ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯನ್ನು ಸುಮ್ಮನಿರಿಸಿದರೆ ಮಾತ್ರ ನಮ್ಮ ಗುರಿ ಮುಟ್ಟಲು ಸಾಧ್ಯ: ಜೋ ರೂಟ್

Ind vs Eng: If we want to win this series, we need to keep Virat quiet: Joe Root

ಲಂಡನ್, ಆಗಸ್ಟ್ 31: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಅಂತಿಮ ಎರಡು ಟೆಸ್ಟ್ ಪಂದ್ಯಗಳು ಮಾತ್ರವೇ ಬಾಕಿಯಿದೆ. ಸದ್ಯ ಎರಡು ತಂಡಗಳು ಕೂಡ ತಲಾ ಒಂದು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಿದೆ. ಆದರೆ ಈ ಸರಣಿಯನ್ನು ಆತಿಥೇಯ ಇಂಗ್ಲೆಂಡ್ ತಂಡ ಗೆಲ್ಲಬೇಕಾದರೆ ಒಂದು ವಿಚಾರವನ್ನು ಮನಸಿನಲ್ಲಿಟ್ಟುಕೊಳ್ಳಬೇಕು ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರದಲ್ಲಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ತಂಡ ಸರಣಿಯನ್ನು ಕಳೆದುಕೊಳ್ಳಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಜೋ ರೂಟ್.

ನಾಲ್ಕನೇ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಜೋ ರೂಟ್ ಈ ರೀತಿಯಾಗಿ ಹೇಳಿಕೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಹೀಗೆ ಹೇಳಿದ್ದು ಟೀಮ್ ಇಂಡಿಯಾ ನಾಯಕನ ಬಗ್ಗೆ. ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ತಮ್ಮ ತಂಡ ಸುಮ್ಮನಾಗಯವಂತೆ ಮಾಡಬೇಕು. ಹಾಗಿದ್ದಾಗ ಮಾತ್ರವೇ ತಮಗೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದಿದ್ದಾರೆ ಜೋ ರೂಟ್.

ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ'ಓವಲ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಲ್ಲ'

ಸರಣಿಯಲ್ಲಿ ವಿರಾಟ್ ಕೊಹ್ಲಿ ವೈಫಲ್ಯ: ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಭಾರೀ ವೈಫಲ್ಯವನ್ನು ಅನುಭವಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ವಿರಾಟ್ ಕೇವಲ ಒಂದು ಅರ್ಧಶತಕವನ್ನು ಗಳಿಸಲು ಮಾತ್ರವೇ ಶಕ್ತರಾಗಿದ್ದಾರೆ. ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ವಿರಾಟ್ ಕೊಹ್ಲಿ ವಿರುದ್ಧ ಅದ್ಭುತ ಯಶಸ್ಸು ಸಾಧಸಿದ್ದು ಎರಡು ಬಾರಿ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದ್ದಾರೆ. ಇದು ಭಾರತ ತಂಡ ಹಿನ್ನೆಡೆ ಅನುಭವಿಸಲು ಕಾರಣವಾಗಿದೆ.

ಬೌಲರ್‌ಗಳಿಗೆ ಶ್ರೇಯಸ್ಸು ನೀಡಬೇಕು: ಇನ್ನು ಸರಣಿಯ ಈವರೆಗಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೊಡ್ಡ ಮೊತ್ತವನ್ನು ಗಳಿಸಲು ಅಸಾಧ್ಯವಾಗಿರುವುದಕ್ಕೆ ಬೌಲರ್‌ಗಳ ಪ್ರದರ್ಶನವೇ ಕಾರಣ ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್. "ಇದರ ಶ್ರೇಯಸ್ಸು ನಮ್ಮ ತಂಡದ ಬೌಲರ್‌ಗಳಿಗೆ ಸಲ್ಲಬೇಕು. ವಿರಾಟ್ ಕೊಹ್ಲಿ ಓರ್ವ ವಿಶ್ವದರ್ಜೆಯ ಆಟಗಾರ. ಹಾಗಿದ್ದರೂ ಆತನ ವಿರುದ್ಧ ಯಶಸ್ಸು ಸಾಧಿಸಿರುವುದಕ್ಕೆ ನಮ್ಮ ಬೌಲಿಂಗ್ ವಿಭಾಗಕ್ಕೆ ಶ್ರೇಯಸ್ಸನ್ನು ಸಲ್ಲಿಸಬೇಕು. ಈವರೆಗೆ ನಾವು ಆತನನ್ನು ಸುಮ್ಮನಿರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇದು ನಮ್ಮ ಬೌಲಿಂಗ್ ವಿಭಾಗದ ಅದ್ಭುತವಾದ ಪ್ರಯತ್ನವಾಗಿದೆ. ಈ ಸರಣಿಯನ್ನು ಗೆಲ್ಲಬೇಕಾದರೆ ನಾವು ಈ ಪ್ರದರ್ಶನವನ್ನು ಮುಂದುವರಿಸಲೇಬೇಕಿದೆ" ಎಂದು ಜೋ ರೂಟ್ ಪ್ರತಿಕ್ರಿಯೆ ನೀಡಿದ್ದಾರೆ.

"ನಾವು ವಿರಾಟ್ ಕೊಹ್ಲಿಯನ್ನು ಔಟ್ ಮಾಡುವ ವಿಧಾನವನ್ನು ಕಂಡುಕೊಂಡಿದ್ದೇವೆ. ಆತನೋರ್ವ ಅದ್ಭುತವಾದ ಆಟಗಾರನಾಗಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಹೀಗಾಗಿ ನಾವು ಉತ್ಕೃಷ್ಟ ಆಟಗಾರನನ್ನು ಔಟ್ ಮಾಡಲು ಯಾವಾಗಲೂ ಯೋಜನೆಯನ್ನು ರೂಪಿಸುತ್ತೇವೆ" ಎಂದು ಜೋ ರೂಟ್ ಮಂಗಳವಾರ ನಡೆದ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಜೋ ರೂಟ್ ಪ್ರೆಸ್ಸ್ ಮೀಟ್ ನಲ್ಲಿ ಹೇಳಿದ್ದೇನು ಗೊತ್ತಾ? | Oneindia Kannada

ಇನ್ನು ಇದೇ ಸಂದರ್ಭದಲ್ಲಿ ಹೆಡಿಂಗ್ಲೆ ಟೆಸ್ಟ್‌ನ ನಾಲ್ಕನೇ ದಿನ ಇಂಗ್ಲೆಂಡ್ ತಮಡದ ಬೌಲರ್‌ಗಳು ನೀಡಿದ ಪ್ರದರ್ಶನವನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪ್ರಶಂಸಿಸಿದ್ದಾರೆ. "ಅಂದಿನ ಪ್ರದರ್ಶನ ಅದ್ಭುತವಾಗಿತ್ತು. ನಿಜಕ್ಕೂ ಕೂಡ ಅಮೋಘವಾದ ಆಟವನ್ನು ನಮ್ಮ ಆಟಗಾರರು ಪ್ರದರ್ಶಿಸಿದರು. ನಮಗಿದ್ದ ಸವಾಲನ್ನು ಸುಲಭವಾಗು ಎದುರಿಸಲು ಸಾಧ್ಯವಾಗಿತ್ತು. ಬೌಲಿಂಗ್‌ನ ದೃಷ್ಟಿಕೋನದಿಂದ ನಾವು ನಿರರರ್ಗಳವಾಗಿದ್ದೆವು. ನಾವು ಸರಿಯಾದ ಭಾಗಕ್ಕೆ ಚೆಂಡನ್ನು ಗುರಿಮಾಡುವ ಮೂಲಕ ಯಶಸ್ಸು ಗಳಿಸಿಕೊಂಡೆವು. ಬ್ಯಾಟಿಂಗ್ ವಿಭಾಗದಲ್ಲಿಯೂ ಹೆಡಿಂಗ್ಲೆಯಲ್ಲಿ ನೀಡಿದ ಪ್ರದರ್ಶನ ನಮ್ಮ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. ಅದನ್ನೇ ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದೇವೆ" ಎಂದು ಜೋ ರೂಟ್ ಹೇಳಿಕೆ ನೀಡಿದ್ದಾರೆ.

Story first published: Tuesday, August 31, 2021, 18:17 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X