ಮ್ಯಾಂಚೆಸ್ಟರ್‌ನಲ್ಲಿ ಭಾರತ vs ಇಂಗ್ಲೆಂಡ್ ಅಂತಿಮ ಏಕದಿನ: ಈ ಕ್ರೀಡಾಂಗಣದಲ್ಲಿ ಭಾರತಕ್ಕಿದೆ ಕೆಟ್ಟ ರೆಕಾರ್ಡ್!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡ ನಂತರ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಟೀಮ್ ಇಂಡಿಯಾ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 100 ರನ್‌ಗಳ ಹೀನಾಯ ಸೋಲನ್ನು ಕಂಡು ಮುಖಭಂಗಕ್ಕೊಳಗಾಗಿದೆ.

ಕೆರಿಯರ್‌ಗೆ ಮುಳುವಾಯ್ತಾ ಕಳಪೆ ಫಾರ್ಮ್? ಒಂದಲ್ಲಾ ಎರಡಲ್ಲ ಬರೋಬ್ಬರಿ 23 ಪಂದ್ಯಗಳಿಂದ ಕೊಹ್ಲಿ ಔಟ್!ಕೆರಿಯರ್‌ಗೆ ಮುಳುವಾಯ್ತಾ ಕಳಪೆ ಫಾರ್ಮ್? ಒಂದಲ್ಲಾ ಎರಡಲ್ಲ ಬರೋಬ್ಬರಿ 23 ಪಂದ್ಯಗಳಿಂದ ಕೊಹ್ಲಿ ಔಟ್!

ದ್ವಿತೀಯ ಪಂದ್ಯದ ಮುಕ್ತಾಯದ ಹಂತಕ್ಕೆ ಎರಡೂ ತಂಡಗಳು ಸಹ ಸರಣಿಯಲ್ಲಿ 1-1 ಅಂತರದ ಸಮಬಲ ಕಾಯ್ದುಕೊಂಡಿದ್ದು, ಇದೀಗ ತೃತೀಯ ಏಕದಿನ ಪಂದ್ಯ ಸರಣಿಯಲ್ಲಿ ವಿಜೇತ ತಂಡ ಯಾವುದು ಎಂಬುದನ್ನು ನಿರ್ಧರಿಸಲಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡು ತವರಿಗೆ ಮರಳುತ್ತಾ ಅಥವಾ ಇಂಗ್ಲೆಂಡ್ ತಂಡ ಜಯ ಸಾಧಿಸಿ ತವರಿನಲ್ಲಿ ಮತ್ತೊಂದು ಮುಖಭಂಗದಿಂದ ಪಾರಾಗುತ್ತಾ ಎಂಬ ಕುತೂಹಲ ಮೂಡಿದೆ.

12 ಸಿಕ್ಸರ್ ಸಹಿತ ಶತಕ ಸಿಡಿಸಿ ಅಬ್ಬರಿಸಿದ ಮುರಳಿ ವಿಜಯ್!; ಆದರೂ ಹೀನಾಯವಾಗಿ ಸೋತ ತಂಡ12 ಸಿಕ್ಸರ್ ಸಹಿತ ಶತಕ ಸಿಡಿಸಿ ಅಬ್ಬರಿಸಿದ ಮುರಳಿ ವಿಜಯ್!; ಆದರೂ ಹೀನಾಯವಾಗಿ ಸೋತ ತಂಡ

ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಈ ತೃತೀಯ ಏಕದಿನ ಪಂದ್ಯ ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವೆ ಇಲ್ಲಿಯವರೆಗೂ ನಡೆದಿರುವ ಒಟ್ಟಾರೆ ಅಂತರರಾಷ್ಟ್ರೀಯ ಪಂದ್ಯಗಳು ಎಷ್ಟು ಹಾಗೂ ಈ ಪೈಕಿ ಯಾವ ತಂಡ ಎಷ್ಟು ಪಂದ್ಯಗಳಲ್ಲಿ ಜಯ ಸಾಧಿಸಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ ಓದಿ.

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮೇಲುಗೈ

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮೇಲುಗೈ

ಮ್ಯಾಂಚೆಸ್ಟರ್ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇಲ್ಲಿಯವರೆಗೂ ಒಟ್ಟು 8 ಏಕದಿನ ಪಂದ್ಯಗಳನ್ನಾಡಿದ್ದು, ಈ ಪೈಕಿ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ ಉಳಿದ 6 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಈ ಮೂಲಕ ಇತ್ತಂಡಗಳ ನಡುವೆ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟಾರೆ ಏಕದಿನ ಮುಖಾಮುಖಿ ಪಂದ್ಯಗಳಲ್ಲಿ ಭಾರತಕ್ಕಿಂತ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ.

1983ರಲ್ಲಿ ಕೊನೆಯ ಜಯ

1983ರಲ್ಲಿ ಕೊನೆಯ ಜಯ

ಟೀಮ್ ಇಂಡಿಯಾ ಈ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ಕೊನೆಯ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ ಮಣಿಸಿದ್ದು 1983ರಲ್ಲಿ. ನಂತರ ನಡೆದ ಯಾವುದೇ ಏಕದಿನ ಪಂದ್ಯದಲ್ಲಿಯೂ ಕೂಡ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ಈ ಕ್ರೀಡಾಂಗಣದಲ್ಲಿ ಮಣಿಸಲಾಗಿಲ್ಲ. ಹೀಗೆ ಕೆಟ್ಟ ರೆಕಾರ್ಡ್ ಹೊಂದಿರುವ ಈ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಈ ಬಾರಿಯ ಪಂದ್ಯ ಗೆದ್ದರೆ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದೆ.

ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಭಾರತಕ್ಕೆ ಮೇಲುಗೈ

ಒಟ್ಟಾರೆ ಏಕದಿನ ಮುಖಾಮುಖಿಯಲ್ಲಿ ಭಾರತಕ್ಕೆ ಮೇಲುಗೈ

ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತಕ್ಕಿಂತ ಇಂಗ್ಲೆಂಡ್ ಮೇಲುಗೈ ಸಾಧಿಸಿದ್ದರೆ, ಒಟ್ಟಾರೆ ಏಕದಿನ ಕ್ರಿಕೆಟ್ ಮುಖಾಮುಖಿಯಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಇತ್ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 105 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ಜರುಗಿದ್ದು, ಈ ಪೈಕಿ ಟೀಮ್ ಇಂಡಿಯಾ 56 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ 44 ಪಂದ್ಯಗಳಲ್ಲಿ ಗೆದ್ದಿದೆ, 3 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ ಮತ್ತು ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

For Quick Alerts
ALLOW NOTIFICATIONS
For Daily Alerts
Story first published: Saturday, July 16, 2022, 22:00 [IST]
Other articles published on Jul 16, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X