IND vs ENG 2ನೇ ಏಕದಿನ: ಒಟ್ಟು ಏಕದಿನ ಮುಖಾಮುಖಿಯಲ್ಲಿ ಹೆಚ್ಚು ಗೆದ್ದಿರುವ ತಂಡ ಯಾವುದು?

ಸದ್ಯ ಇಂಗ್ಲೆಂಡ್‌ನಲ್ಲಿ ಬೀಡು ಬಿಟ್ಟಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದ್ದು, 2-1 ಅಂತರದಿಂದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ವಶಪಡಿಸಿಕೊಂಡ ರೋಹಿತ್ ಶರ್ಮಾ ಬಳಗ ಇದೀಗ ಏಕದಿನ ಸರಣಿಯಲ್ಲಿಯೂ ಸಹ ಜಯ ಸಾಧಿಸಿ ಮತ್ತೊಂದು ಮೈಲಿಗಲ್ಲು ನೆಡುವ ಸನಿಹದಲ್ಲಿದೆ.

1546 ರನ್!: ಸಚಿನ್, ಕೊಹ್ಲಿ ಅಲ್ಲ, ಇಂಗ್ಲೆಂಡ್ ವಿರುದ್ಧ ಅತಿಹೆಚ್ಚು ಏಕದಿನ ರನ್ ಚಚ್ಚಿರುವ ಭಾರತೀಯ ಈತ!1546 ರನ್!: ಸಚಿನ್, ಕೊಹ್ಲಿ ಅಲ್ಲ, ಇಂಗ್ಲೆಂಡ್ ವಿರುದ್ಧ ಅತಿಹೆಚ್ಚು ಏಕದಿನ ರನ್ ಚಚ್ಚಿರುವ ಭಾರತೀಯ ಈತ!

ನಿನ್ನೆಯಷ್ಟೇ ( ಜುಲೈ 12 ) ಭಾರತ ಮತ್ತು ಇಂಗ್ಲೆಂಡ್ ನಡುವಿನ ಪ್ರಥಮ ಏಕದಿನ ಪಂದ್ಯದ ಮೂಲಕ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಿದ್ದು, ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು. ಈ ಗೆಲುವಿನ ಮೂಲಕ 1-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಸದ್ಯ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಳೆ ( ಜುಲೈ 14 ) ನಡೆಯಲಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವತ್ತ ಕಣ್ಣಿಟ್ಟಿದೆ.

3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!3 ತಿಂಗಳಲ್ಲಿ ನಡೆಯುವ ಕೆಎಲ್ ರಾಹುಲ್ ಮದುವೆಗೆ ನಾನೂ ಹೋಗುತ್ತೇನೆ; ಅಚ್ಚರಿ ಮೂಡಿಸಿದ ಅಥಿಯಾ ಶೆಟ್ಟಿ ಹೇಳಿಕೆ!

ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು ಎಷ್ಟು ಪಂದ್ಯಗಳು ನಡೆದಿವೆ ಹಾಗೂ ಈ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ ಎಂಬುದರ ಕುರಿತಾದ ವಿವರ ಮತ್ತು ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದಿರುವ ಪಂದ್ಯಗಳು ಹಾಗೂ ಈ ಪಂದ್ಯಗಳ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ.

ಒಟ್ಟಾರೆ ಏಕದಿನ ಮುಖಾಮುಖಿ

ಒಟ್ಟಾರೆ ಏಕದಿನ ಮುಖಾಮುಖಿ

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕ್ರಿಕೆಟ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 104 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಟೀಮ್ ಇಂಡಿಯಾ 56 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ 43 ಪಂದ್ಯಗಳಲ್ಲಿ ಗೆಲುವನ್ನು ಕಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಒಟ್ಟಾರೆ ಏಕದಿನ ಮುಖಾಮುಖಿ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡಕ್ಕಿಂತ ಟೀಮ್ ಇಂಡಿಯಾ ಹೆಚ್ಚು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡವೆನಿಸಿಕೊಂಡಿದೆ. ಈ ಮುಖಾಮುಖಿ ಪಂದ್ಯಗಳ ಪೈಕಿ 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದರೆ, 2 ಪಂದ್ಯಗಳು ಟೈನಲ್ಲಿ ಮುಗಿದಿವೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇತ್ತಂಡಗಳ ಸಮಬಲ

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇತ್ತಂಡಗಳ ಸಮಬಲ

ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಟ್ಟು 6 ಏಕದಿನ ಪಂದ್ಯಗಳು ಜರುಗಿದ್ದು, ಈ ಪೈಕಿ ಟೀಮ್ ಇಂಡಿಯಾ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಇಂಗ್ಲೆಂಡ್ ಕೂಡ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಈ ಮೂಲಕ ಎರಡೂ ತಂಡಗಳು ಸಹ ಲಾರ್ಡ್ಸ್ ಕ್ರೀಡಾಂಗಣದ ಏಕದಿನ ಮುಖಾಮುಖಿಯಲ್ಲಿ ಸಮಬಲ ಸಾಧಿಸಿವೆ.

ಲಂಕಾದಲ್ಲಿ ನಡಿಬೇಕಾಗಿದ್ದ ಪಂದ್ಯಕ್ಕೆ ಕತ್ತರಿ !! | *Cricket | Oneindia Kannada
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಧಿಕ ರನ್ ಗಳಿಸಿದ ತಂಡ ಯಾವುದು?

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಧಿಕ ರನ್ ಗಳಿಸಿದ ತಂಡ ಯಾವುದು?

1975ರ ಜೂನ್ 7ರಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದಿದ್ದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 334 ರನ್ ಕಲೆಹಾಕಿತ್ತು ಹಾಗೂ ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಲಾರ್ಡ್ಸ್ ಕ್ರೀಡಾಂಗಣದಲ್ಲಿ ದಾಖಲಾದ ತಂಡದ ಗರಿಷ್ಠ ರನ್ ಆಗಿದೆ.


ಇದೇ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 326 ರನ್ ಕಲೆಹಾಕಿತ್ತು ಹಾಗೂ ಇದು ಟೀಂ ಇಂಡಿಯಾ ಲಾರ್ಡ್ಸ್ ಅಂಗಳದಲ್ಲಿ ಕಲೆಹಾಕಿರುವ ಅತಿ ಹೆಚ್ಚು ಏಕದಿನ ರನ್ ಮೊತ್ತವಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, July 13, 2022, 23:43 [IST]
Other articles published on Jul 13, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X