ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ಗೆ ಈತನೇ ಕಾರಣ ಎಂದು ದೂರಿದ ಪಾಕಿಸ್ತಾನದ ಮಾಜಿ ನಾಯಕ

Ind vs Eng: Former Pakistan Captain Blamed Ravi Shastri For The Virat Kohlis Poor Form

ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಎರಡೂವರೆ ವರ್ಷಗಳು ಕಳೆದಿವೆ. ಇದೀಗ ಭಾರತ ತಂಡವು ಏಕೈಕ ಇಂಗ್ಲೆಂಡ್ ಪ್ರವಾಸ ಆರಂಭಿಸುತ್ತಿದ್ದಂತೆ ಎಲ್ಲರ ಕಣ್ಣುಗಳು ಭಾರತದ ಮಾಜಿ ನಾಯಕನತ್ತ ನೆಟ್ಟಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿ ತಮ್ಮ ಮನಸ್ಸನ್ನು ಫ್ರೆಶ್ ಮಾಡಲು ವಿರಾಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

"ವಿರಾಟ್ ಕೊಹ್ಲಿ ತಡೆರಹಿತ ಕ್ರಿಕೆಟ್ ಆಡಿದ್ದಾರೆ ಮತ್ತು ಅವರು ಎಲ್ಲಾ ಸ್ವರೂಪಗಳಲ್ಲಿ ತಂಡದ ನಾಯಕತ್ವ ವಹಿಸಿರುವುದರಿಂದ ಅವರಿಗೆ ವಿರಾಮವು ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ವಿರಾಮ ತೆಗೆದುಕೊಳ್ಳುವುದು ಉತ್ತಮ. ಕೆಲವೊಮ್ಮೆ ನೀವು ಸಮತೋಲನವನ್ನು ಕಂಡುಕೊಳ್ಳಬೇಕಾಗುತ್ತದೆ," ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದರು.

ಅದಕ್ಕೆ ವಿರಾಟ್ ಕೊಹ್ಲಿ ನಂತರ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು, "ಬಹಳಷ್ಟು ಜನರು ಇದನ್ನು ಪ್ರಸ್ತಾಪಿಸಿದ್ದಾರೆ (ವಿರಾಮ ತೆಗೆದುಕೊಳ್ಳಬೇಕು) ಇದನ್ನು ನಿಖರವಾಗಿ ಉಲ್ಲೇಖಿಸಿದ ಒಬ್ಬ ವ್ಯಕ್ತಿ ಇದ್ದಾರೆ, ಅದು ರವಿ ಭಾಯ್. ಅವರು ಹೇಳಿದ್ದು ಏನೂ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಆಡುವ ಕ್ರಿಕೆಟ್‌ನ ಪ್ರಮಾಣದಿಂದ ಇದು ಆರೋಗ್ಯಕರ ವಿಷಯವಾಗಿದೆ," ಎಂದು ಹೇಳಿದ್ದರು.

Ind vs Eng: Former Pakistan Captain Blamed Ravi Shastri For The Virat Kohlis Poor Form

ಇದೀಗ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್‌ಗೆ ಮಾಜಿ ಕೋಚ್ ರವಿಶಾಸ್ತ್ರಿ ಕಾರಣ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ದೊಡ್ಡ ಹೇಳಿಕೆ ನೀಡಿದ್ದಾರೆ. ಅವರು ಅದನ್ನು ಹೇಗೆ ಅಥವಾ ಏಕೆ ಎಂದು ವಿವರಿಸದೆ ಹೇಳಿದ್ದಾರೆ.

"ರವಿಶಾಸ್ತ್ರಿ ಅವರಿಂದಾಗಿ ಇದೆಲ್ಲವೂ (ಕಳಪೆ ಫಾರ್ಮ್) ವಿರಾಟ್ ಕೊಹ್ಲಿಗೆ ಸಂಭವಿಸಿದೆ. ಅವರು ತರಬೇತುದಾರರಾಗಿರದಿದ್ದರೆ ವಿರಾಟ್ ಕೊಹ್ಲಿ ಸರಣಿಗಳಿಂದ ಹೊರಗೆ ಕುಳಿತುಕೊಳ್ಳುತ್ತಿರಲಿಲ್ಲ," ಎಂದು ಯೂಟ್ಯೂಬ್ ಚಾನೆಲ್ ಕ್ಯಾಟ್ ಬಿಹೈಂಡ್‌ನಲ್ಲಿ ನಡೆದ ಚರ್ಚೆಯಲ್ಲಿ ರಶೀದ್ ಲತೀಫ್ ಹೇಳಿದ್ದು, ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳುವ ಕುರಿತು ವಿರಾಟ್ ಕೊಹ್ಲಿಗೆ ರವಿಶಾಸ್ತ್ರಿ ನೀಡಿದ ಸಲಹೆಯ ಬಗ್ಗೆ ಕೇಳಿದಾಗ ಹೇಳಿದರು.

Ind vs Eng: Former Pakistan Captain Blamed Ravi Shastri For The Virat Kohlis Poor Form

"2017ರಲ್ಲಿ ಏನಾಯಿತು ಎಂದರೆ ಅನಿಲ್ ಕುಂಬ್ಳೆಯಂತಹ ಆಟಗಾರನನ್ನು ಬದಿಗೆ ಸರಿಸಲಾಯಿತು. ಅವರ ಜಾಗಕ್ಕೆ ರವಿಶಾಸ್ತ್ರಿ ಬಂದರು. ಅವರಿಗೆ ಸಾಮರ್ಥ್ಯ ಇತ್ತೋ ಇಲ್ಲವೋ ಗೊತ್ತಿಲ್ಲ. ಅವರು ಕೋಚ್ ಆಗಿದ್ದರು. ಅವರು ತರಬೇತುದಾರರಾಗಲು ಯಾವುದೇ ಅರ್ಹತೆ ಹೊಂದಿರಲಿಲ್ಲ, ಇನ್ನು ಕೆಲವರಿಗೆ (ವಿರಾಟ್ ಕೊಹ್ಲಿ ಹೊರತುಪಡಿಸಿ) ರವಿಶಾಸ್ತ್ರಿ ಅವರನ್ನು ಕರೆತಂದಿದ್ದು ಹಿನ್ನಡೆಯಾಯಿತು. ವಾಸ್ತವವಾಗಿ ಇದು ಹಿಮ್ಮುಖವಾಗಿದೆ," ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ತಿಳಿಸಿದರು.

ವಿಚಿತ್ರವಾಗಿ ಔಟಾದ ಹೆನ್ರಿ ನಿಕೋಲ್ಸ್:ಈ ಥರಾ ಔಟ್‌ ನೋಡಿ ಎಲ್ರಿಗೂ ಶಾಕ್ | *Cricket | Oneindia Kannada

2017ರಲ್ಲಿ ಅನಿಲ್ ಕುಂಬ್ಳೆ ಅವರನ್ನು ಕೋಚ್ ಸ್ಥಾನದಿಂದ ವಿವಾದಾತ್ಮಕವಾಗಿ ಹೊರಹಾಕಿದ ನಂತರ ರವಿಶಾಸ್ತ್ರಿ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ರವಿಶಾಸ್ತ್ರಿ ಅವರು 2021ರವರೆಗೆ ಮುಖ್ಯ ಕೋಚ್ ಹುದ್ದೆಯಲ್ಲಿದ್ದರು.

Story first published: Thursday, June 23, 2022, 10:16 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X