
ಸುಂಟರಗಾಳಿ ತರ ಬ್ಯಾಟ್ ಬೀಸಿದ ಜಸ್ಪ್ರೀತ್ ಬುಮ್ರಾ
ಸ್ಟುವರ್ಟ್ ಬ್ರಾಡ್ ಮತ್ತು ಇಂಗ್ಲೆಂಡ್ ಮೇಲೆ ಸುಂಟರಗಾಳಿ ತರ ಬ್ಯಾಟ್ ಬೀಸಿದ ಜಸ್ಪ್ರೀತ್ ಬುಮ್ರಾ, 29 ರನ್ ಗಳಿಸುತ್ತಿದ್ದಂತೆಯೇ ಬ್ರಿಯಾನ್ ಲಾರಾ, ಜಾರ್ಜ್ ಬೈಲಿ ಮತ್ತು ಕೇಶವ್ ಮಹಾರಾಜ್ ಅವರ ಕೈಯಲ್ಲಿದ್ದ ಹಿಂದಿನ ದಾಖಲೆಯನ್ನು ಮೀರಿಸಿದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ನಲ್ಲಿ ದುಃಸ್ವಪ್ನವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ ನಿರ್ಮಿಸಿದರು.

16 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯ
ಜಸ್ಪ್ರೀತ್ ಬುಮ್ರಾ 16 ಎಸೆತಗಳಲ್ಲಿ 31 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ಮೊಹಮ್ಮದ್ ಸಿರಾಜ್ (2) ಅವರೊಂದಿಗೆ ಕೊನೆಯ ವಿಕೆಟ್ಗೆ 41 ರನ್ ಸೇರಿಸಿದರು. ಭಾರತ ತನ್ನ ಮೊದಲ ಇನಿಂಗ್ಸ್ ಅನ್ನು 84.5 ಓವರ್ಗಳಲ್ಲಿ 416 ರನ್ಗಳಿಗೆ ಕೊನೆಗೊಳಿಸಿತು. ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ 146 ಮತ್ತು 104 ರನ್ ಗಳಿಸಿದರು.
ಹೀಗಾಗಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ ವೆಸ್ಟ್ ಇಂಡೀಸ್ ಮಾಜಿ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾ, "ಟೆಸ್ಟ್ನಲ್ಲಿ ಒಂದೇ ಓವರ್ನಲ್ಲಿ ಅತಿ ಹೆಚ್ಚು ರನ್ಗಳ ದಾಖಲೆಯನ್ನು ಮುರಿದ ಯುವ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಅಭಿನಂದಿಸುವುದು ಚೆನ್ನಾಗಿದೆ," ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ ಕೆಲವೇ ಕ್ಷಣದಲ್ಲೇ ವೈರಲ್
ಬ್ರಿಯಾನ್ ಲಾರಾ ಅವರ ಟ್ವೀಟ್ ಶೀಘ್ರದಲ್ಲೇ ವೈರಲ್ ಆಗಿದ್ದು, ಅಭಿಮಾನಿಗಳು ಜಸ್ಪ್ರೀತ್ ಬುಮ್ರಾ ಅವರನ್ನು ಹೊಗಳಿದ ಬ್ಯಾಟಿಂಗ್ ಶ್ರೇಷ್ಠನ ಮಾತುಗಳನ್ನು ಶ್ಲಾಘಿಸಿದರು. "ಬ್ಯಾಟಿಂಗ್ ಲೆಜೆಂಡ್ ಬ್ಯಾಟಿಂಗ್ಗಾಗಿ ಬೌಲಿಂಗ್ ಲೆಜೆಂಡ್ ಅನ್ನು ಈ ಕ್ಷಣ ಪ್ರಶಂಸಿಸಿದ್ದಾರೆ ಎಂದು ಅಭಿಮಾನಿಯೊಬ್ಬರು ಬರೆದರೆ, ಇನ್ನೊಬ್ಬ ಅಭಿಮಾನಿ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಶ್ರೇಷ್ಠನ 400 ರನ್ಗಳ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಮುರಿಯುತ್ತಾರೆ," ಎಂದು ಟ್ವೀಟ್ ಮಾಡಿದ್ದಾರೆ.

ನಿಮ್ಮ 400 ರನ್ ದಾಖಲೆಯನ್ನೂ ಮುರಿಯಲಿದ್ದಾರೆ
ಭಾರತದ ವೇಗಿ ಮತ್ತು ನಾಯಕ ಜಸ್ಪ್ರೀತ್ ಬುಮ್ರಾ ಅವರು ನಿಮ್ಮ (ಬ್ರಿಯಾನ್ ಲಾರಾ) 400 ರನ್ ದಾಖಲೆಯನ್ನೂ ಮುರಿಯಲಿದ್ದಾರೆ,'' ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
ಏಪ್ರಿಲ್ 12, 2004ರಂದು ಟೆಸ್ಟ್ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲೆಯನ್ನು ಸ್ಥಾಪಿಸಲು ಇಂಗ್ಲೆಂಡ್ ವಿರುದ್ಧ ಅಜೇಯ 400 ರನ್ ಗಳಿಸಿದಾಗ ಬ್ರಿಯಾನ್ ಲಾರಾ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ಇಂದಿಗೂ ಅವರ ಹೆಸರಿನಲ್ಲಿಯೇ ಆ ದಾಖಲೆ ಉಳಿದುಕೊಂಡಿದೆ.