ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಅತ್ಯುತ್ತಮ ವೈಟ್‌ಬಾಲ್ ಸ್ಪಿನ್ನರ್ ಈತನೇ: ಆಕಾಶ್ ಚೋಪ್ರ ಪ್ರತಿಕ್ರಿಯೆ

Ind vs Eng: Aakash Chopra praises Yuzi Chahal said best White ball spinner of Team India

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಅದ್ಭುತ ಆಲ್‌ರೌಂಡರ್ ಆಟ ಪ್ರದರ್ಶಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತು. ಆದರೆ ಭಾರತ ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಯುಜುವೇಂದ್ರ ಚಾಹಲ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಈ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರ ಯುಜುವೇಂದ್ರ ಚಾಹಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಸದ್ಯ ಭಾರತದ ಅತ್ಯುತ್ತಮ ವೈಟ್‌ಬಾಲ್ ಆಟಗಾರ ಯುಜುವೇಂದ್ರ ಚಾಹಲ್ ಎಂದು ಆಕಾಶ್ ಚೋಪ್ರ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Ind vs Eng: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಭಾರೀ ಸೋಲು: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್Ind vs Eng: ಲಾರ್ಡ್ಸ್‌ನಲ್ಲಿ ಭಾರತಕ್ಕೆ ಭಾರೀ ಸೋಲು: ಸರಣಿ ಸಮಬಲಗೊಳಿಸಿದ ಇಂಗ್ಲೆಂಡ್

ಇಂಗ್ಲೆಂಡ್‌ಗೆ ಆಘಾತ ನೀಡಿದ್ದ ಚಾಹಲ್: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಮಿಂಚಿದ್ದರೆ ಎರಡನೇ ಏಕದಿನ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಮಿಂಚಿದ್ದರು. ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರನ್ನು ಫೆವಿಲಿಯನ್‌ಗೆ ಅಟ್ಟಿದ ಚಾಹಲ್ 47 ರನ್‌ಗಳಿಗೆ 4 ವಿಕೆಟ್ ಸಂಪಾದಿಸಿದ್ದಾರೆ. ಹಾಗಿದ್ದರೂ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 100 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದೆ.

ಅನುಮಾನವೇ ಇಲ್ಲ ಈತ ಬೆಸ್ಟ್: ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ಯುಜಿ ಚಾಹಲ್ ಅವರದ್ದು ನಿಜಕ್ಕೂ ಅದ್ಭುತವಾದ ಕಥೆ. ಭಾರತ ತಂಡದ ವೈಟ್‌ಬಾಲ್ ಮಾದರಿಯಲ್ಲಿ ಅತ್ಯುತ್ತಮ ಸ್ಪಿನ್ ಬೌಲರ್ ಅವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರನ್ನು ನೀವು ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲು ಸಾಧ್ಯವೇ ಇಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.

ಪ್ರಮುಖ ದಾಂಡಿಗರನ್ನು ಫೆವಿಲಿಯನ್‌ಗೆ ಅಟ್ಟಿದ್ದ ಚಾಹಲ್: ಎರಡನಬೇ ಏಕದಿನ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ಚಾಹಲ್ ಪ್ರಮುಖ ಆಟಗಾರರು ಕ್ರೀಸ್‌ನಲ್ಲಿ ನೆಲೆಯೂರದಂತೆ ನೋಡಿಕೊಂಡರು. ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಜಾನಿ ಬೈರ್‌ಸ್ಟೋವ್ ಅವರನ್ನು 38 ರನ್‌ಗಳಿಸಿದ್ದಾಗ ಔಟ್ ಮಾಡಿದ ಚಾಹಲ್ ನಂತರ ಜೋ ರೂಟ್, ಬೆನ್ ಸ್ಟೋಕ್ಸ್ ವಿಕೆಟ್ ಕೂಡ ಪಡೆದರು. ಬಳಿಕ ಅರ್ಧ ಶತಕದ ಜೊತೆಯಾಟ ನಿಡಿ ಮುನ್ನುಗ್ಗುತ್ತಿದ್ದ ಮೊಯೀನ್ ಅಲಿ ಹಾಗೂ ಡೇವಿಡ್ ವಿಲ್ಲಿ ಅವರನ್ನು ಬೆರ್ಪಡಿಸಿದ್ದು ಕೂಡ ಚಾಹಲ್. 47 ರನ್‌ಗಳಿಸಿದ್ದ ಅಲಿ ಚಾಹಲ್‌ಗೆ ಬಲಿಯಾದರು.

ಏಷ್ಯಾಕಪ್ 2022ರ ಆತಿಥ್ಯ ವಹಿಸುವ ಕುರಿತು ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಹೇಳಿಕೆಏಷ್ಯಾಕಪ್ 2022ರ ಆತಿಥ್ಯ ವಹಿಸುವ ಕುರಿತು ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಹೇಳಿಕೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲವಾಗಿದ್ದು ಭಾರೀ ಅಂತರದಿಂದ ಸೋಲು ಕಂಡಿದೆ. ಲಾರ್ಡ್ಸ್ ಮೈದಾನದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಇಂಗ್ಲೆಂಡ್ ತಂಡ ಭಾರತವನ್ನು 146 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 100 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್ ನೀಡಿದ್ದ 247 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಬದಿಂದಲೇ ಕಂಟುತ್ತಾ ಸಾಗಿತ್ತು. ನಂತರ ಒಂದರ ಬಳಿಕ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಭಾರತ ತಂಡಕ್ಕೆ ಉತ್ತಮ ಜೊತೆಯಾಟ ದೊರೆಯಲಿಲ್ಲ. ಅಂತಿಮವಾಗಿ ಭಾರತ 146 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

Story first published: Friday, July 15, 2022, 19:13 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X