ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಎಷ್ಟೇ ಗುರಿ ನೀಡಿದರೂ ನಾವು ಬೆನ್ನಟ್ಟಲಿದ್ದೇವೆ: ಭಾರತಕ್ಕೆ ಬೈರ್‌ಸ್ಟೋವ್ ಎಚ್ಚರಿಕೆ

IND vs ENG: Jonny Bairstow reveals England’s strategy said We’ll be going about it in the same manner

ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯ ಮೂರನೇ ದಿನದಾಟದ ಅಂತ್ಯದಲ್ಲಿ ಭಾರತ ತಂಡ 257 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದೆ. ಎರಡು ದಿನಗಳ ಆಟವಿನ್ನೂ ಬಾಕಿರುವ ಕಾರಣ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 400ಕ್ಕೂ ಅಧಿಕ ಮೊತ್ತದ ಗುರಿ ನೀಡುವ ನಿರೀಕ್ಷೆಯಿದೆ. ಆದರೆ ಇಂಗ್ಲೆಂಡ್ ತಂಡದ ಪ್ರಮುಖ ದಾಂಡಿಗ ಜಾನಿ ಬೈರ್‌ಸ್ಟೋವ್ ಭಾರತ ಎಷ್ಟೇ ದೊಡ್ಡ ಗುರಿ ನೀಡಿದರೂ ತಮ್ಮ ಯೋಜನೆ ಸ್ಪಷ್ಟವಾಗಿದೆ ಎಂದಿದ್ದಾರೆ.

ಜಾನಿ ಬೈರ್‌ಸ್ಟೋವ್ ಈ ಪಂದ್ಯದಲ್ಲಿಯೂ ಶತಕ ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ ಆಸರೆಯಾಗಿದ್ದಾರೆ. ಬೈರ್‌ಸ್ಟೋವ್ ಶತಕದ ನೆರವಿನಿಂದಾಗಿ ಇಂಗ್ಲೆಂಡ್ 285 ರನ್‌ಗಳಿಸಲು ಸಾಧ್ಯವಾಯಿತು. ಉಳಿದಂತೆ ಯಾವ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ. ಹಾಗಿದ್ದರೂ ಜಾನಿ ಬೈರ್‌ಸ್ಟೋವ್ ಭಾರೀ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

ದೊಡ್ಡ ಗುರಿ ನೀಡುವತ್ತ ಭಾರತ

ದೊಡ್ಡ ಗುರಿ ನೀಡುವತ್ತ ಭಾರತ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 132 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಮೂರು ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿದೆ. ಹೀಗಾಗಿ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬೃಹತ್ ಗುರಿ ನಿಡುವತ್ತ ಸಾಗಿದೆ. ಎರಡು ದಿನಗಳ ಸಂಪೂರ್ಣ ಆಟ ಬಾಕಿರುವ ಕಾರಣ ಭಾರತ 400ಕ್ಕೂ ಅಧಿಕ ರನ್‌ಗಳ ಗುರಿ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ವಿಚಾರವಾಗಿ ಬೈರ್‌ಸ್ಟೋವ್ ತಮ್ಮ ತಂಡದ ಬಗ್ಗೆ ಅತಿ ಆತ್ಮವಿಶ್ವಾಸದಿಂದಲೇ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಯೋಜನೆಯಂತೆಯೇ ಮುನ್ನುಗ್ಗಲಿದ್ದೇವೆ

ನಮ್ಮ ಯೋಜನೆಯಂತೆಯೇ ಮುನ್ನುಗ್ಗಲಿದ್ದೇವೆ

ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್ ಹೊಸ ನಾಯಕನಾಗಿ ಆಯ್ಕೆಯಾದ ಬಳಿಕ ಹಾಗೂ ಕೋಚ್ ಆಗಿ ಬ್ರೆಂಡನ್ ಮೆಕ್ಕಲಮ್ ನೇಮಕವಾದ ಬಳಿಕ ಟೆಸ್ಟ್ ಮಾದರಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರು ಪಂದ್ಯದಲ್ಲಿಯೂ ಇದೇ ಮಾದರಿಯಲ್ಲಿ ಭರ್ಜರಿ ಪ್ರದರ್ಶನ ನಿಡಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತ ತಮಡ 400ಕ್ಕೂ ಅಧಿಕ ರನ್‌ಗಳ ಗುರಿಯನ್ನು ನೀಡಿದರೂ ತಮ್ಮ ತಂಡ ಹಿಂದಿನಂತೆಯೇ ಆಕ್ರಮಣಕಾರಿಯಾಗಿಯೇ ಮುನ್ನುಗ್ಗಲಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.

ಎಷ್ಟು ಗುರಿಯನ್ನಾದರೂ ನೀಡಲಿಲ್ಲ

ಎಷ್ಟು ಗುರಿಯನ್ನಾದರೂ ನೀಡಲಿಲ್ಲ

ನಾಲ್ಕನೇ ದಿನದಾಟಕ್ಕೂ ಮುನ್ನ ಮಾತನಾಡಿದ ಬೈರ್‌ಸ್ಟೋವ್ "ಭಾರತ ಎಷ್ಟು ಗುರಿಯನ್ನಾದರೂ ನಿಗದಿಪಡಿಸಲಿ. ಅಂಕಿಅಂಶಗಳತ್ತ ನೋಡುವುದರಲ್ಲಿ ಅರ್ಥವಿಲ್ಲ. ಇದು ಟೆಸ್ಟ್ ಪಂದ್ಯ ಎಂಬುದು ನಮಗೆ ತಿಳಿದಿದೆ. ಇದು ನಾಲ್ಕನೇ ದಿನವಾಗಿದ್ದು ಐದನೇ ದಿನನೇ ದಿನದ ಪಿಚ್‌ನಲ್ಲಿ ನಾವು ಆಡಲಿದ್ದೇವೆ ಎಂಬುದು ನಮಗೆ ಅರಿವಿದೆ. ಅದು ಪರವಾಗಿಲ್ಲ. ಆದರೆ ನಾವು ನಮ್ಮದೇ ರೀತಿಯಲ್ಲಿ ಆಕ್ರಮಣಕಾರಿಯಾಗಿ ಆಡಲಿದ್ದೇವೆ. ಅದೇ ರೀತಿಯಾಗಿ ಈ ಪಂದ್ಯದಲ್ಲಿ ನಾವು ಮುನ್ನುಗ್ಗಲಿದ್ದೇವೆ" ಎಂದಿದ್ದಾರೆ ಜಾನಿ ಬೈರ್‌ಸ್ಟೋವ್.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಮ್ಯಾಟಿ ಪಾಟ್ಸ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಫೋಕ್ಸ್, ಜೇಮೀ ಓವರ್ಟನ್, ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್
ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)
ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

Story first published: Monday, July 4, 2022, 16:01 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X