ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

250 ವಿಕೆಟ್ ಪಡೆದು ದಿಗ್ಗಜರ ಸಾಲಿನಲ್ಲಿ ನಿಂತ ಇಶಾಂತ್ ಶರ್ಮ!

By Mahesh
ಇಶಾಂತ್ ಶರ್ಮಾ ಮುಡಿಗೆ ಮತ್ತೊಂದು ಸಾಧನೆಯ ಗರಿ | Oneindia kannada

ಲಂಡನ್, ಆಗಸ್ಟ್ 31 : 2008ರ ಸರಣಿಯಲ್ಲಿ ಆಸ್ಟ್ರೇಲಿಯಾದ ಅಂದಿನ ನಾಯಕ ರಿಕಿ ಪಾಂಟಿಂಗ್ ರನ್ನು ತಮ್ಮ ಇನ್ ಸ್ವಿಂಗ್ ಬೌಲಿಂಗ್ ಮೂಲಕ ಕಾಡಿದ್ದ ಇಶಾಂತ್ ಶರ್ಮ ಬಗ್ಗೆ ಭಾರಿ ನಿರೀಕ್ಷೆಯಿತ್ತು. ಸ್ವಲ್ಪ ತಡವಾಗಿಯಾದರೂ ಇಶಾಂತ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 250 ವಿಕೆಟ್ ಗಳಿಸಿ, ದಿಗ್ಗಜರ ಸಾಲಿನಲ್ಲಿ ನಿಂತಿದ್ದಾರೆ.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ವಿಕೆಟ್ ಗಳಿಸಿದ ಇಶಾಂತ್ ಅವರು ತಮ್ಮ ವೃತ್ತಿ ಬದುಕಿನ 250ನೇ ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಈ ಸಾಧನೆಗೆ 86 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಅತ್ಯಂತ ಕಡಿಮೆ ಗತಿಯಲ್ಲಿ 250 ವಿಕೆಟ್ ಗಳಿಸಿದ ಬೌಲರ್ ಗಳ ಪೈಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

1
42377

ಇದಲ್ಲದೆ, 250 ವಿಕೆಟ್ ಗಳಿಸಿದ ಭಾರತದ ಮೂರನೇ ವೇಗದ ಬೌಲರ್, ಒಟ್ಟಾರೆ, ಏಳನೇ ಬೌಲರ್ ಹಾಗೂ ಇಂಗ್ಲೆಂಡಿನಲ್ಲಿ 50 ವಿಕೆಟ್ ಗಳಿಸಿದ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ.

29 ವರ್ಷ ವಯಸ್ಸಿನ ಇಶಾಂತ್ ಶರ್ಮ ಅವರು ಗಾಯದ ಸಮಸ್ಯೆಯಿಂದ ತಮ್ಮ ವೃತ್ತಿ ಬದುಕಿನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು ಎನ್ನಬಹುದು. ಆದರೆ, 86 ಟೆಸ್ಟ್ ಪಂದ್ಯಗಳನ್ನಾಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಕೆಟ್ ಗಳಿಸಬಹುದಾಗಿತ್ತು ಎಂಬುದು ಕ್ರಿಕೆಟ್ ಪಂಡಿತರ ನಿರೀಕ್ಷೆ. ಸದ್ಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 12 ವಿಕೆಟ್ ಗಳಿಸಿದ್ದಾರೆ.

ಭಾರತದ ಮೂರನೇ ವೇಗಿ

ಭಾರತದ ಮೂರನೇ ವೇಗಿ

250 ವಿಕೆಟ್ ಪಡೆದ ಭಾರತದ ಮೂರನೇ ವೇಗಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಮೊದಲು ಭಾರತದ ಆಲ್​ರೌಂಡರ್​ ಕಪಿಲ್​ ದೇವ್​(434), ಜಹೀರ್​ ಖಾನ್​​(311)ವಿಕೆಟ್​ ಗಳಿಸಿದ್ದಾರೆ.

ಒಟ್ಟಾರೆ, ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಿಂದ 434 ವಿಕೆಟ್ ಗಳಿಸಿದ್ದು, 29.64 ವಿಕೆಟ್ ಗಳಿಕೆ ಸರಾಸರಿ ಹೊಂದಿದ್ದಾರೆ. 23 ಬಾರಿ 5 ವಿಕೆಟ್ ಹಾಗೂ 2 ಬಾರಿ 10 ವಿಕೆಟ್ ಗಳಿಸಿದ್ದಾರೆ.

ಜಹೀರ್ ಖಾನ್ ಅವರು 92 ಪಂದ್ಯಗಳಿಂದ 311 ವಿಕೆಟ್ ಗಳಿಸಿದ್ದು, 32.94 ವಿಕೆಟ್ ಗಳಿಕೆ ಸರಾಸರಿ ಹೊಂದಿದ್ದಾರೆ. 11 ಬಾರಿ 5 ವಿಕೆಟ್ ಹಾಗೂ 1 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದಿದ್ದಾರೆ.

ಇಶಾಂತ್ ಶರ್ಮ 86 ಪಂದ್ಯಗಳಲ್ಲಿ 35.04 ವಿಕೆಟ್ ಗಳಿಕೆ ಸರಾಸರಿಯೊಂದಿಗೆ 8 ಬಾರಿ 5 ವಿಕೆಟ್ ಹಾಗೂ 1 ಬಾರಿ 10 ವಿಕೆಟ್ ಪಡೆದಿದ್ದಾರೆ.

ಭಾರತದ ಏಳನೇ ಬೌಲರ್

ಭಾರತದ ಏಳನೇ ಬೌಲರ್

250ಪ್ಲಸ್ ವಿಕೆಟ್ ಪಡೆದವರ ಪೈಕಿ, ಇಶಾಂತ್, ಭಾರತದ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ.
ಅನಿಲ್ ಕುಂಬ್ಳೆ : 132 ಪಂದ್ಯಗಳಿಂದ 619 ವಿಕೆಟ್
ಕಪಿಲ್ ದೇವ್ : 131 ಪಂದ್ಯಗಳಿಂದ 434
ಹರ್ಭಜನ್ ಸಿಂಗ್ : 103 ಪಂದ್ಯಗಳಿಂದ 417
ಆರ್ ಅಶ್ವಿನ್ : 62 ಪಂದ್ಯಗಳಿಂದ 324
ಜಹೀರ್ ಖಾನ್ : 92 ಪಂದ್ಯಗಳಿಂದ 311
ಬಿಷನ್ ಸಿಂಗ್ ಬೇಡಿ : 67 ಪಂದ್ಯಗಳಿಂದ 266
ಇಶಾಂತ್ ಶರ್ಮ : 86 ಪಂದ್ಯಗಳಿಂದ 250

ಇಂಗ್ಲೆಂಡಿನಲ್ಲಿ 50ಪ್ಲಸ್ ವಿಕೆಟ್ ಗಳಿಕೆ

ಇಂಗ್ಲೆಂಡಿನಲ್ಲಿ 50ಪ್ಲಸ್ ವಿಕೆಟ್ ಗಳಿಕೆ

ಇಂಗ್ಲೆಂಡ್ ವಿರುದ್ಧ ಭಾರತೀಯ ಬೌಲರ್ ಗಳ ಸಾಧನೆ ಗಮನಿಸಿದರೆ, ಇಶಾಂತ್ ಅವರು ವೇಗಿಗಳ ಪೈಕಿ ಕಡಿಮೆ ಪಂದ್ಯಗಳಿಂದ 50 ವಿಕೆಟ್ ಗಳಿಸಿದ್ದಾರೆ. ಈ ಪಟ್ಟಿಯಲ್ಲೂ ಇಶಾಂತ್ ಏಳನೇ ಸ್ಥಾನದಲ್ಲಿದ್ದಾರೆ.

* ಬಿಎಸ್ ಚಂದ್ರಶೇಖರ್ 23 ಪಂದ್ಯದಿಂದ 95ವಿಕೆಟ್
* ಅನಿಲ್ ಕುಂಬ್ಳೆ 19 ಪಂದ್ಯಗಳಿಂದ 92
* ಬಿಷನ್ ಸಿಂಗ್ ಬೇಡಿ: 22 ಪಂದ್ಯಗಳಿಂದ 85
* ಕಪಿಲ್ ದೇವ್ : 27 ಪಂದ್ಯಗಳಿಂದ 85
* ಮಂಕಡ್ : 11 ಪಂದ್ಯಗಳಿಂದ 54
* ಆರ್ ಅಶ್ವಿನ್ : 15 ಪಂದ್ಯಗಳಿಂದ 53
* ಇಶಾಂತ್ ಶರ್ಮ : 16 ಪಂದ್ಯಗಳಿಂದ 50

ನಿಧಾನಗತಿಯಲ್ಲಿ 250 ವಿಕೆಟ್ ಪಡೆದವರು

ನಿಧಾನಗತಿಯಲ್ಲಿ 250 ವಿಕೆಟ್ ಪಡೆದವರು

ಟೆಸ್ಟ್ ಇತಿಹಾಸದಲ್ಲಿ ನಿಧಾನಗತಿಯಲ್ಲಿ 250 ವಿಕೆಟ್ ಪಡೆದವರ ಪಟ್ಟಿಯಲ್ಲಿ ಇಶಾಂತ್ ಎರಡನೇ ಸ್ಥಾನದಲ್ಲಿದ್ದಾರೆ.

ಜಾಕ್ ಕಾಲಿಸ್ (ದಕ್ಷಿಣ ಅಫ್ರಿಕಾ) : 137 ಪಂದ್ಯ
ಇಶಾಂತ್ ಶರ್ಮ (ಭಾರತ) : 86
ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) : 81
ಚಮಿಂಡಾ ವಾಸ್(ಶ್ರೀಲಂಕಾ) : 77
ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ): 74

Story first published: Friday, August 31, 2018, 14:21 [IST]
Other articles published on Aug 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X