IND vs ENG 5ನೇ ಟೆಸ್ಟ್: ಜಡೇಜಾರೊಂದಿಗಿನ ದೊಡ್ಡ ಜೊತೆಯಾಟದ ಹಿಂದಿನ ರಹಸ್ಯ ಹಂಚಿಕೊಂಡ ಪಂತ್

ಇಂಗ್ಲೆಂಡ್ ವಿರುದ್ಧದ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಉಪ ನಾಯಕ ರಿಷಭ್ ಪಂತ್ ಅವರು ಆಲ್‌ರೌಂಡರ್ ರವೀಂದ್ರ ಜಡೇಜಾ ನಡುವಿನ 222 ರನ್‌ಗಳ ಬೃಹತ್ ಜೊತೆಯಾಟದ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದರು.

"ಸಣ್ಣ ಗುರಿಗಳನ್ನು ಹೊಂದಿಸುವುದು' ಮತ್ತು ಆ ದಿನದಂದು ಇಬ್ಬರ ನಡುವಿನ ಉತ್ತಮ ಸಂವಹನದಿಂದಾಗಿ ಉತ್ತಮ ಜೊತೆಯಾಟ ಸಾಧ್ಯವಾಯಿತು," ಎಂದು ರಿಷಭ್ ಪಂತ್ ಹೇಳಿದರು.

ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಅವರು 98/5ಕ್ಕೆ ಆರಂಭಿಕ ಆಘಾತ ಕಂಡಿದ್ದ ಭಾರತವನ್ನು 222 ರನ್‌ಗಳ ಬೃಹತ್ ಜೊತೆಯಾಟದ ಮೂಲಕ ಮೇಲೆತ್ತಿದರು. ಇಡೀ ಪಂದ್ಯವನ್ನು ತಮ್ಮ ತಲೆಯ ಮೇಲೆ ತೆಗೆದುಕೊಂಡಿದ್ದರಿಂದ ಪ್ರವಾಸಿ ತಂಡಕ್ಕೆ ಉತ್ತಮ ಮೊತ್ತ ಗಳಿಸಲು ಪ್ರಯೋಜನವಾಯಿತು. ರಿಷಭ್ ಪಂತ್ 1ನೇ ದಿನದಂದು 111 ಎಸೆತಗಳಲ್ಲಿ 146 ರನ್ ಗಳಿಸಿದರು ಮತ್ತು ಜಡೇಜಾ 2ನೇ ದಿನದಂದು ಔಟಾಗುವ ವೇಳೆಗೆ ಅವರು ಕೂಡ ಶತಕವನ್ನು ಗಳಿಸಿದ್ದರು ಮತ್ತು ಭಾರತ 400ರ ಗಡಿ ಸಮೀಪಿಸಿತ್ತು.

ಸಂವಹನವು ನಮ್ಮ ಇನ್ನಿಂಗ್ಸ್‌ನ ಅತ್ಯುತ್ತಮ ಭಾಗವಾಗಿತ್ತು

ಸಂವಹನವು ನಮ್ಮ ಇನ್ನಿಂಗ್ಸ್‌ನ ಅತ್ಯುತ್ತಮ ಭಾಗವಾಗಿತ್ತು

"ನಮ್ಮಿಬ್ಬರ ನಡುವೆ ಸಂವಹನ ಉತ್ತಮವಾಗಿತ್ತು. ನಾವು ಸಣ್ಣ-ಸಣ್ಣ ಜೊತೆಯಾಟಗಳನ್ನು ಮಾಡಲು ನಿರ್ಧರಿಸಿದ್ದೇವೆ. 20 ರನ್, 50 ರನ್ ಹೀಗೆ. ನಾವು 98/5 ರಿಂದ ನಾವು ಆಟ ಪ್ರಾರಂಭಿಸಿದಾಗ ನಾವು 150 ರನ್ ಮುಟ್ಟಲು ನಾವು ಮಾತನಾಡಿದ್ದೇವೆ. ನಂತರ ಅದನ್ನು ನಾವು ತಲುಪಿದಾಗ 175 ರನ್ ಗಳಿಸಲು ನಾವು ಮಾತನಾಡಿಕೊಂಡೆವು. ಆ ಸಂವಹನವು ನಮ್ಮ ಇನ್ನಿಂಗ್ಸ್‌ನ ಅತ್ಯುತ್ತಮ ಭಾಗವಾಗಿತ್ತು," ಎಂದು ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ರಿಷಭ್ ಪಂತ್ ಬಹಿರಂಗಪಡಿಸಿದ್ದಾರೆ.

ಈ ಮಧ್ಯೆ ಯಾರಾದರೂ ಒಬ್ಬ ಬ್ಯಾಟರ್ ಕೆಲವು ಬೌಂಡರಿ, ಸಿಕ್ಸರ್ ಬಾರಿಸಿದ ನಂತರ ಆತ್ಮವಿಶ್ವಾಸವನ್ನು ಪಡೆಯುವುದು ಸಹಜ ಎಂದು ರವೀಂದ್ರ ಜಡೇಜಾ ಹೇಳಿದರು. ನನ್ನ ಮತ್ತು ಪಂತ್ ನಡುವಿನ ಸಂವಹನವು ಅವರ ಕೆಲಸವನ್ನು ಕೂಲ್ ಆಗಿ ಮತ್ತು ಲೆಕ್ಕಾಚಾರದ ರೀತಿಯಲ್ಲಿ ಮಾಡಲು ಮಾರ್ಗಸೂಚಿಯನ್ನು ನೀಡಿತು.

2-3 ಬೌಂಡರಿಗಳನ್ನು ಹೊಡೆದ ನಂತರ ಆತ್ಮವಿಶ್ವಾಸ

2-3 ಬೌಂಡರಿಗಳನ್ನು ಹೊಡೆದ ನಂತರ ಆತ್ಮವಿಶ್ವಾಸ

"ಟೆಸ್ಟ್ ಪಂದ್ಯವೊಂದರಲ್ಲಿ ನೀವು 2-3 ಬೌಂಡರಿಗಳನ್ನು ಹೊಡೆದ ನಂತರ, ದೊಡ್ಡ ಶಾಟ್ ಹೊಡೆಯುವುದು ತೊಂದರೆಯಾಗುತ್ತದೆ ಎಂದು ನೀವು ತುಂಬಾ ವಿಶ್ವಾಸ ಹೊಂದುತ್ತೀರಿ. ಅದು ಔಟ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಾವು ನಿಜವಾಗಿಯೂ ಸಾಧ್ಯವಾದಷ್ಟು ಕಾಲ ಪಾಲುದಾರಿಕೆಯನ್ನು ಮುಂದುವರಿಸಲು ನಮ್ಮ ನಡುವೆ ಚರ್ಚೆ ನಡೆಯಿತು. ಆ ಜೊತೆಯಾಟವು ಆಟವನ್ನೇ ಬದಲಾಯಿಸಿ, 98/5 ರಿಂದ ನಾವು 416 ರನ್ ತಲುಪಿದ್ದೇವೆ," ಎಂದು ರವೀಂದ್ರ ಜಡೇಜಾ ಹೇಳಿದರು.

"ಇದು ಒಂದು ತಂಡದ ದೊಡ್ಡ ಪ್ರಯತ್ನವಾಗಿತ್ತು, ಎಲ್ಲರೂ ಸ್ಕೋರ್‌ಗೆ ಕೊಡುಗೆ ನೀಡಿದರು. ನಂತರ ಬಂದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರು ಸಹ ಪಾಲುದಾರಿಕೆಯನ್ನು ನಿರ್ಮಿಸಲು ಪ್ರಯತ್ನಿಸಿದರು."

ಬೃಹತ್ ಮೊತ್ತದ ಯೋಜನೆಗೆ ರಿಷಭ್ ಪಂತ್ ಅಂಟಿಕೊಂಡರು

ಬೃಹತ್ ಮೊತ್ತದ ಯೋಜನೆಗೆ ರಿಷಭ್ ಪಂತ್ ಅಂಟಿಕೊಂಡರು

ನಾವಿಬ್ಬರೂ ಇನ್ನಿಂಗ್ಸ್‌ನ ಮಧ್ಯದಲ್ಲಿ ಚರ್ಚಿಸಿದೆವು, ಬೃಹತ್ ಮೊತ್ತದ ಯೋಜನೆಗೆ ರಿಷಭ್ ಪಂತ್ ಹೇಗೆ ಅಂಟಿಕೊಂಡರು ಎಂಬುದರ ಕುರಿತು ಜಡೇಜಾ ಮಾತನಾಡಿದರು. ಆತ್ಮವಿಶ್ವಾಸವು ವಿಕೆಟ್ ಕೀಪರ್-ಬ್ಯಾಟರ್ ಪಂತ್‌ನ ಐತಿಹಾಸಿಕ ಇನ್ನಿಂಗ್ಸ್‌ನ ವಿಶಿಷ್ಟ ಲಕ್ಷಣವಾಗಿದೆ ಎಂದು ಹೇಳಿದರು.

"ಅವರು ನನಗೆ ಏನು ಹೇಳಿದರೂ, ಅವರು ಅದೇ ರೀತಿಯಲ್ಲಿ ಆಡಿದರು. ಅವರು ತಮ್ಮ ಹೊಡೆತಗಳ ಬಗ್ಗೆ ತುಂಬಾ ವಿಶ್ವಾಸ ಹೊಂದಿದ್ದರು. ಪ್ರತಿ ಬೌಲರ್ ವಿರುದ್ಧ ತುಂಬಾ ಶಾಂತವಾಗಿರುವುದನ್ನು ನಾನು ನೋಡಿದೆ,'' ಎಂದು ರಿಷಭ್ ಪಂತ್ ಬಗ್ಗೆ ರವೀಂದ್ರ ಜಡೇಜಾ ತಿಳಿಸಿದರು.

ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ

ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ

ಇನ್ನು ಅಂತಿಮ ಟೆಸ್ಟ್‌ ಪಂದ್ಯಕ್ಕೂ ಮುನ್ನ ವಿಶ್ವ ಚಾಂಪಿಯನ್ಸ್ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವು ಸಾಧಿಸಿ, ಸಾಕಷ್ಟು ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದ ಇಂಗ್ಲೆಂಡ್ ತಂಡ ತವರಿನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಆರಂಭಿಕ ಯಶಸ್ಸಿನ ಹೊರತಾಗಿಯೂ ಹಿನ್ನಡೆ ಅನುಭವಿಸಿದ ಬೆನ್ ಸ್ಟೋಕ್ಸ್ ಪಡೆ ಬಳಿಕ ಬ್ಯಾಟಿಂಗ್‌ನಲ್ಲಿಯೂ ನಿರಾಸೆ ಅನುಭವಿಸಿದೆ.

ಜಾನಿ ಬೈರ್‌ಸ್ಟೋವ್ ಮಾತ್ರ ಭರ್ಜರಿ ಪ್ರದರ್ಶನ ನೀಡಿದ್ದು ಶತಕ ಸಿಡಿಸಿದ್ದಾರೆ. ಆದರೂ ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳ ಉತ್ತಮ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಎಡ್ಜ್‌ಬಾಸ್ಟನ್ ಕೊನೆಯ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ 3ನೇ ದಿನದ ಅಂತ್ಯದ ವೇಳೆಗೆ ಚೇತೇಶ್ವರ್ (50*) ಮತ್ತು ರಿಷಭ್ ಪಂತ್ (30*) ಅಜೇಯರಾಗಿ ಉಳಿದಿದ್ದಾರೆ. ಇದರಿಂದಾಗಿ ಭಾರತ ತಂಡ 125 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿರುವ ಭಾರತ 257 ರನ್‌ಗಳ ಮುನ್ನಡೆ ಸಾಧಿಸಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 4, 2022, 15:23 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X