IND vs ENG 5ನೇ ಟೆಸ್ಟ್: ಜಾನಿ ಬೈರ್‌ಸ್ಟೋವ್‌ಗೆ ಸ್ಲೆಡ್ಜಿಂಗ್; ಕೊಹ್ಲಿಯನ್ನು ಟ್ರೋಲ್ ಮಾಡಿದ ಸೆಹ್ವಾಗ್

ವೀರೇಂದ್ರ ಸೆಹ್ವಾಗ್ ಅವರು ಟ್ವಿಟರ್ ಅಥವಾ ಇನ್‌ಸ್ಟಾಗ್ರಾಮ್ ಆಗಿರಲಿ ಯಾವಾಗಲೂ ಸಕ್ರೀಯವಾಗಿರುತ್ತಾರೆ ಮತ್ತು ಅವರು ಪ್ರಚಂಡ ಹಾಸ್ಯಕ್ಕೆ ಹೆಸರುವಾಸಿಯಾದ ವ್ಯಕ್ತಿಯಾಗಿದ್ದಾರೆ. ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಯಾವಾಗಲೂ ತಮ್ಮ ತಮಾಷೆಯ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳಿಂದ ಅನೇಕರ ಗಮನವನ್ನು ಸೆಳೆಯುತ್ತಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ 3ನೇ ದಿನದಂದು ವಿರಾಟ್ ಕೊಹ್ಲಿ ಅವರು ಜಾನಿ ಬೈರ್‌ಸ್ಟೋವ್ ಅವರನ್ನು ಸ್ಲೆಡ್ಜಿಂಗ್ ಮಾಡುವುದನ್ನು ನೋಡಿದ ನಂತರ ವೀರೇಂದ್ರ ಸೆಹ್ವಾಗ್ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಇಂಗ್ಲಿಷ್ ಬ್ಯಾಟರ್‌ನೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದರು ಮತ್ತು ಬೈರ್‌ಸ್ಟೋವ್ ಪ್ರತ್ಯುತ್ತರವಾಗಿ ಭಾರತೀಯ ಬೌಲಿಂಗ್ ದಾಳಿಯನ್ನು ದಂಡಿಸಿದರು.

ಕೊಹ್ಲಿಯಿಂದ ಸ್ಲೆಡ್ಜಿಂಗ್ ನಂತರ ಜಾನಿ ಬೈರ್‌ಸ್ಟೋವ್ ಸ್ವಲ್ಪ ಕೋಪದ ಮನಸ್ಥಿತಿಯಲ್ಲಿ ಕಾಣಿಸಿಕೊಂಡರು. ಆದಾಗ್ಯೂ, ಅವರು ನಂತರ ಆ ಕೋಪವನ್ನು ಭಾರತದ ಬೌಲರ್‌ಗಳ ಮೇಲೆ ತೀರಿಸಿಕೊಂಡರು. ಬೈರ್‌ಸ್ಟೋವ್ 140 ಎಸೆತಗಳಲ್ಲಿ 106 ರನ್ ಗಳಿಸಿ ಇಂಗ್ಲೆಂಡ್ ಹಡಗು ಮುಳುಗದಂತೆ ಕಾಪಾಡಿದರು.

ಸ್ಲೆಡ್ಜಿಂಗ್ ನಂತರ ಪಂತ್ ಆಗಿ ಪರಿವರ್ತನೆ

ಸ್ಲೆಡ್ಜಿಂಗ್ ನಂತರ ಪಂತ್ ಆಗಿ ಪರಿವರ್ತನೆ

ಇಂಗ್ಲೆಂಡ್ ತಂಡ ತಮ್ಮ ನಾಯಕ ಬೆನ್ ಸ್ಟೋಕ್ಸ್ ಕಳೆದುಕೊಂಡ ಸಮಯದಲ್ಲಿ ಬೈರ್‌ಸ್ಟೋವ್ ಬ್ಯಾಟಿಂಗ್ ಮಾಡುತ್ತಿದ್ದಾಗ ಇಂಗ್ಲೆಂಡ್ 149/6 ಆಗಿತ್ತು. ಅವರ ಕೋಪದ ಪ್ರದರ್ಶನದಲ್ಲಿ ಜಾನಿ ಬೈರ್‌ಸ್ಟೋವ್ 2 ಸಿಕ್ಸರ್‌ಗಳೊಂದಿಗೆ 14 ಬೌಂಡರಿಗಳನ್ನು ಸಿಡಿಸಿದರು. ಅವರ ಪ್ರತಿದಾಳಿಯು ಇಂಗ್ಲೆಂಡ್‌ಗೆ 216 ರನ್‌ಗಳ ಗಡಿ ದಾಟಿತು, ಇದು ಫಾಲೋ-ಆನ್ ತಪ್ಪಿಸಲು ಸಹಾಯ ಮಾಡಿತು.

ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವಿಟ್ಟರ್‌ನಲ್ಲಿ, "ವಿರಾಟ್ ಕೊಹ್ಲಿಯ ಸ್ಲೆಡ್ಜಿಂಗ್‌ಗೆ ಮುನ್ನ ಜಾನಿ ಬೈರ್‌ಸ್ಟೋವ್ ಅವರ ಸ್ಟ್ರೈಕ್ ರೇಟ್: 21, ಸ್ಲೆಡ್ಜಿಂಗ್ ನಂತರ; 150. ಪೂಜಾರ ಕಿ ತರಹ್ ಖೇಲ್ ರಹೇ ಥೇ, ಕೊಹ್ಲಿ ನೆ ಪಂತ್ ಬನ್ವಾ ದಿಯಾ ಬೇವಾಜಾ ಸ್ಲೆಡ್ಜ್ ಕರ್ಕೆ (ಅವರು ಪೂಜಾರರಂತೆ ಆಡುತ್ತಿದ್ದರು, ಕೊಹ್ಲಿ ಅವರನ್ನು ಸ್ಲೆಡ್ಜಿಂಗ್ ನಂತರ ಪಂತ್ ಆಗಿ ಪರಿವರ್ತಿಸಿದರು)," ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

3ನೇ ದಿನದ ಆರಂಭದಲ್ಲಿ ಐದು ವಿಕೆಟ್‌ಗೆ 84 ರನ್‌

3ನೇ ದಿನದ ಆರಂಭದಲ್ಲಿ ಐದು ವಿಕೆಟ್‌ಗೆ 84 ರನ್‌

2ನೇ ದಿನದಂದು ಎಚ್ಚರಿಕೆಯಿಂದ ಪ್ರಾರಂಭಿಸಿದ ನಂತರ, ಇಂಗ್ಲೆಂಡ್ 3ನೇ ದಿನದಂದು ಐದು ವಿಕೆಟ್‌ಗೆ 84 ರನ್‌ಗಳ ರಾತ್ರಿಯ ಸ್ಕೋರ್‌ನಿಂದ ಪುನರಾರಂಭಿಸಿದ ನಂತರ, ಜಾನಿ ಬೈರ್‌ಸ್ಟೋವ್ ನಿಧಾನಗತಿ ಆಟಕ್ಕೆ ಹೊಂದಿಕೊಂಡಿದ್ದರು.

ವಿರಾಟ್ ಕೊಹ್ಲಿ ಬೈರ್‌ಸ್ಟೋವ್ ಅವರನ್ನು ಸ್ಲೆಡ್ಜಿಂಗ್ ಮಾಡಿದರು ಮತ್ತು ಇಬ್ಬರೂ ಬಿಸಿಯಾದ ವಿನಿಮಯದಲ್ಲಿ ತೊಡಗಿಸಿಕೊಂಡರು. ಇದು ಇಂಗ್ಲೆಂಡ್ ಬ್ಯಾಟರ್ ಕೋಪಗೊಳ್ಳುವಂತೆ ತೋರಿತು. ಕೇವಲ 119 ಎಸೆತಗಳಲ್ಲಿ ತಮ್ಮ ಸತತ ಮೂರನೇ ಶತಕವನ್ನು ಗಳಿಸಿದರು. ಬೈರ್‌ಸ್ಟೋವ್ 61 ಎಸೆತಗಳಲ್ಲಿ 13 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ವಿರಾಟ್ ಕೊಹ್ಲಿ ಅವರು ಬೈರ್‌ಸ್ಟೋವ್‌ಗೆ ತಮ್ಮ ಕ್ರೀಸ್‌ನಲ್ಲಿ ನಿಲ್ಲುವಂತೆ ಸೂಚಿಸಿದ ಕೊಹ್ಲಿ, ಅವರ ಬಳಿಗೆ ಹೋಗುತ್ತಿರುವುದನ್ನು ಕ್ಯಾಮೆರಾದಲ್ಲಿ ಕಂಡುಬಂತು.

ಇಂಗ್ಲೆಂಡ್‌ಗೆ ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್ ಆಸರೆ

ಇಂಗ್ಲೆಂಡ್‌ಗೆ ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್ ಆಸರೆ

ಪಂದ್ಯದ ಕುರಿತು ಹೇಳುವುದಾದರೆ, ಭಾರತವು 3ನೇ ದಿನದಂದು ಇಲ್ಲಿಯವರೆಗೆ ಉತ್ತಮ ಕೆಲಸ ಮಾಡಿದೆ, ಆದರೆ ಜಾನಿ ಬೈರ್‌ಸ್ಟೋವ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಅವರ ಬ್ಯಾಟಿಂಗ್ ಇಂಗ್ಲೆಂಡ್‌ಗೆ ಉತ್ತೇಜನ ನೀಡಿತು. ಐದನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ತಂಡವನ್ನು 300 ರನ್‌ಗಳ ಗಡಿ ತಲುಪಲು ಸಹಾಯವಾಯಿತು. ಮೊಹಮ್ಮದ್ ಶಮಿ 140 ಎಸೆತಗಳಲ್ಲಿ 106 ರನ್ ಗಳಿಸಿ ಬೈರ್‌ಸ್ಟೋವ್ ಔಟಾದರು, ಮೊದಲ ಸ್ಲಿಪ್‌ನಲ್ಲಿ ವಿರಾಟ್ ಕೊಹ್ಲಿ ಹಿಡಿದ ತೀಕ್ಷ್ಣವಾದ ಕ್ಯಾಚ್‌ಗೆ ಔಟಾದರು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ 4 ರನ್ ಗಳಿಸಿ ಔಟಾದರು. ಹನುಮ ವಿಹಾರಿ ಮತ್ತು ವಿರಾಟ್ ಕೊಹ್ಲಿ ಔಆಟಾಗಿದ್ದು, ಆರಂಭಿಕ ಹಿನ್ನಡೆಯಾಗಿದೆ. ಈವರೆಗೆ ಭಾರತ 84 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು, 216 ರನ್‌ಗಳ ಮುನ್ನಡೆ ಸಾಧಿಸಿದ್ದಾರೆ.

Kohli ಹಾಗು Bairstow ನಡುವೆ ಏನಿದು ಗಲಾಟೆ | *Cricket | OneIndia Kannada
ಭಾರತ vs ಇಂಗ್ಲೆಂಡ್ ಆಡು 11ರ ಬಳಗ

ಭಾರತ vs ಇಂಗ್ಲೆಂಡ್ ಆಡು 11ರ ಬಳಗ

ಭಾರತ: ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ನಾಯಕ)

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

For Quick Alerts
ALLOW NOTIFICATIONS
For Daily Alerts
Story first published: Sunday, July 3, 2022, 22:40 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X