ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!

IND vs ENG: India showed attitude and perseverance to win the 4th Test says Nick Compton

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 4 ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ 2-1 ಅಂತರದಲ್ಲಿ ಮುನ್ನಡೆಯನ್ನು ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು, ನಂತರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್‌ಗಳ ಜಯವನ್ನು ಸಾಧಿಸಿ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿತು, ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ 76 ರನ್‌ಗಳ ಸರಣಿ ಜಯವನ್ನು ಸಾಧಿಸಿತು ಮತ್ತು ಇತ್ತೀಚಿಗಷ್ಟೆ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 157 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಅಂತಿಮ ಟೆಸ್ಟ್‌ನಿಂದ ಭಾರತದ ಈ ಇಬ್ಬರು ಸ್ಟಾರ್ ಆಟಗಾರರು ಹೊರಬೀಳುವ ಸಾಧ್ಯತೆ!ಅಂತಿಮ ಟೆಸ್ಟ್‌ನಿಂದ ಭಾರತದ ಈ ಇಬ್ಬರು ಸ್ಟಾರ್ ಆಟಗಾರರು ಹೊರಬೀಳುವ ಸಾಧ್ಯತೆ!

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರ ಅತ್ಯದ್ಭುತ ಪ್ರದರ್ಶನದ ಮುಂದೆ ಇಂಗ್ಲೆಂಡ್ ತಂಡದ ಆಟಗಾರರು ಮಂಕಾದರು. ಈ ಪಂದ್ಯ ನಡೆಯುವಾಗ ಮತ್ತು ನಡೆಯುವ ಮುನ್ನ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡದ ಎದುರು ಸೋಲಲಿದೆ ಎಂದೇ ಹಲವಾರು ಮಾಜಿ ಕ್ರಿಕೆಟಿಗರು ಭವಿಷ್ಯವನ್ನು ನುಡಿದಿದ್ದರು. ಅದರಲ್ಲಿಯೂ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ 77 ರನ್ ಗಳಿಸಿದ್ದಾಗ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲಲಿದೆ ಅಥವಾ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಹಲವಾರು ಮಂದಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

 ಟಿ ಟ್ವೆಂಟಿ ವಿಶ್ವಕಪ್ ಆಡುವ ಅವಕಾಶವನ್ನು ಕಳೆದುಕೊಳ್ಳಬಹುದಾದ 3 ಭಾರತೀಯ ಆಟಗಾರರು ಟಿ ಟ್ವೆಂಟಿ ವಿಶ್ವಕಪ್ ಆಡುವ ಅವಕಾಶವನ್ನು ಕಳೆದುಕೊಳ್ಳಬಹುದಾದ 3 ಭಾರತೀಯ ಆಟಗಾರರು

ಆದರೆ ಪಂದ್ಯದ ಕೊನೆಯ ದಿನದಾಟದಂದು ಟೀಮ್ ಇಂಡಿಯಾ ಬೌಲರ್‌ಗಳು ನೀಡಿದ ಅತ್ಯದ್ಭುತ ಪ್ರದರ್ಶನದ ಮುಂದೆ ಮಂಕಾದ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿ 210 ರನ್‌ಗಳಿಗೆ ಆಲ್ ಔಟ್ ಆದರು. ಈ ಮೂಲಕ ತಮ್ಮ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ ಎಲ್ಲರಿಗೂ ವಿರಾಟ್ ಕೊಹ್ಲಿ ಪಡೆ ಉತ್ತರವನ್ನು ನೀಡಿತ್ತು.

ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಟೀಮ್ ಇಂಡಿಯಾದ ಕಾಲೆಳೆದಿದ್ದರು. ಈಗ ತಾವು ವ್ಯಕ್ತಪಡಿಸಿದ ಟೀಕೆಯನ್ನು ಇಂಗ್ಲೆಂಡ್ ಸೋಲಿನ ನಂತರ ತಪ್ಪು ಎಂದು ಒಪ್ಪಿಕೊಂಡಿರುವ ನಿಕ್ ಕಾಂಪ್ಟನ್ ಈ ಕೆಳಕಂಡಂತೆ ಭಾರತದ ಜಯದ ಕುರಿತು ಮಾತನಾಡಿದ್ದಾರೆ.

ಟೀಮ್ ಇಂಡಿಯಾ ಬಗ್ಗೆ ತಪ್ಪು ತಿಳಿದಿದ್ದೆ

ಟೀಮ್ ಇಂಡಿಯಾ ಬಗ್ಗೆ ತಪ್ಪು ತಿಳಿದಿದ್ದೆ

ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಮತ್ತು ಪಂದ್ಯ ನಡೆಯುವ ವೇಳೆ ಟೀಮ್ ಇಂಡಿಯಾ ವಿರುದ್ಧ ಕಳಪೆಯಾಗಿ ಟೀಕೆಗಳನ್ನು ವ್ಯಕ್ತಪಡಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್ ಪಂದ್ಯ ಮುಗಿದ ನಂತರ ತಾವು ಟೀಮ್ ಇಂಡಿಯಾ ಕುರಿತು ವ್ಯಕ್ತಪಡಿಸಿದ ಟೀಕೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ. ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ತಪ್ಪು ತಿಳಿದಿದ್ದೆ, ಉತ್ತಮ ಪರಿಶ್ರಮ ಮತ್ತು ಗೆಲ್ಲುವ ಹಠದೊಂದಿಗೆ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನವನ್ನು ತೋರಿತು ಎಂದು ನಿಕ್ ಕಾಂಪ್ಟನ್ ಹೇಳಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ಡ್ರಾ ಸಾಧಿಸುವ ಸಾಮರ್ಥ್ಯವಿಲ್ಲ ಎಂಬುದು ನಾಚಿಕೆಗೇಡು

ಇಂಗ್ಲೆಂಡ್ ತಂಡಕ್ಕೆ ಡ್ರಾ ಸಾಧಿಸುವ ಸಾಮರ್ಥ್ಯವಿಲ್ಲ ಎಂಬುದು ನಾಚಿಕೆಗೇಡು


ಮೊದಲೇ ಹೇಳಿದಂತೆ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ಭಾರತ ತಂಡ ನೀಡಿದ್ದ ರನ್ ಗುರಿಯನ್ನು ಮುಟ್ಟಿ ಗೆಲುವು ಸಾಧಿಸಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅದೇ ರೀತಿ ನಿಕ್ ಕಾಂಪ್ಟನ್ ಕೂಡ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಸುಲಭವಾಗಿ ರನ್ ಗುರಿ ಮುಟ್ಟುವ ಮೂಲಕ ಭಾರತದ ವಿರುದ್ಧ ಜಯ ಸಾಧಿಸಲಿದೆ ಎಂದು ಭವಿಷ್ಯವನ್ನು ನುಡಿದಿದ್ದರು. ಆದರೆ ತಾನು ನುಡಿದಿದ್ದ ಭವಿಷ್ಯ ಹುಸಿಯಾದ ನಂತರ ಮಾತನಾಡಿರುವ ನಿಕ್ ಕಾಂಪ್ಟನ್ ಇಂಗ್ಲೆಂಡ್ ತಂಡಕ್ಕೆ ಗೆಲುವು ಸಾಧಿಸುವುದಿರಲಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಾಮರ್ಥ್ಯ ಕೂಡ ಇಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಇಂಗ್ಲೆಂಡ್ ತಂಡದ ವಿರುದ್ಧ ಕಿಡಿಕಾರಿದ್ದಾರೆ.

ಓವಲ್ ಪಂದ್ಯದ ವೇಳೆ ನಿಕ್ ಕಾಂಪ್ಟನ್ ಹೇಳಿದ್ದಿಷ್ಟು

ಓವಲ್ ಪಂದ್ಯದ ವೇಳೆ ನಿಕ್ ಕಾಂಪ್ಟನ್ ಹೇಳಿದ್ದಿಷ್ಟು

ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಪಂದ್ಯದ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದ ನಿಕ್ ಕಾಂಪ್ಟನ್ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸೋಲಲಿದೆ ಎಂದು ಹೇಳಿಕೆ ನೀಡಿದ್ದರು. ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡದೆ ವಿರಾಟ್ ಕೊಹ್ಲಿ ತಪ್ಪು ಮಾಡಿದರು, ಕೊನೆಯ ದಿನದಾಟದಲ್ಲಿ ರವಿಚಂದ್ರನ್ ಅಶ್ವಿನ್ ಅವಶ್ಯಕತೆ ತಂಡಕ್ಕೆ ಹೆಚ್ಚಾಗಿರುತ್ತದೆ, ಹೀಗಾಗಿ ಅಶ್ವಿನ್ ಇಲ್ಲದ ಕಾರಣ ಕೊನೆಯ ದಿನದಾಟದಂದು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾ ನೀಡಿರುವ ಗುರಿಯನ್ನು ಸುಲಭವಾಗಿ ಮುಟ್ಟಲಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Story first published: Wednesday, September 8, 2021, 15:12 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X