ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್‌ನಲ್ಲಿ ಈ ಸಾಧನೆಯೊಂದಿಗೆ ಕೇನ್ ವಿಲಿಯಮ್ಸನ್ ಹಿಂದಿಕ್ಕಿದ ರೋಹಿತ್ ಶರ್ಮಾ

IND vs ENG: India Captain Rohit Sharma Overtakes Kane Williamson With This Feat In England

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ, ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ವಿದೇಶಿ ಬ್ಯಾಟ್ಸ್‌ಮನ್ ಎನಿಸಿಕೊಂಡರು.

IND vs ENG: ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ODI ರ್‍ಯಾಂಕಿಂಗ್‌ನಲ್ಲಿ ಪಾಕ್ ಹಿಂದಿಕ್ಕಿದ ಭಾರತ

ಜುಲೈ 12ರಂದು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದರು. ಬಲಗೈ ಆಟಗಾರ ರೋಹಿತ್ ಶರ್ಮಾ 58 ಎಸೆತಗಳಲ್ಲಿ 76 ರನ್ ಗಳಿಸಿ ಅಜೇಯರಾಗುಳಿದರು. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ 23 ಇನ್ನಿಂಗ್ಸ್‌ಗಳಲ್ಲಿ 1393 ರನ್ ಗಳಿಸಿದರೆ, ಭಾರತ ನಾಯಕ ರೋಹಿತ್ ಶರ್ಮಾ ಈಗ 25 ಇನ್ನಿಂಗ್ಸ್‌ಗಳಲ್ಲಿ 1411 ರನ್ ಗಳಿಸಿದ್ದಾರೆ.

ಸಿಕ್ಸರ್‌ನಲ್ಲಿ ಅಫ್ರಿದಿ ದಾಖಲೆ ಮುರಿದ ರೋಹಿತ್

ಸಿಕ್ಸರ್‌ನಲ್ಲಿ ಅಫ್ರಿದಿ ದಾಖಲೆ ಮುರಿದ ರೋಹಿತ್

ಏಕದಿನ ಕ್ರಿಕೆಟ್‌ನಲ್ಲಿ 250 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ ರೋಹಿತ್ ಶರ್ಮಾ, ವೈಯಕ್ತಿಕವಾಗಿ ಹೊಸ ಮೈಲುಗಲ್ಲನ್ನು ಕೂಡ ತಲುಪಿದ್ದಾರೆ. ಈ ವೇಳೆಯಲ್ಲಿ ಪಾಕಿಸ್ತಾನದ ಬ್ಯಾಟರ್ ಶಾಹಿದ್ ಅಫ್ರಿದಿ ದಾಖಲೆಯನ್ನು ಮುರಿದಿದ್ದು, ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಶರ್ಮಾ 250 ಸಿಕ್ಸರ್ ಸಿಡಿಸಲು ಒಟ್ಟಾರೆ 224 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರೆ, ಪಾಕ್ ಮಾಜಿ ಆಟಗಾರ ಅಫ್ರಿದಿ 259 ಇನ್ನಿಂಗ್ಸ್‌ಗಳಲ್ಲಿ 250 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಹಿಟ್‌ಮ್ಯಾನ್ ವೇಗವಾಗಿ 250 ಸಿಕ್ಸರ್ ಸಿಡಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಶಿಖರ್ ಧವನ್ ಜೊತೆಗೆ ಅಜೇಯ 114 ರನ್ ಆರಂಭಿಕ ಜೊತೆಯಾಟ

ಶಿಖರ್ ಧವನ್ ಜೊತೆಗೆ ಅಜೇಯ 114 ರನ್ ಆರಂಭಿಕ ಜೊತೆಯಾಟ

ನಾಯಕ ರೋಹಿತ್ ಶರ್ಮಾ ಅವರು ಶಿಖರ್ ಧವನ್ ಅವರೊಂದಿಗೆ ಅಜೇಯ 114 ರನ್ ಆರಂಭಿಕ ಜೊತೆಯಾಟ ಆಡಿದ ಪರಿಣಾಮವಾಗಿ ಭಾರತಕ್ಕೆ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯವನ್ನು ತಂದಿತ್ತರು.

ರೋಹಿತ್ ಶರ್ಮಾ ಅವರು ಶಿಖರ್ ಧವನ್ ಜೋಡಿ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದರು. ಏಕೆಂದರೆ ಅವರು ಏಕದಿನ ಇತಿಹಾಸದಲ್ಲಿ 5000 ರನ್‌ಗಳನ್ನು ಕಲೆಹಾಕಿದ ನಾಲ್ಕನೇ ಆರಂಭಿಕ ಜೋಡಿ ಎನಿಸಿಕೊಂಡರು.

ಸಚಿನ್ ತೆಂಡೂಲ್ಕರ್- ಸೌರವ್ ಗಂಗೂಲಿ ಜೋಡಿ 5000 ರನ್‌

ಸಚಿನ್ ತೆಂಡೂಲ್ಕರ್- ಸೌರವ್ ಗಂಗೂಲಿ ಜೋಡಿ 5000 ರನ್‌

2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭಾರತದ ಆರಂಭಿಕ ಇನ್ನಿಂಗ್ಸ್‌ಗಳನ್ನು ಪ್ರಾರಂಭಿಸಿದ್ದರು ಮತ್ತು ಆಗ ಭಾರತ ಟ್ರೋಫಿ ಗೆದ್ದಿತ್ತು. ನಂತರದ ವರ್ಷಗಳಲ್ಲಿ ಈ ಇಬ್ಬರೂ 50-ಓವರ್‌ಗಳ ಸ್ವರೂಪದಲ್ಲಿ ಅತ್ಯಂತ ವಿನಾಶಕಾರಿ ಆರಂಭಿಕ ಜೋಡಿಗಳಲ್ಲಿ ಒಂದಾಗಿದ್ದರು.

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಏಕದಿನ ಪಂದ್ಯಗಳಲ್ಲಿ 5000 ರನ್‌ಗಳನ್ನು ದಾಟಿದ ಎರಡನೇ ಭಾರತೀಯ ಆರಂಭಿಕ ಜೋಡಿಯಾಗಿದ್ದಾರೆ. 1996-2007ರ ನಡುವೆ ಇನ್ನಿಂಗ್ಸ್ ಆರಂಭಿಸಿದ ಸಚಿನ್ ಮತ್ತು ಗಂಗೂಲಿ ಅವರು 6609 ರನ್‌ಗಳನ್ನು ಕಲೆಹಾಕಿದ್ದಾರೆ ಮತ್ತು 21 ಶತಕದ ಜೊತೆಯಾಟ ಮತ್ತು 23 ಅರ್ಧ ಶತಕ ಜೊತೆಯಾಟಗಳ ಭಾಗವಾಗಿದ್ದರು.

ಪಾಕಿಸ್ತಾನವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಭಾರತ

ಪಾಕಿಸ್ತಾನವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಭಾರತ

ಮಂಗಳವಾರ ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಭಾರತವು ಐಸಿಸಿ ಏಕದಿನ ತಂಡ ರ್ಯಾಂಕಿಂಗ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿತು.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ 105 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದ ಮೆನ್ ಇನ್ ಬ್ಲೂ 108 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿದ್ದು, 106 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 126 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 122 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Story first published: Wednesday, July 13, 2022, 16:40 [IST]
Other articles published on Jul 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X