ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!

IND vs ENG: Indian bowlers eye on break Stokes- bairstow pair to continue hold in match

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಎರಡು ದಿನಗಳ ಆಟ ಮುಕ್ತಾಯವಾಗಿದೆ. ಮೊದಲ ಎರಡು ದಿನಗಳಲ್ಲಿಯೂ ಭಾರತ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸಿದೆ. ಬ್ಯಾಟಿಂಗ್ ಬಳಿಕ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಭಾರತ ಇಂಗ್ಲೆಂಡ್ ತಂಡದ ಐದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ.

ಎರಡನೇ ದಿನದಾಟದಲ್ಲಿ ಪಂದ್ಯಕ್ಕಿಂತ ಹೆಚ್ಚಾಗಿ ಮಳೆಯದ್ದೇ ಆಟ ನಡೆದಿತ್ತು. ಹಾಗಿದ್ದದರ ಭಾರತ ಈ ಪಂದ್ಯದ ಮೇಲೆ ತನ್ನ ಬಿಗಿತ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಶಿಸ್ತಿನ ದಾಳಿ ನಡೆಸಿದ ಭಾರತೀಯ ಬೌಲಿಂಗ್ ಪಡೆ ಪ್ರಮುಖ ಐದು ವಿಕೆಟ್ ಸಂಪಾದಿಸಿದೆ. ಇದಕ್ಕೂ ಮೊದಲು ಬ್ಯಾಟಿಂಗ್‌ನಲ್ಲಿ ಭಾರತ 416 ರನ್‌ಗಳಿಸಿ ಆಲೌಟ್ ಆಯಿತು.

ಮೊದಲ ಸೆಶನ್ ಭಾರತಕ್ಕೆ ಪ್ರಮುಖ

ಮೊದಲ ಸೆಶನ್ ಭಾರತಕ್ಕೆ ಪ್ರಮುಖ

ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಪಣತೊಟ್ಟಿರುವ ಭಾರತ ಮೊದಲೆರಡು ದಿನದಲ್ಲಿ ಭಾರೀ ಯಶಸ್ಸು ಸಾಧಿಸಿದೆ. ಸದ್ಯ ಪಂದ್ಯದಲ್ಲಿ ಸಾಧಿಸಿರುವ ಈ ಬಿಗಿಪಟ್ಟು ಮುಂದುವರಿಸಬೇಕಾದರೆ ಮೂರನೇ ದಿನದ ಮೊದಲ ಸೆಶನ್ ಬಹಳ ಮುಖ್ಯವಾಗಿದೆ. ಸದ್ಯ ಕ್ರೀಸ್‌ನಲ್ಲಿರುವ ಜಾನಿ ಬೈರ್‌ಸ್ಟೋವ್ ಹಾಗೂ ಬೆನ್ ಸ್ಟೋಕ್ಸ್ ಜೋಡಿ ಇಂಗ್ಲೆಂಡ್ ತಂಡವನ್ನು ಕುಸಿತದಿಂದ ಪಾರು ಮಾಡುವ ಜವಾಬ್ಧಾರಿ ಹೊತ್ತಿದ್ದಾರೆ. ಈ ಜೋಡಿಯನ್ನು ಬೇರ್ಪಡಿಸುವುದು ಭಾರತೀಯ ಬೌಲರ್‌ಗಳ ಮಹತ್ವದ ಗುರಿಯಾಗಿದೆ.

ಅಪಾಯಕಾರಿ ಜೋಡಿ ಬೇರ್‌ಸ್ಟೋವ್- ಬೆನ್ ಸ್ಟೋಕ್ಸ್

ಅಪಾಯಕಾರಿ ಜೋಡಿ ಬೇರ್‌ಸ್ಟೋವ್- ಬೆನ್ ಸ್ಟೋಕ್ಸ್

ಇಂಗ್ಲೆಂಡ್ ಪರವಾಗಿ ಅಜೇಯವಾಗುಳಿದಿರುವ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೈರ್‌ಸ್ಟೋವ್ ಜೋಡಿ ತಂಡವನ್ನು ಯಾವುದೇ ಹಂತದಿಂದಲೂ ಮೇಲಕ್ಕೆತ್ತಬಲ್ಲ ದಾಂಡಿಗರು. ಇದು ಇತ್ತೀಚೆಗಷ್ಟೇ ಅಅಂತ್ಯವಾಗಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಸಾಬೀತಾಗಿದೆ. ಇಬ್ಬರು ಆಟಗಾರರು ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಭಾರತಕ್ಕೆ ಅಪಾಯಕಾರಿಯಾಗಬಲ್ಲ ಎಲ್ಲಾ ಲಕ್ಷಣಗಳಿದೆ. ಕಿವೀಸ್ ವಿರುದ್ಧಧ ಸರಣಿಯಲ್ಲಿ ರನ್ ಮಳೆ ಸುರಿಸಿರುವ ಈ ಜೋಡಿ ಇಂತಾದ್ದೇ ಸಂಕಷ್ಟದ ಸ್ಥಿತಿಯಿಂದ ಪಾರು ಮಾಡಿದ್ದರು. ಹೀಗಾಗಿ ಭಾರತೀಯ ಬೌಲರ್‌ಗಳು ಈ ಜೋಡಿಗೆ ವಿಶೇಷ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ.

ಭಾರತಕ್ಕೆ ಕೈ ಹಿಡಿದಿದ್ದ ಮಧ್ಯಮ ಕ್ರಮಾಂಕ

ಭಾರತಕ್ಕೆ ಕೈ ಹಿಡಿದಿದ್ದ ಮಧ್ಯಮ ಕ್ರಮಾಂಕ

ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಕೂಡ ಆರಂಭಿಕ ಹುಸಿತ ಕಂಡು ಹಿನ್ನಡೆ ಅನುಭವಿಸಿತ್ತು. ಆದರೆ ಕೆಳ ಮದ್ಯಮ ಕ್ರಮಾಂಕದ ಆಟಗಾರರಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಆಸರೆಯಾದರು. ಈ ಇಬ್ಬರು ಕೂಡ ಭರ್ಜರಿ ಶತಕಗಳಿಸುವ ಮೂಲಕ ಭಾರತದ ರನ್ ಹಿಗ್ಗಿಸಿದರು. ನಂತರ ಅಂತಿಮ ಹಂತದಲ್ಲಿ ಜಸ್ಪ್ರೀತ್ ಬೂಮ್ರಾ ಕೂಡ ಸ್ಟಫೊಟಕ ಪ್ರದರ್ಶನ ನಿಡಿದ ಕಾರಣದಿಂದಾಗಿ ಭಾರತ 416 ರನ್‌ಗಳಿಸಲು ಸಾಧ್ಯವಾಗಿದೆ.

ರಿಶಬ್ ಪಂತ್ ಹೊಡೆದ ಈ ಶಾಟ್ ನೋಡಿ ಎಲ್ಲರೂ ಫಿದಾ | Oneindia Kannada
ಭಾರತದ ವೇಗಿಗಳ ಪರಾಕ್ರಮ

ಭಾರತದ ವೇಗಿಗಳ ಪರಾಕ್ರಮ

ಇನ್ನು ಬಳಿಕ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ದಾಂಡಿಗರ ವಿರುದ್ಧ ಭಾರತೀಯ ಬೌಲಿಂಗ್ ಪಡೆ ಆರಂಭದಿಂದಲೇ ಮೇಲುಗೈ ಸಾಧಿಸುತ್ತಾ ಸಾಗಿದೆ. ಆರಂಭಿಕ ಆಟಗಾರರಾದ ಅಲೆಕ್ಸ್ ಲೀಸ್, ಜಾಕ್‌ ಕ್ರಾವ್ಲೆ ಅವರ ಜೊತೆಗೆ ಒಲ್ಲೀ ಪೋಪ್ ಅವರನ್ನು ಕೂಡ ಭಾರತ ತಂಡದ ನಾಯಕ ಜಸ್ಪ್ರೀತ್ ಬೂಮ್ರಾ ಫೆವಿಲಿಯನ್‌ಗೆ ಅಟ್ಟಿದರು. ನಂತರ ಅದ್ಭುತ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್‌ಗೆ ಮೊಹಮ್ಮದ್ ಸಿರಾಜ್ ಫೆವಿಲಿಯನ್ ದಾರಿ ತೋರಿಸಿದರು. ಇನ್ನು ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದ ಜಾಕ್ ಲೀಚ್ ಮೊಹಮ್ಮದ್ ಶಮಿಗೆ ಬಲಿಯಾಗಿದ್ದಾರೆ.

Story first published: Sunday, July 3, 2022, 9:25 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X