ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್: ಕೊಹ್ಲಿ ಮತ್ತೆ ಫ್ಲಾಪ್, ಪೂಜಾರ-ಪಂತ್ ಆಸರೆ; 3ನೇ ದಿನ ಭಾರತಕ್ಕೆ ಮುನ್ನಡೆ

IND vs ENG 5th test: Team India scored 125/3 in 2nd innings on day 3 and lead by 257 runs

ಕಳೆದ ವರ್ಷ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇದೀಗ ಮರು ಆಯೋಜನೆಗೊಂಡಿದ್ದು, ಕಳೆದ ಶುಕ್ರವಾರದಿಂದ ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ಜರುಗುತ್ತಿದೆ.

ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ

ನಿನ್ನೆಗೆ ( ಜುಲೈ 3 ) ಈ ಪಂದ್ಯದ ಮೂರನೇ ದಿನದಾಟ ಮುಕ್ತಾಯಗೊಂಡಿದ್ದು, ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿ 257 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.

IND vs ENG 5ನೇ ಟೆಸ್ಟ್: ಶತಕ ಗಳಿಸಲು ತಮ್ಮ ಮನಸ್ಥಿತಿ ಬದಲಾಯಿಸಿದ್ದೇಗೆಂದು ವಿವರಿಸಿದ ಜಡೇಜಾIND vs ENG 5ನೇ ಟೆಸ್ಟ್: ಶತಕ ಗಳಿಸಲು ತಮ್ಮ ಮನಸ್ಥಿತಿ ಬದಲಾಯಿಸಿದ್ದೇಗೆಂದು ವಿವರಿಸಿದ ಜಡೇಜಾ

ಸದ್ಯ ಟೀಮ್ ಇಂಡಿಯಾ ಪರ ಚೇತೇಶ್ವರ್ ಪೂಜಾರ ಹಾಗೂ ರಿಷಭ್ ಪಂತ್ ಕ್ರೀಸ್ ಕಾಯ್ದುಕೊಂಡಿದ್ದು, ನಾಲ್ಕನೇ ದಿನದಾಟದಂದು ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಚೇತೇಶ್ವರ್ ಪೂಜಾರ ಅಜೇಯ 50 ರನ್ ಕಲೆಹಾಕಿದ್ದರೆ, ಮೊದಲನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ ಶತಕ ಬಾರಿಸಿದ್ದ ರಿಷಭ್ ಪಂತ್ ಅಜೇಯ 30 ರನ್ ಬಾರಿಸಿದ್ದಾರೆ.

ಎರಡನೇ ದಿನ ಕುಸಿತ ಕಂಡಿದ್ದ ಇಂಗ್ಲೆಂಡ್; ಮೂರನೇ ದಿನ ಬೈರ್ ಸ್ಟೋವ್ ಆಸರೆ

ಎರಡನೇ ದಿನ ಕುಸಿತ ಕಂಡಿದ್ದ ಇಂಗ್ಲೆಂಡ್; ಮೂರನೇ ದಿನ ಬೈರ್ ಸ್ಟೋವ್ ಆಸರೆ

ಇನ್ನು ಎರಡನೇ ದಿನದಾಟದಂದು ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿ ಸಂಕಷ್ಟಕ್ಕೆ ಸಿಲುಕಿತ್ತು. ಹೀಗೆ ಎರಡನೇ ದಿನ ನೆಲಕಚ್ಚಿದ್ದ ಇಂಗ್ಲೆಂಡ್ ತಂಡಕ್ಕೆ ಮೂರನೇ ದಿನದಾಟದಂದು ಜಾನಿ ಬೈರ್ ಸ್ಟೋವ್ ಶತಕ ಬಾರಿಸಿ ಆಸರೆಯಾದರು. ಬೈರ್ ಸ್ಟೋವ್ 140 ಎಸೆತಗಳಲ್ಲಿ 106 ರನ್ ಕಲೆಹಾಕಿ ತಂಡ ಫಾಲೋ ಆನ್ ಸುಳಿಯಿಂದ ಪಾರಾಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇನ್ನುಳಿದಂತೆ ಬೆನ್ ಸ್ಟೋಕ್ಸ್ 25, ಸ್ಯಾಮ್ ಬಿಲ್ಲಿಂಗ್ಸ್ 36, ಸ್ಟುವರ್ಟ್ ಬ್ರಾಡ್ 1, ಮ್ಯಾಟಿ ಪಾಟ್ಸ್ 19 ಮತ್ತು ಜೇಮ್ಸ್ ಆ್ಯಂಡರ್ಸನ್ ಅಜೇಯ 6 ರನ್ ಕಲೆ ಹಾಕಿದರು. ಈ ಮೂಲಕ ಇಂಗ್ಲೆಂಡ್ 284 ರನ್ ಕಲೆಹಾಕಿ ಆಲೌಟ್ ಆಯಿತು.

ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಬಳಿಸಿದರೆ, ನಾಯಕ ಜಸ್ ಪ್ರೀತ್ ಬುಮ್ರಾ 3 ವಿಕೆಟ್, ಮೊಹಮ್ಮದ್ ಶಮಿ 2 ವಿಕೆಟ್ ಹಾಗೂ ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದುಕೊಂಡರು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ

ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ

ಇನ್ನು ಇಂಗ್ಲೆಂಡ್ ತಂಡವನ್ನು 284 ರನ್‌ಗಳಿಗೆ ಕಟ್ಟಿಹಾಕಿ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 132 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡ ಟೀಮ್ ಇಂಡಿಯಾ ಮೂರನೇ ದಿನದಾಟದಂದು ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ಟೀಮ್ ಇಂಡಿಯಾ ಪರ ಶುಬ್ ಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಆರಂಭಿಕರಾಗಿ ಕಣಕ್ಕಿಳಿದರು. ಶುಬ್ ಮನ್ ಗಿಲ್ ಕೇವಲ 4 ರನ್ ಗಳಿಸಿ ಔಟ್ ಆಗಿ ಈ ಇನ್ನಿಂಗ್ಸ್‌ನಲ್ಲೂ ನಿರಾಸೆ ಮೂಡಿಸಿದರು.ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹನುಮ ವಿಹಾರಿ 11 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 20 ರನ್ ಕಲೆಹಾಕಿ ನಿರ್ಗಮಿಸಿ ಮತ್ತೆ ಫ್ಲಾಪ್ ಆದರು. ಅತ್ತ ಗಿಲ್ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಪೂಜಾರ ದಿನದಾಟದಂತ್ಯಕ್ಕೆ 50 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ಪಂತ್ ಅಜೇಯ 30 ರನ್ ಗಳಿಸಿದ್ದಾರೆ. ಈ ಜೋಡಿ 50 ರನ್‌ಗಳ ಜತೆಯಾಟವಾಡಿ ಕ್ರೀಸ್ ಕಾಯ್ದುಕೊಂಡಿದೆ.


ಇಂಗ್ಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಜೇಮ್ಸ್ ಆ್ಯಂಡರ್ಸನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada
ಆಡುವ ಬಳಗಗಳು

ಆಡುವ ಬಳಗಗಳು

ಭಾರತ: ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ನಾಯಕ)

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

Story first published: Monday, July 4, 2022, 10:14 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X