ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿ

IND vs ENG: Fans roast Ajinkya Rahane for consistent failures

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿರಾಟ್ ಕೊಹ್ಲಿ ಪಡೆಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಬಿಟ್ಟುಕೊಟ್ಟರು. ಹೀಗೆ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ವಿರಾಟ್ ಕೊಹ್ಲಿ ಪಡೆ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 276 ಗಳಿಸಿತ್ತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಅಬ್ಬರದ ಶತಕವನ್ನು ಬಾರಿಸಿ ಮಿಂಚಿದರೆ, ರೋಹಿತ್ ಶರ್ಮಾ 83 ಮತ್ತು ವಿರಾಟ್ ಕೊಹ್ಲಿ 42 ರನ್ ಬಾರಿಸಿ ಜವಾಬ್ದಾರಿಯುತ ಆಟವನ್ನಾಡಿದರು.

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಈ ಬಲಿಷ್ಠ ತಂಡ ವಿಫಲವಾಗಲಿದೆ ಎಂದು ಭವಿಷ್ಯ ನುಡಿದ ಹರ್ಷೆಲ್ ಗಿಬ್ಸ್!ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ಈ ಬಲಿಷ್ಠ ತಂಡ ವಿಫಲವಾಗಲಿದೆ ಎಂದು ಭವಿಷ್ಯ ನುಡಿದ ಹರ್ಷೆಲ್ ಗಿಬ್ಸ್!

ಆದರೆ ಕಳೆದ ಪಂದ್ಯದಂತೆ ಈ ಬಾರಿಯೂ ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ. 23 ಎಸೆತಗಳನ್ನು ಎದುರಿಸಿದ ಅಜಿಂಕ್ಯ ರಹಾನೆ ಕೇವಲ ಒಂದೇ ಒಂದು ರನ್ ಕಲೆ ಹಾಕುವಲ್ಲಿ ಮಾತ್ರ ಶಕ್ತರಾದರು. ಹೀಗೆ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್ ಗಳಿಸಿ ಮತ್ತೆ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವ ಅಜಿಂಕ್ಯ ರಹಾನೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿವೆ.

ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!ಭಾರತ vs ಇಂಗ್ಲೆಂಡ್: ಕೆಎಲ್ ರಾಹುಲ್ ಬಾರಿಸಿದ ಒಂದು ಶತಕದಿಂದ ನಿರ್ಮಾಣವಾದ ದಾಖಲೆಗಳು ಅಷ್ಟಿಷ್ಟಲ್ಲ!

ಇಂಗ್ಲೆಂಡ್ ವಿರುದ್ಧ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿಯೂ ಸಹ ಅಜಿಂಕ್ಯ ರಹಾನೆ ಕಳಪೆ ಪ್ರದರ್ಶನ ನೀಡಿದ್ದರು, ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 5 ರನ್ ಬಾರಿಸಿದ್ದ ಅಜಿಂಕ್ಯ ರಹಾನೆ ಇದೀಗ ಎರಡನೇ ಪಂದ್ಯದಲ್ಲಿಯೂ ಸತತವಾಗಿ ಮುಗ್ಗರಿಸಿದ್ದು ಕ್ರೀಡಾಭಿಮಾನಿಗಳು ಈ ಕೆಳಕಂಡಂತೆ ಟ್ರೋಲ್ ಮಾಡಿದ್ದಾರೆ.

ರಹಾನೆ ನೈಟ್ ವಾಚ್ ಮ್ಯಾನ್ ಎಂದ ಕ್ರೀಡಾಭಿಮಾನಿ

ರಹಾನೆ ನೈಟ್ ವಾಚ್ ಮ್ಯಾನ್ ಎಂದ ಕ್ರೀಡಾಭಿಮಾನಿ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯದ ವೇಳೆಗೆ ಬ್ಯಾಟಿಂಗ್‌ಗೆ ಆಗಮಿಸಿದ ಅಜಿಂಕ್ಯ ರಹಾನೆ ಎರಡನೇ ದಿನದ ಆರಂಭದಲ್ಲಿಯೇ ವಿಕೆಟ್ ಒಪ್ಪಿಸಿ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಅಜಿಂಕ್ಯ ರಹಾನೆ ಟೆಸ್ಟ್ ಕ್ರಿಕೆಟ್‍ನಲ್ಲಿ ನೈಟ್ ವಾಚ್ ಮ್ಯಾನ್ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ.

ಸಹ ಆಟಗಾರರಿಗೆ ಔಟ್ ಆಗುವುದರಲ್ಲಿ ಬೆಂಬಲ ನೀಡುವ ಆಟಗಾರ ರಹಾನೆ

ಸಹ ಆಟಗಾರರಿಗೆ ಔಟ್ ಆಗುವುದರಲ್ಲಿ ಬೆಂಬಲ ನೀಡುವ ಆಟಗಾರ ರಹಾನೆ

ರಹಾನೆ ಸತತವಾಗಿ ವಿಫಲರಾಗುತ್ತಿರುವುದರ ಕುರಿತು ಮತ್ತೋರ್ವ ನೆಟ್ಟಿಗ ಟ್ವೀಟ್ ಮಾಡಿದ್ದು 'ನಾನು ತಂಡಕ್ಕೋಸ್ಕರ ಆಡುವ ಆಟಗಾರ. ಹೀಗಾಗಿ ತಂಡದ ಆಟಗಾರರಿಗೆ ಡ್ರೆಸಿಂಗ್ ರೂಂನಲ್ಲಿ ಬೆಂಬಲ ನೀಡುತ್ತೇನೆ: ರಹಾನೆ' ಎಂದು ಬರೆಯುವ ಮೂಲಕ ಅಜಿಂಕ್ಯ ರಹಾನೆ ಪ್ರದರ್ಶನವನ್ನು ಟೀಕಿಸಿದ್ದಾರೆ.

ರಹಾನೆ, ಪೂಜಾರ ಆಟವನ್ನು ಪಂತ್ ಮತ್ತು ಜಡೇಜಾ ಆಡುತ್ತಿದ್ದಾರೆ

ರಹಾನೆ, ಪೂಜಾರ ಆಟವನ್ನು ಪಂತ್ ಮತ್ತು ಜಡೇಜಾ ಆಡುತ್ತಿದ್ದಾರೆ

ಮತ್ತೋರ್ವ ನೆಟ್ಟಿಗ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಕಳಪೆ ಪ್ರದರ್ಶನದ ಕುರಿತು ಟ್ವೀಟ್ ಮಾಡಿದ್ದಾರೆ. ಟೀಮ್ ಇಂಡಿಯಾಕ್ಕಾಗಿ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಆಡಬೇಕಿದ್ದ ಆಟವನ್ನು ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಆಡುತ್ತಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

ಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿಮತ್ತೆ ಕಳಪೆ ಪ್ರದರ್ಶನ ನೀಡಿದ ರಹಾನೆ; ವೀಕ್ಷಕರು ಕಿಡಿಕಾರಿರುವ ರೀತಿ ಹೇಗಿದೆ ನೋಡಿ

Story first published: Friday, August 13, 2021, 23:21 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X