ಆತನನ್ನು ಹೊರಗಿಟ್ಟ ಕಾರಣಕ್ಕೆ ಭಾರತ ಬೆಲೆ ತೆರಬೇಕಾಗಿದೆ: ದ್ರಾವಿಡ್ ನಿರ್ಧಾರದ ಬಗ್ಗೆ ಕನೆರಿಯಾ ಕಿಡಿ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಆರಂಭಿಕ ಮೂರು ದಿನಗಳ ಕಾಲವೂ ಟೆಸ್ಟ್ ಪಂದ್ಯದ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ದಾಂಡಿಗರನ್ನು ಔಟ್ ಮಾಡಲು ಭಾರತೀಯ ಬೌಲರ್‌ಗಳು ಪರದಾಡುತ್ತಿದ್ದಾರೆ. ಹೀಗಾಗಿ ಅಂತಿಮ ದಿನದಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ಸನಿಹಕ್ಕೆ ಬಂದಿ ನಿಂತಿದೆ.

ಪಂದ್ಯದ ಐದನೇ ದಿನದಾಟ ಮಾತ್ರ ಬಾಕಿಯಿದ್ದು ಭಾರತ ತಂಡದ ಪರವಾಗಿ ಪವಾಡ ನಡೆಯಲಿದೆಯೇ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿರುವ ಇಂಗ್ಲೆಂಡ್ ದಾಂಡಿಗರನ್ನು ಅಂತಿಮ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ಯಾವ ರೀತಿ ಎದುರಿಸಲಿದ್ದಾರೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಈ ಅಂತಿಮ ದಿನದಾಟಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ದಾನಿಶ್ ಕನೆರಿಯಾ ಭಾರತೀಯ ತಂಡದ ಓರ್ವ ಆಟಗಾರನನ್ನು ಕಣಕ್ಕಿಳಿಸದಿರುವ ಬಗ್ಗೆ ತಂಡದ ಕೋಚ್ ರಾಹುಲ್ ದ್ರಾವಿಡ್ ಮೇಲೆ ಕಿಡಿಕಾರಿದ್ದಾರೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ಅನುಭವಿ ಸ್ಪಿನ್ನರ್‌ನನ್ನು ಆಡಿಸದಿರುವುದು ದುಬಾರಿಯಾಯಿತು

ಅನುಭವಿ ಸ್ಪಿನ್ನರ್‌ನನ್ನು ಆಡಿಸದಿರುವುದು ದುಬಾರಿಯಾಯಿತು

ದಾನಿಶ್ ಕನೇರಿಯಾ ಭಾರತದ ಕೋಚ್ ರಾಹುಲ್ ದ್ರಾವಿಡ್ ಅವರ ನಿರ್ಧಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಇಂಗ್ಲೀಷ್ ಕಂಡೀಶನ್ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದಾರೆ. ಹಾಗಿದ್ದರೂ ಅವರನ್ನು ಆಡುವ ಬಳಗದಲ್ಲಿ ಸೇರಿಕೊಂಡಿಲ್ಲ. ಇದೇ ಕಾರಣದಿಂದಾಗಿ ಭಾರತ ಪಂದ್ಯದ ಆರಂಭಿಕ ಹಂತದಲ್ಲಿ ಮೇಲುಗೈ ಸಾಧಿಸಿದ್ದರೂ ಸೋಲಿನ ಸನಿಹಕ್ಕೆ ಬಂದು ನಿಂತಿದೆ ಎಂದು ದಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಆರ್ ಅಶ್ವಿನ್ ಕಣಕ್ಕಿಳಿಸಬೇಕಿತ್ತು ಎಂದ ಕನೆರಿಯಾ

ಆರ್ ಅಶ್ವಿನ್ ಕಣಕ್ಕಿಳಿಸಬೇಕಿತ್ತು ಎಂದ ಕನೆರಿಯಾ

ಭಾರತ ತಂಡದ ಅನುಭವಿ ಸ್ಪಿನ್ನರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿಯೂ ಆಡಿಸದಿರುವ ಬಗ್ಗೆ ಆರ್ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಈ ಟೆಸ್ಟ್ ಸರಣಿಯ ಐದು ಪಂದ್ಯಗಳಿಂದಲೂ ಆರ್ ಅಶ್ವಿನ್ ಆಡುವ ಬಳಗದಿಂದ ಹೊರಗುಳಿದಂತಾಗಿದೆ. ಟೆಸ್ಟ್ ಮಾದರಿಯಲ್ಲಿ ಬೌಲಿಂಗ್ ಶ್ರೇಯಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಆರ್ ಅಶ್ವಿನ್‌ಗೆ ಸ್ಥಾನ ದೊರಡಯದಿರುವುದು ಅಚ್ಚರಿ ಮೂಡಿಸುತ್ತದೆ ಎಂದಿದ್ದಾರೆ ಕನೆರಿಯಾ. ಇನ್ನು ಆರ್ ಅಶ್ವಿನ್ ಕಳೆದ ವರ್ಷ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಅದ್ಭುತ ಪ್ರದರ್ಶನ ನೀಡಿದ್ದರು. ಕೇವಲ 4 ಪಂದ್ಯಗಳಿಂದ ಅಶ್ವಿನ್ 32 ವಿಕೆಟ್ ಸಂಪಾದಿಸಿದ್ದರು. ಅದರಲ್ಲೂ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ವಿರುದ್ಧ ಅಶ್ವಿನ್ ಅದ್ಭುತ ಯಶಸ್ಸು ಸಾಧಿಸಿದ್ದಾರೆ.

ದ್ರಾವಿಡ್ ಕಾರಣ ಎಂದ ಕನೆರಿಯಾ

ದ್ರಾವಿಡ್ ಕಾರಣ ಎಂದ ಕನೆರಿಯಾ

ಭಾರತದ ಕೋಚ್ ರಾಹುಲ್ ದ್ರಾವಿಡ್ ಮೇಲೆ ದಾನಿಶ್ ಕನೆರಿಯಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಎಡ್ಜ್‌ಬಾಸ್ಟನ್‌ನಲ್ಲ ಗೆಲ್ಲವ ಹಂತದಿಂದ ಸೋಲಿನತ್ತ ಭಾರತ ಬಂದು ನಿಂತಿದೆ. ಆರ್ ಅಶ್ವಿನ್ ಯಾಕೆ ಆಡುವ ಬಳಗದಲ್ಲಿಲ್ಲ. ಈ ನಿರ್ಧಾರವನ್ನು ದ್ರಾವಿಡ್ ತೆಗೆದುಕೊಂಡರಾ? ಇಂಗ್ಲೆಂಡ್ ಕಂಡೀಶನ್‌ನಲ್ಲಿ ದ್ರಾವಿಡ್‌ಗೆ ಸಾಕಷ್ಟು ಆಡಿದ ಅನುಭವ ಹೊಂದಿದ್ದು ಅವರಿಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದಿದೆ. ಇಂಗ್ಲೆಂಡ್‌ನಲ್ಲಿ ಇದು ಬೇಸಿಗೆ ಕಾಲವಾದ್ದರಿಂದ ಅಲ್ಲಿ ಮೂರನೇ ದಿನದ ಬಳಿಕ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗುತ್ತದೆ. ಬೂಮ್ರಾ ಮಾತ್ರವೇ ಈಗ ಅಚ್ಚರಿಯುಂಟು ಮಾಡಬಲ್ಲವರಾಗಿದ್ದಾರೆ. ಭಾರತ ತಾನು ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ತೆರಬೇಕಾಗಿದೆ" ಎಂದಿದ್ದಾರೆ ದಾನಿಶ್ ಕನೆರಿಯಾ.

Bairstow ಅವರು Kohli ಜೊತೆಗಿನ ಕಿರಿಕ್ ಬಗ್ಗೆ ಮಾತನಾಡಿದ್ದಾರೆ | OneIndia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)

ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 13:40 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X