ಆಂಗ್ಲರಿಗೆ 5ನೇ ಟೆಸ್ಟ್‌ಗಿಂತ ಬರಬೇಕಾಗಿರುವ ಆ ದುಡ್ಡೇ ಹೆಚ್ಚಾಯ್ತು; ಕಿಡಿಕಾರಿದ ಮಾಜಿ ಕ್ರಿಕೆಟಿಗ

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ನಿಖರವಾದ ಫಲಿತಾಂಶ ದೊರಕದೇ ಅಂತ್ಯವಾಗಿದೆ. ಈ 5 ಪಂದ್ಯಗಳ ಟೆಸ್ಟ್ ಸರಣಿಯ 4 ಪಂದ್ಯಗಳು ರದ್ದಾಗದೇ ಯಶಸ್ವಿಯಾಗಿ ನಡೆದವು. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತು, ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್, ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಹಾಗೂ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಯಾವುದೇ ಅಡಚಣೆಗಳಿಲ್ಲದೆ ನಡೆದವು. ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಮಳೆಯಿಂದ ರದ್ದಾಗಿದ್ದು ಬಿಟ್ಟರೆ ನಂತರ ನಡೆದ ಮೂರೂ ಪಂದ್ಯಗಳು ಸಹ ಯಶಸ್ವಿಯಾದವು.

ಮ್ಯಾಂಚೆಸ್ಟರ್ ಪಂದ್ಯ ರದ್ದುಗೊಳಿಸುವ ಮುನ್ನ ಕೊಹ್ಲಿ ಮಾಡಿದ್ದ ಈ ಮನವಿಯನ್ನು ತಿರಸ್ಕರಿಸಿತ್ತು ಇಂಗ್ಲೆಂಡ್!ಮ್ಯಾಂಚೆಸ್ಟರ್ ಪಂದ್ಯ ರದ್ದುಗೊಳಿಸುವ ಮುನ್ನ ಕೊಹ್ಲಿ ಮಾಡಿದ್ದ ಈ ಮನವಿಯನ್ನು ತಿರಸ್ಕರಿಸಿತ್ತು ಇಂಗ್ಲೆಂಡ್!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ 4 ಪಂದ್ಯಗಳು ಮುಗಿದ ನಂತರ ಟೀಮ್ ಇಂಡಿಯಾ 2-1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿತ್ತು. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಸರಣಿಯನ್ನು ಕೈವಶ ಮಾಡಿಕೊಳ್ಳುತ್ತಾ ಅಥವಾ ಇಂಗ್ಲೆಂಡ್ ಜಯ ಸಾಧಿಸುವುದರ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳುತ್ತಾ ಎಂಬ ಕುತೂಹಲ ಕ್ರಿಕೆಟ್ ಜಗತ್ತಿನಲ್ಲಿ ಸೃಷ್ಟಿಯಾಗಿತ್ತು. ಆದರೆ ದೊಡ್ಡ ಮಟ್ಟದ ಕುತೂಹಲ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಅಂತಿಮ ಟೆಸ್ಟ್ ಪಂದ್ಯ ಭಾರತ ತಂಡದ ಸಿಬ್ಬಂದಿ ವರ್ಗದವರಲ್ಲಿ ಕೊರೋನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣ ರದ್ದಾಗಿ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರವನ್ನುಂಟು ಮಾಡಿತು.

ಈ ಕಳಪೆ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲು ಆಗುವುದಿಲ್ಲ ಎಂದು ಕೊಂಕು ನುಡಿದ ಶೋಯೆಬ್ ಅಖ್ತರ್ಈ ಕಳಪೆ ತಂಡ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲಲು ಆಗುವುದಿಲ್ಲ ಎಂದು ಕೊಂಕು ನುಡಿದ ಶೋಯೆಬ್ ಅಖ್ತರ್

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ ರದ್ದಾಗಿದ್ದು ಈ ಪಂದ್ಯವನ್ನು ಮುಂದಿನ ವರ್ಷ ಭಾರತ ಸೀಮಿತ ಓವರ್‌ಗಳ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಾಗ ಪುನಃ ನಡೆಸಲಾಗುವುದು ಎಂಬ ಸುದ್ದಿಗಳು ಸಹ ಹೆಚ್ಚಾಗಿ ಹರಿದಾಡಿದವು. ಹೀಗೆ ರದ್ದಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಕುರಿತು ಸಾಕಷ್ಟು ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾ ಪಂಡಿತರು ತಮ್ಮ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ಮಾತನಾಡಿದ್ದು ಇಂಗ್ಲೆಂಡ್ ತಂಡದ ವಿರುದ್ಧ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಇಂಗ್ಲೆಂಡ್ ರದ್ದಾದ ಪಂದ್ಯದ ಕುರಿತು ಯೋಚನೆಯನ್ನು ಕೂಡ ಮಾಡಿಲ್ಲ

ಇಂಗ್ಲೆಂಡ್ ರದ್ದಾದ ಪಂದ್ಯದ ಕುರಿತು ಯೋಚನೆಯನ್ನು ಕೂಡ ಮಾಡಿಲ್ಲ

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಇಂಗ್ಲೆಂಡ್ ತಂಡದ ವಿರುದ್ಧ ಕಿಡಿಕಾರಿದ್ದು ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅತಿಮುಖ್ಯವಾದ ಟೆಸ್ಟ್ ಪಂದ್ಯ ರದ್ದಾದರೂ ಸಹ ಇಂಗ್ಲೆಂಡ್ ಯಾವುದೇ ರೀತಿಯಲ್ಲೂ ಇದರ ಕುರಿತು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಪಂದ್ಯಕ್ಕಿಂತ ವಿಮೆಯ ಹಣವೇ ಹೆಚ್ಚಾಯ್ತು

ಪಂದ್ಯಕ್ಕಿಂತ ವಿಮೆಯ ಹಣವೇ ಹೆಚ್ಚಾಯ್ತು

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯ ಟೆಸ್ಟ್ ಆರಂಭಗೊಳ್ಳದೇ ಸ್ಥಗಿತಗೊಂಡ ಬಳಿಕ ಇಂಗ್ಲೆಂಡ್ ರದ್ದಾದ ಪಂದ್ಯದಿಂದ ಉಂಟಾಗಿರುವ ನಷ್ಟವನ್ನು ತುಂಬಲು ವಿಮೆಯ ಹಣ ಪಡೆಯಲು ಪ್ರಯತ್ನಿಸುತ್ತಿದೆಯೇ ಹೊರತು ಪುನಃ ಪಂದ್ಯವನ್ನು ನಡೆಸುವ ಯಾವುದೇ ಚಿಂತನೆಯನ್ನೂ ಇಟ್ಟುಕೊಂಡಿಲ್ಲ ಎಂದು ಸಲ್ಮಾನ್ ಬಟ್ ಕಿಡಿಕಾರಿದರು.

ಅಧಿವೇಶನಕ್ಕೆ ಚಕ್ಕಡಿ ಗಾಡಿಯಲ್ಲಿ ಬಂದ ಕಾಂಗ್ರೆಸ್‌ ನಾಯಕರು.. | Oneindia Kannada
ಸರಣಿ ಮುಂದುವರಿಸಲು ಇಂಗ್ಲೆಂಡ್‌ಗೆ ಇಷ್ಟವಿಲ್ಲ

ಸರಣಿ ಮುಂದುವರಿಸಲು ಇಂಗ್ಲೆಂಡ್‌ಗೆ ಇಷ್ಟವಿಲ್ಲ

ಐದನೇ ಟೆಸ್ಟ್ ಪಂದ್ಯದ ಕುರಿತು ಯಾವುದೇ ಆಸಕ್ತಿಯನ್ನು ತೋರದ ಇಂಗ್ಲೆಂಡ್ ವಿರುದ್ಧ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಇಂಗ್ಲೆಂಡ್ ತಂಡಕ್ಕೆ ರದ್ದಾಗಿರುವ ಪಂದ್ಯವನ್ನು ಆಡಿ ಸರಣಿಯಲ್ಲಿ ಸಮಬಲ ಸಾಧಿಸುವ ಯಾವುದೇ ಯೋಜನೆಯಿಲ್ಲ, ಇಂಗ್ಲೆಂಡ್‌ನ ಯಾವುದೇ ಆಟಗಾರರಾಗಲಿ ಅಥವಾ ತರಬೇತುದಾರರಾಗಲಿ ರದ್ದಾಗಿರುವ ಪಂದ್ಯವನ್ನು ಮುಂದುವರೆಸಿ ಸರಣಿಯಲ್ಲಿ ಸಮಬಲ ಸಾಧಿಸುತ್ತೇವೆ ಎಂಬ ಹೇಳಿಕೆಯನ್ನು ಕೂಡ ನೀಡಲು ಮುಂದೆ ಬರಲಿಲ್ಲ ಎಂದು ಇಂಗ್ಲೆಂಡ್ ತಂಡದವರ ಕಾಲೆಳೆದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Monday, September 13, 2021, 17:50 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X