ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಇಬ್ಬರು ಆಟಗಾರರಿಗೆ ಸಮ: ಇಂಗ್ಲೆಂಡ್ ಕ್ರಿಕೆಟಿಗನನ್ನು ಪ್ರಶಂಸಿಸಿದ ಆಕಾಶ್ ಚೋಪ್ರ

Ind vs Eng: Aakash Chopra praises Ben stokes, says He as good as two players

ಬೆಂಗಳೂರು ಆಗಸ್ಟ್ 1: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಆರಂಭಕ್ಕೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿಯಿದೆ. ಎರಡು ಬಲಿಷ್ಠ ತಂಡಗಳ ನಡುವಿನ ಹಣಾಹಣಿಯ ಮೇಲೆ ಈಗ ವಿಶ್ವ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಅತ್ಯುತ್ತಮ ಪ್ರದರ್ಶನ ನೀಡಿಕೊಂಡು ಬರುತ್ತಿದೆ. ಅದರಲ್ಲೂ ಇಂಗ್ಲೆಂಡ್ ತಂಡವನ್ನು ಭಾರತ ತನ್ನ ತವರು ನೆಲದಲ್ಲಿ 3-1 ಅಂತರದಿಂದ ಈ ವರ್ಷಾರಂಭದಲ್ಲಿ ಮಣಿಸಿತ್ತು. ಈಗ ಇಂಗ್ಲೆಂಡ್ ತವರಿನಲ್ಲಿ ಇದೇ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲ ಮೂಡಿಸಿದೆ.

ಇನ್ನು ಈ ಸರಣಿಗೂ ಮುನ್ನ ಇಂಗ್ಲೆಂಡ್ ತಂಡದಲ್ಲಿ ಅನಿರೀಕ್ಷಿತ ಬದಲಾವಣೆಯೊಂದು ಆಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಸರಣಿಯಿಂದ ಹಿಂದಕ್ಕೆ ಸರಿದಿದ್ದಾರೆ. ಅನಿರ್ದಿಷ್ಟಾವಧಿಗೆ ಅವರು ಕ್ರಿಕೆಟ್‌ನಿಂದಲೇ ವಿಶ್ರಾಂತಿಯನ್ನು ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರ ಮಾತನಾಡಿದ್ದಾರೆ. ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ ಸರಣಿಗೆ ಅಲಭ್ಯರಾಗುತ್ತಿರುವುದು ಭಾರತದ ಪಾಲಿಗೆ ಎಷ್ಟು ಸಕಾರಾತ್ಮಕ ಸಂಗತಿ ಎಂಬುದನ್ನು ವಿವರಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!ಟೋಕಿಯೋ ಒಲಿಂಪಿಕ್ಸ್: ಬಾಕ್ಸಿಂಗ್‌ನಲ್ಲಿ ದಿಟ್ಟ ಹೋರಾಟ ನಡೆಸಿದ ಸೈನಿಕ ಸತೀಶ್!

ಭಾರತಕ್ಕೆ ಗುಡ್ ನ್ಯೂಸ್

ಭಾರತಕ್ಕೆ ಗುಡ್ ನ್ಯೂಸ್

ಬೆನ್ ಸ್ಟೋಕ್ಸ್ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗುತ್ತಿರುವುದು ಭಾರತೀಯ ಕ್ರಿಕೆಟ್ ತಂಡದ ಪಾಲಿಗೆ ಗುಡ್ ನ್ಯೂಸ್ ಎಂದು ಆಕಾಶ್ ಚೋಪ್ರ ಬಣ್ಣಿಸಿದ್ದಾರೆ. ಬೆನ್ ಸ್ಟೋಕ್ಸ್ ಅವರ ಅಲಭ್ಯತೆಯಲ್ಲಿ ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿಯಲ್ಲಿ ಸಾಕಷ್ಟು ಲಾಭ ಪಡೆಯಲಿದೆ ಎಂದಿದ್ದಾರೆ ಆಕಾಶ್ ಚೋಪ್ರ.

ಇಬ್ಬರು ಆಟಗಾರರಷ್ಟು ಸಮರ್ಥ

ಇಬ್ಬರು ಆಟಗಾರರಷ್ಟು ಸಮರ್ಥ

ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಅವರನ್ನು ಆಕಾಶ್ ಚೋಪ್ರ ಇಬ್ಬರು ಆಟಗಾರರಿಗೆ ಸಮ ಎಂದು ಬಣ್ಣಿಸಿದ್ದಾರೆ. "ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ಅಥವಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬೆನ್ ಸ್ಟೋಕ್ಸ್ ಪಂದ್ಯದ ಫಲಿತಾಂಶವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಇಂಗ್ಲೆಂಡ್ ಪಾಲಿಗೆ ವಿಕೆಟ್ ಟೇಕರ್ ಎನಿಸುತ್ತಾರೆ. ಇವುಗಳ ಜೊತೆಗೆ ಸ್ಲಿಪ್ ಫೀಲ್ಡಿಂಗ್‌ನಲ್ಲಿಯೂ ಬೆನ್ ಸ್ಟೋಕ್ಸ್ ಅತ್ಯುತ್ತಮ ಫೀಲ್ಡರ್ ಎನಿಸಿದ್ದಾರೆ" ಎಂದು ಆಕಾಶ್ ಚೋಪ್ರ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಪಾಲಿಗೆ ಬೆನ್ ಸ್ಟೋಕ್ಸ್ ಬ್ರಹ್ಮಾಸ್ತ್ರ

ಇಂಗ್ಲೆಂಡ್ ಪಾಲಿಗೆ ಬೆನ್ ಸ್ಟೋಕ್ಸ್ ಬ್ರಹ್ಮಾಸ್ತ್ರ

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಪಾಲಿಗೆ ಬೆನ್ ಸ್ಟೋಕ್ಸ್ ಬ್ರಹ್ಮಾಸ್ತ್ರವಾಗಿದ್ದಾರೆ. ಇದಕ್ಕೆ ಟೆಸ್ಟ್ ಮಾದರಿಯಲ್ಲಿ ಬೆನ್ ಸ್ಟೋಕ್ಸ್ ಅವರ ಅಂಕಿಅಂಶಗಳೆ ಸಾಕ್ಷಿ ಹೇಳುತ್ತವೆ. 71 ಟೆಸ್ಟ್ ಪಂದ್ಯಗಳನ್ನು ಆಡಿರುವ ಬೆನ್ ಸ್ಟೋಕ್ಸ್ 37.04ರ ಸರಾಸರಿಯ್ಲಲಿ 4631 ರನ್‌ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 24 ಅರ್ಧ ಶತಕ ಹಾಗೂ 10 ಶತಕ ದಾಖಲಿಸಿ ಮಿಂಚಿದ್ದಾರೆ. ಆದರೆ ಭಾರತದ ವಿರುದ್ಧದ ಸರಣಿಯಿಂದ ಅವರು ದಿಢೀರ್ ಆಗಿ ಹಿಂದಕ್ಕೆ ಸರಿದಿದ್ದಾರೆ.

ಟೆಸ್ಟ್ ಮ್ಯಾಚ್ ಬಗ್ಗೆ ಮಾತಾಡಿದ Rishabh Pant!! | Oneindia Kannada
ಅನಿರ್ಷ್ಟಾವಧಿ ವಿಶ್ರಾಂತಿ ಪಡೆದ ಬೆನ್ ಸ್ಟೋಕ್ಸ್

ಅನಿರ್ಷ್ಟಾವಧಿ ವಿಶ್ರಾಂತಿ ಪಡೆದ ಬೆನ್ ಸ್ಟೋಕ್ಸ್

ಭಾರತ ತಂಡದ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಹೆಸರಿಸಲಾಗಿದ್ದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಬೆನ್ ಸ್ಟೋಕ್ಸ್ ಕಳೆದ ಶುಕ್ರವಾರ ದಿಢೀರ್ ಆಗಿ ಸರಣಿಯಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ಕೈಬೆರಳಿನ ಗಾಯದ ಕಡೆಗೆ ಗಮನಹರಿಸುವ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ಈ ಸರಣಿ ಮಾತ್ರವಲ್ಲದೆ ಅನಿರ್ದಿಷ್ಟಾವಧಿಗೆ ಕ್ರಿಕೆಟ್‌ನಿಂದ ದೂರಕ್ಕೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದ್ದು ಆಟಗಾರನ ಬೆಂಬಲಕ್ಕೆ ನಿಂತಿದೆ. ಆದರೆ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಪಾಲಿಗೆ ಬೆನ್ ಸ್ಟೋಕ್ಸ್ ಅವರ ಈ ನಿರ್ಧಾರ ಹಿನ್ನಡೆಯುಂಟು ಮಾಡುವುದರಲ್ಲಿ ಅನುಮಾನವಿಲ್ಲ.

Story first published: Sunday, August 1, 2021, 17:22 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X