವಯಸ್ಸಿನ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ರಿಷಬ್ ಪಂತ್ ಬರೆದಿದ್ದಾರೆ. ರಿಷಭ್ ಪಂತ್ 24 ವರ್ಷಕ್ಕೆ 2000 ಟೆಸ್ಟ್ ರನ್ ಪೂರೈಸಿದ ಪ್ರಥಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ರಿಷಭ್ ಪಂತ್ ಈ ಇನ್ನಿಂಗ್ಸ್‌ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಸಿಕ್ಸರ್ ಬಾರಿಸಿದ ಕಿರಿಯ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

Story first published: Saturday, July 2, 2022, 0:40 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X