ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್‌ನಲ್ಲಿ ಭಾರತಕ್ಕೆ ಇವರಿಂದ ಇದೆ ಭಾರೀ ಅಪಾಯ!

Ind vs Eng: Biggest Threats For India in final test against England

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯ ಶುಕ್ರವಾರ ಆರಂಭವಾಗಲಿದೆ. ಕಳೆದ ವರ್ಷ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ ಪಂದ್ಯ ಕೊರೊನವೈರಸ್ ಕಾರಣದಿಂದಾಗಿ ಮುಂಡೂಲ್ಪಟ್ಟಿದ್ದು ಈ ಬಾರಿ ಎಡ್ಜ್‌ಬಾಸ್ಟನ್‌ನಲ್ಲಿ ಆಯೋಜನೆಯಾಗುತ್ತಿದೆ. ಈ ಪಂದ್ಯ ಭಾರತ ಹಾಗೂ ಇಂಗ್ಲೆಂಡ್ ಇತ್ತಂಡಗಳ ಅಭಿಮಾನಿಗಳಿಗೂ ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನು ಭಾರತ ಹಾಗೂ ಇಂಗ್ಲೆಂಡ್ ತಂಡದಲ್ಲಿ ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಅದರಲ್ಲೂ ಎರಡೂ ತಂಡಗಳ ನಾಯಕ ಹಾಗೂ ಕೋಚ್‌ಗಳು ಬದಲಾಗಿದ್ದಾರೆ. ಇನ್ನು ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರು ಗೆಲುವು ಸಾಧಿಸಿ ಆತ್ಮವಿಶ್ವಾಸದೊಂದಿಗೆ ಭಾರತದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದರೆ ಭಾರತ ತಂಡ ಒಂದು ಅಭ್ಯಾಸ ಪಂದ್ಯದಲ್ಲಿ ಮಾತ್ರವೇ ಆಡಿದೆ. ಅಲ್ಲದೆ ತಂಡದ ನಾಯಕ ರೋಹಿತ್ ಶರ್ಮಾ ಕೋವಿಡ್‌ಗೆ ತುತ್ತಾಗಿರುವುದು ಕೂಡ ತಂಡಕ್ಕೆ ಹಿನ್ನಡೆಯುಂಟು ಮಾಡಿದೆ. ಹೀಗಾಗಿ ಆತಿಥೆಯ ಇಂಗ್ಲೆಂಡ್ ತಂಡ ಪಂದ್ಯಕ್ಕೂ ಮುನ್ನ ಸಹಜವಾಗಿಯೇ ಫೆವರೀಟ್ ಎನಿಸಿಕೊಂಡಿದೆ.

IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!

ಇನ್ನು ಅಂತಿಮ ಪಂದ್ಯದಲ್ಲಿ ಭಾರತ ತಂಡಕ್ಕೆ ಅಪಾಯಕಾರಿಯಾಗಬಲ್ಲ ಇಂಗ್ಲೆಂಡ್ ಆಟಗಾರರು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ. ಮುಂದೆ ಓದಿ..

ಅನುಭವಿ ಬೌಲಿಂಗ್ ಜೋಡಿ ಆಂಡರ್ಸನ್- ಬ್ರಾಡ್

ಅನುಭವಿ ಬೌಲಿಂಗ್ ಜೋಡಿ ಆಂಡರ್ಸನ್- ಬ್ರಾಡ್

ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಜೋಡಿ ವಿಶ್ವದ ಬಲಿಷ್ಠ ದಾಂಡಿಗರ ವಿರುದ್ಧವೂ ಅತ್ಯಂತ ಯಶಸ್ಸು ಸಾಧಿಸಿದ ಬೌಲಿಂಗ್ ಜೋಡಿ. ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ಅಂತ್ಯವಾದ ಟೆಸ್ಟ್‌ನ;ಲ್ಲಿ ಬ್ರಾಡ್ 12 ವಿಕೆಟ್ ಕಿತ್ತು ಮಿಂಚಿದ್ದಾರೆ. ಇನ್ನು ಜೇಮ್ಸ್ ಆಂಡರ್ಸನ್ ಎಂದಿನಂತೆ ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿ ಮುಂದುವರಿದಿದ್ದಾರೆ. ಅದರಲ್ಲೂ ಭಾರತದ ಪ್ರಮುಖ ದಾಂಡಿಗ ವಿರಾಟ್ ಕೊಹ್ಲಿ ವಿರುದ್ಧ ಆಂಡರ್ಸನ್ ಸಾಕಷ್ಟು ಯಶಸ್ಸು ಸಾಧಿಸಿದ್ದು ಈ ಪಂದ್ಯದಲ್ಲಿಯೂ ಈ ಇಬ್ಬರ ನಡುವಿನ ಮುಖಾಮುಖಿ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಕಳೆದ ವರ್ಷ ನಡೆದ ಈ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡು ಬಾರಿ ಕೊಹ್ಲಿ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ತಂಡದ ಮತ್ತೋರ್ವ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಬಾರಿ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಅದ್ಭುತ ಫಾರ್ಮ್‌ನಲ್ಲಿರುವ ಜೋ ರೂಟ್

ಅದ್ಭುತ ಫಾರ್ಮ್‌ನಲ್ಲಿರುವ ಜೋ ರೂಟ್

ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವ ತ್ಯಜಿಸಿದ ಬಳಿಕವೂ ಜೋ ರೂಟ್ ಅದ್ಭುತ ಫಾರ್ಮ್ ಮುಂದುವರಿದಿದೆ. ನಾಯಕತ್ವ ತ್ಯಜಿಸಿದ ಬಳಿಕ ರೂಟ್ ಮತ್ತಷ್ಟು ಅಪಾಯಕಾರಿಯಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೂಟ್ 396 ರನ್ ಗಳಿಸಿದ್ದು ಇದರಲ್ಲಿ ಎರಡು ಶತಕ ಸೇರಿದೆ. ಈ ಮೂಲಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲ ದಾಟಿ ಮುನ್ನಡೆದಿದ್ದಾರೆ. ಇನ್ನು 2022ರಲ್ಲಿ ಜೋ ರೂಟ್ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು 4 ಶತಕ ಸಿಡಿಸಿದ್ದಾರೆ. ಈ ವರ್ಷ 53.85ರ ಸರಾಸರಿಯಲ್ಲಿ 754 ರನ್‌ಗಳಿಸಿದ್ದಾರೆ ಜೋ ರೂಟ್. ಇನ್ನು ಕಳೆದ ವರ್ಷ ಭಾರತ ವಿರುದ್ಧದ ಸರಣಿ ಮೊದಲ ನಾಲ್ಕು ಪಂದ್ಯಗಳಲ್ಲಿಯೂ ರೂಟ್ ಅದ್ಭುತ ಪ್ರದರ್ಶನ ನೀಡಿದ್ದು ಈ 4 ಪಂದ್ಯಗಳಲ್ಲಿ 564 ರನ್‌ಗಳಸಿದ್ದಾರೆ. ಜೋ ರೂಟ್ ವಿಕೆಟ್ ಪಡೆಯಲು ಭಾರತೀಯ ಬೌಲರ್‌ಗಳು ಕೂಡ ಸಾಕಷ್ಟು ಪರದಾಡಿದ್ದಾರೆ.

ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್

ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕಿರುವ ಮತ್ತೊಂದು ಅಪಾಯವೆಂದರೆ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್ ಜೋಡಿ. ಈ ಇಬ್ಬರು ಆಟಗಾರರು ಕೂಡ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಇಬ್ಬರು ಕೂಡ ಟೆಸ್ಟ್ ಪಂದ್ಯವನ್ನು ಟಿ20 ಮಾದರಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿಯನ್ನು ಕಂಗೆಡಿಸಬಲ್ಲ ಆಟಗಾರರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ T20 ಪಂದ್ಯಕ್ಕೂ ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್!ಕೊಹ್ಲಿ,ಬುಮ್ರಾ,ರೋಹಿತ್ ಔಟ್ | *Cricket
ಅಪಾಯಕಾರಿ ಫಾರ್ಮ್‌ನಲ್ಲಿದ್ದಾರೆ ಬೈರ್‌ಸ್ಟೋವ್

ಅಪಾಯಕಾರಿ ಫಾರ್ಮ್‌ನಲ್ಲಿದ್ದಾರೆ ಬೈರ್‌ಸ್ಟೋವ್

ನ್ಯೂಜಿಲೆಂಡ್ ವಿರುದ್ಧ ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ 121 ಎಸೆತಗಳಲ್ಲಿ 179 ರನ್‌ಗಳ ಜೊತೆಯಾಟದ ಮೂಲಕ ಎದುರಾಳಿಗೆ ಆಘಾತ ನೀಡಿದರು. ಅದರಲ್ಲೂ ಬೈರ್‌ಸ್ಟೋವ್ ಕಿವೀಸ್ ವಿರುದ್ಧದ ಸಂಪೂರ್ಣ ಸರಣಿಯಲ್ಲಿ ಸ್ಪೋಟಕವಾಗಿ ಬ್ಯಾಟಿಂಗ್ ಮಾಡಿದ್ದು 120ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅಲ್ಲದೆ ಮೂರು ಪಂದ್ಯಗಳಲ್ಲಿ ಎರಡು ಭರ್ಜರಿ ಶತಕ ಕೂಡ ಸಿಡಿಸಿದ್ದಾರೆ.

Story first published: Thursday, June 30, 2022, 18:19 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X