ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್: ಶತಕ ಗಳಿಸಲು ತಮ್ಮ ಮನಸ್ಥಿತಿ ಬದಲಾಯಿಸಿದ್ದೇಗೆಂದು ವಿವರಿಸಿದ ಜಡೇಜಾ

IND vs ENG 5th Test: Ravindra Jadeja Explains How He Changed His Mindset To Score A Century

ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 104 ರನ್ ಗಳಿಸಿ, ಭಾರತ ಬ್ಯಾಟಿಂಗ ಲೈನ್‌ಅಪ್‌ ಅನ್ನು ಬಲಪಡಿಸಿದರು. ಕಠಿಣ ಪರಿಸ್ಥಿಯಲ್ಲಿ ಅವರ ಬ್ಯಾಟ್‌ನಿಂದ ಶತಕ ಬಂದಿದ್ದು, ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಸಹಾಯವಾಯಿತು.

IND vs ENG 5ನೇ ಟೆಸ್ಟ್: ತಮ್ಮ ದಾಖಲೆ ಮುರಿದಿದ್ದಕ್ಕೆ ಬುಮ್ರಾಗೆ ಬ್ರಿಯಾನ್ ಲಾರಾ ಹೇಳಿದ್ದೇನು?

ಶನಿವಾರದಂದು, ದಿನದ ಎರಡನೇ ಅವಧಿಯಲ್ಲಿ ರವೀಂದ್ರ ಜಡೇಜಾ ಅವರು ಭಾರತದಿಂದ ಹೊರಗೆ ತಮ್ಮ ಮೊದಲ ಟೆಸ್ಟ್ ಶತಕ ಅಮೋಘ 104 ರನ್ ಗಳಿಸಿದರು. ಮೊದಲ ದಿನದಂದು ರಿಷಭ್ ಪಂತ್ ಅವರ ಅದ್ಭುತ 146 ಪರಿಪೂರ್ಣ ಶತಕ ಗಳಿಸಿದ್ದರು. ಇವರಿಬ್ಬರ ಅತ್ಯುತ್ತಮ ಪ್ರದರ್ಶನದಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಲು ಪ್ರೇರೇಪಿಸಿತು.

ನಾನು ನನ್ನ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದೆ

ನಾನು ನನ್ನ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದೆ

"ನಾನು ನನ್ನ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದೆ, ವಿಶೇಷವಾಗಿ ಇಂಗ್ಲೆಂಡ್‌ಗೆ ಬರುವಾಗ. ನೀವು ಹಾಗೆ ತಯಾರಿ ಮಾಡಿಕೊಳ್ಳಬೇಕು ಏಕೆಂದರೆ ಇಂತಹ ಪರಿಸ್ಥಿತಿಗಳಲ್ಲಿ ನಿಮ್ಮ ಬ್ಯಾಟ್ ಅನ್ನು ಆಫ್-ಸ್ಟಂಪ್ ಹೊರಗೆ ಎಸೆಯಲು ಸಾಧ್ಯವಿಲ್ಲ. ನೀವು ಯಾವಾಗಲೂ ದೇಹಕ್ಕೆ ಹತ್ತಿರವಾಗಿ ಆಡಬೇಕು. ಹಾಗಾಗಿ ನಾನು ಅದನ್ನು ಮಾಡಲು ನೋಡುತ್ತಿದ್ದೆ," ಎಂದು ತಮ್ಮ ಶತಕ ಗಳಿಸಲು ಮನಸ್ಥಿತಿ ಬದಲಾಯಿಸಿದ್ದನ್ನು ಬಹಿರಂಗಪಡಿಸಿದರು.

ಆಫ್-ಸ್ಟಂಪ್ ಹೊರಗೆ ಆಡುವ ಅಗತ್ಯವಿಲ್ಲ

ಆಫ್-ಸ್ಟಂಪ್ ಹೊರಗೆ ಆಡುವ ಅಗತ್ಯವಿಲ್ಲ

"ನಾನು ನನ್ನ ಮನಸ್ಥಿತಿಯ ಮೇಲೆ ಕೆಲಸ ಮಾಡುತ್ತಿದ್ದೆ ಮತ್ತು ನಿನ್ನ ಬ್ಯಾಟ್ ಅನ್ನು ಆಫ್-ಸ್ಟಂಪ್ ಹೊರಗೆ ಆಡುವ ಅಗತ್ಯವಿಲ್ಲ, ಚೆಂಡು ನನ್ನ ಬಳಿಗೆ ಬರಲಿ," ಎಂದು ನನ್ನೊಳಗೆ ಮಾತನಾಡುತ್ತಿದ್ದೆ. ನಾನು ನನ್ನೊಂದಿಗೆ ಮಾತನಾಡುತ್ತಿದ್ದೆ ಮತ್ತು ಅದು ನನಗೆ ತುಂಬಾ ಸಹಾಯ ಮಾಡಿತು. ಏಕೆಂದರೆ ಇಂಗ್ಲೆಂಡ್‌ನಲ್ಲಿ ನೀವು ಕವರ್ ಡ್ರೈವ್‌ಗಳನ್ನು ಆಡಲು ಬಯಸಿದರೆ, ನೀವು ಸ್ಲಿಪ್‌ನಲ್ಲಿ ಕ್ಯಾಚ್ ಔಟ್ ಆಗುವ ಸಾಧ್ಯತೆ ಇರುತ್ತದೆ ಎಂದು ನನಗೆ ನಾನೇ ಹೇಳುತ್ತಿದ್ದೆ.

"ಆಫ್ ಸ್ಟಂಪ್‌ನ ಹೊರಗೆ ಬ್ಯಾಟ್ ಮಾಡಬೇಡಿ, ದೇಹಕ್ಕೆ ಹತ್ತಿರವಾಗಿ ಆಟವಾಡಿ," ಎಂದು ರವೀಂದ್ರ ಜಡೇಜಾ ಹೇಳಿದರು. ಮೂರನೇ ದಿನದ ಆರಂಭದ ಮೊದಲು ಪ್ರಸಾರಕರಾದ ಸ್ಕೈ ಸ್ಪೋರ್ಟ್ಸ್‌ಗಾಗಿ ರವಿಶಾಸ್ತ್ರಿ ಅವರೊಂದಿಗಿನ ಮಾತುಕತೆಯಲ್ಲಿ ಹೇಳಿದರು.

ರಿಷಭ್ ಪಂತ್ ಅವರೊಂದಿಗೆ 222 ರನ್‌ಗಳ ಜೊತೆಯಾಟ

ರಿಷಭ್ ಪಂತ್ ಅವರೊಂದಿಗೆ 222 ರನ್‌ಗಳ ಜೊತೆಯಾಟ

ಒಂದು ಹಂತದಲ್ಲಿ 98/5 ಆಗಿದ್ದ ಭಾರತಕ್ಕೆ ತೀರಾ ಅಗತ್ಯವಾಗಿದ್ದ ರನ್ ಹೆಚ್ಚಿಸುವಲ್ಲಿ ರವೀಂದ್ರ ಜಡೇಜಾ ಅವರು ರಿಷಭ್ ಪಂತ್ ಅವರೊಂದಿಗೆ 222 ರನ್‌ಗಳ ಜೊತೆಯಾಟವನ್ನು ಆಡಿದರು. ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್‌ಗೆ ಸಂವೇದನಾಶೀಲ ರೀತಿಯಲ್ಲಿ ಆಡಲು ಹೇಳಿದರು. "ಅಲ್ಲದೆ, ನಾನು ಮತ್ತು ರಿಷಭ್ ಪಂತ್ ಒಬ್ಬರಿಗೊಬ್ಬರು ಮಾತನಾಡುತ್ತಿದ್ದೆವು, ಅದು ನಮ್ಮ ವಿಕೆಟ್‌ಗೆ ಬೆಲೆಯನ್ನು ನೀಡಿತು".

ಏಕೆಂದರೆ, ನಾನು ಬ್ಯಾಟಿಂಗ್ ಮಾಡುವಾಗ ಟ್ರಿಕಿ ಸನ್ನಿವೇಶಗಳು ಇದ್ದವು ಮತ್ತು ಮಧ್ಯದಲ್ಲಿ ಪರಸ್ಪರ ಮಾತನಾಡುತ್ತಿದ್ದೆವು. ಅವನು ಎಷ್ಟು ಆಕ್ರಮಣಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಅವನು ಬೌಲರ್‌ಗಳನ್ನು ಎದುರಿಸಿ ಆಕ್ರಮಣಕಾರಿ ಆಟವಾಡುವುದನ್ನು ಪ್ರೀತಿಸುತ್ತಾನೆ. ನಿಮ್ಮ ಶಾಟ್ ಆಯ್ಕೆಯು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಪ್ರಯತ್ನಿಸಿ ಮತ್ತು ಸಂವೇದನಾಶೀಲವಾಗಿ ಆಟವಾಡಿ ಎಂದು ನಾನು ಅವರಿಗೆ ಹೇಳುತ್ತಿದ್ದೆ ಎಂದರು.

Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada
ಸುದೀರ್ಘ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೆ

ಸುದೀರ್ಘ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೆ

"ಏಕೆಂದರೆ ಕೆಲವೊಮ್ಮೆ ನೀವು ಆ ಎಲ್ಲಾ ಹೊಡೆತಗಳನ್ನು ಆಡುತ್ತಿದ್ದರೆ ಮತ್ತು ಪ್ರಯತ್ನಿಸುತ್ತಿದ್ದರೆ ನಂತರ ನೀವು ಔಟಾಗುತ್ತೀರಿ. ಹಾಗಾಗಿ, ನಾನು ಅವನನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದೆ. ನಾನು ಆರಂಭದಲ್ಲಿ ನನ್ನ ಸಮಯವನ್ನು ತೆಗೆದುಕೊಳ್ಳುತ್ತಿದ್ದೆ ಮತ್ತು ಆಡಲು ಪ್ರಯತ್ನಿಸುತ್ತಿದ್ದೆ. ಹಾಗೆ, ರಿಷಭ್ ಪಂತ್ ಇನ್ನೊಂದು ತುದಿಯಿಂದ ರನ್ ಗಳಿಸಲು ಎದುರು ನೋಡುತ್ತಿದ್ದರು ಮತ್ತು ನಾನು ತಡೆಹಿಡಿದಿದ್ದೆ. ಅವರಿಗೆ ಸ್ಟ್ಯಾಂಡ್ ನೀಡಲು ಮತ್ತು ಸುದೀರ್ಘ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೆ. ಅದು ನಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತಿತ್ತು," ಎಂದು ರವೀಂದ್ರ ಜಡೇಜಾ ತಾವು ಶತಕ ಗಳಿಸಲು ನೆರವು ನೀಡಿದ್ದು ಮತ್ತು ರಿಷಭ್ ಪಂತ್‌ಗೆ ಸಾಥ್‌ ನೀಡಿದ್ದನ್ನು ವಿವರಿಸಿದರು.

Story first published: Sunday, July 3, 2022, 19:14 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X