ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಮೂರನೇ ದಿನವೂ ಕಾಡಲಿದೆಯಾ ಮಳೆ: ಹವಾಮಾನ ವರದಿ ಹೇಳೋದೇನು?

IND vs ENG: June 3 Weather update of Birmingham of 5th test against England Test

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಮುಡಿಸಿದೆ. ಮೊದಲ ಎರಡು ದಿನಗಳಲ್ಲಿ ಭಾರತ ತಮಡ ಅದ್ಭುತ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೂರನೇ ದಿನದಾಟದಲ್ಲಿಯೂ ಮತ್ತೆ ಇಂತಾದ್ದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಈ ಮೂಲಕ ಭಾರೀ ಅಂತರದಿಮದ ಸರಣಿ ವಶ ಪಡಿಸಿಕೊಳ್ಳುವ ಗುರಿ ಹೊಂದಿದೆ.

ಆದರೆ ಈ ಕುತೂಹಲಕಾರಿ ಪಂದ್ಯಕ್ಕೆ ಪದೇ ಪದೆ ಅಡ್ಡಿಯಾಗುತ್ತಿರುವುದು ಮಳೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಮತ್ತೆ ಮತ್ತೆ ಮಳೆಯಾಗುತ್ತಿರುವ ಕಾರಣ ಮೊದಲ ಎರಡು ದಿನಗಳಲ್ಲಿ ಸಾಕಷ್ಟು ಬಾರಿ ಅಡ್ಡಿಯಾಗಿದೆ. ಅದರಲ್ಲೂ ಎರಡನೇ ದಿನ ಹೆಚ್ಚಿನ ಸಂದರ್ಭದಲ್ಲಿ ಮಳೆಯಾಗಿರುವ ಕಾರಣ ನಿರೀಕ್ಷಿತ ಪ್ರಮಾಣದ ಆಟ ನಡೆಯಲಿಲ್ಲ. ಹಾಗಿದ್ದರೂ ಭಾರತ ಇಂಗ್ಲೆಂಡ್ ತಂಡದ ಐವರು ದಾಂಡಿಗರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದೆ.

Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!

ಹಾಗಾದರೆ ಮೂರನೇ ದಿನದ ಹವಾಮಾನ ಹೇಗಿರಲಿದೆ. ಮೂರನೇ ದಿನವೂ ಮಳೆ ಅಡ್ಡಿಯುಂಟು ಮಾಡುವ ಮೂಲಕ ಭಾರತೀಯ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ನಿರಾಸೆಗೆ ಕಾರಣವಾಗಲಿದೆಯಾ? ಮುಂದಿದೆ ಓದಿ..

ಎರಡನೇ ದಿನ ಹೆಚ್ಚು ಮಳೆಯದ್ದೇ ಆಟ

ಎರಡನೇ ದಿನ ಹೆಚ್ಚು ಮಳೆಯದ್ದೇ ಆಟ

ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಮಳೆ ಸಾಕಷ್ಟು ಅಡ್ಡಿಪಡಿಸಿದೆ. ಹಾಗಿದ್ದರೂ ಕೂಡ ಸಿಕ್ಕ ಅವಕಾಶದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನಿಡುವ ಮೂಲಕ ಎರಡನೇ ದಿನವೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 416 ರನ್‌ಗಳಿಸಿ ಆಲೌಟ್ ಆಗಿದ್ದರೆ ಬೌಲಿಂಗ್‌ನಲ್ಲಿಯೂ ಸಮಪೂರ್ಣ ಹಿಡಿತ ಸಾಧಿಸಿದೆ. ಮೊದಲ ದಿನದಾಟ ಮುಕ್ಯಾದ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಐದು ವಿಕೆಟ್ ಕಬಳಿಸಿದ್ದು 84 ರನ್‌ಗಳಿಗೆ ನಿಯಂತ್ರಿಸಿದೆ.

ಭಾನುವಾರದ ಹವಾಮಾನ ವರದಿ ಹೇಗಿದೆ?

ಭಾನುವಾರದ ಹವಾಮಾನ ವರದಿ ಹೇಗಿದೆ?

'ಆಕ್ಯುವೆದರ್' ಪ್ರಕಾರ ಭಾನುವಾರ ಮುಂಜಾನೆ ಕೂಡ ಬರ್ಮಿಂಗ್‌ಹ್ಯಾಮ್‌ನಲ್ಲಿ ಮೋಡಕವಿದ ವಾತಾವರಣದೊಂದಿಗೆ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡುತ್ತಿದೆ. ಈ ದಿನ ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 11 ಡಿಗ್ರಿ ಸೆಲ್ಸಿಯಸ್ ಇರಲಿದೆ. 69 ಶೇಕಡಾದಷ್ಟು ಮೋಡಕವಿದ ವಾತಾವರಣವಿರಲಿದ್ದು 13 ಶೇಕಡಾದಷ್ಟು ಸಿಡಿಲು ಗುಡುಗಿನೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಇನ್ನು ವಾತಾವರಣದಲ್ಲಿನ ತೇವಾಂಶ ಬೆಳಿಗ್ಗೆ ಶೇಕಡಾ 71 ರಷ್ಟಿದ್ದರೆ ಮಧ್ಯಾಹ್ನ ಶೇಕಡಾ 58ಕ್ಕೆ ಇಳಿಯಲಿದೆ.

ಬೌಲಿಂಗ್‌ನಲ್ಲಿಯೂ ಮಿಂಚಿದ ಭಾರತ

ಬೌಲಿಂಗ್‌ನಲ್ಲಿಯೂ ಮಿಂಚಿದ ಭಾರತ

ಇಂಗ್ಲೆಂಡ್ ದಾಂಡಿಗರ ವಿರುದ್ಧ ಭಾರತೀಯ ಬೌಲಿಂಗ್ ಪಡೆ ಆರಂಭದಿಂದಲೇ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಆಟಗಾರರಾದ ಅಲೆಕ್ಸ್ ಲೀಸ್, ಜಾಕ್‌ ಕ್ರಾವ್ಲೆ ಅವರ ಜೊತೆಗೆ ಒಲ್ಲೀ ಪೋಪ್ ಅವರನ್ನು ಕೂಡ ಭಾರತ ತಂಡದ ನಾಯಕ ಜಸ್ಪ್ರೀತ್ ಬೂಮ್ರಾ ಫೆವಿಲಿಯನ್‌ಗೆ ಅಟ್ಟಿದ್ದಾರೆ. ನಂತರ ಅದ್ಭುತ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್‌ಗೆ ಮೊಹಮ್ಮದ್ ಸಿರಾಜ್ ಫೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನೈಟ್‌ವಾಚ್‌ಮನ್ ಆಗಿ ಕಣಕ್ಕಿಳಿದ ಜಾಕ್ ಲೀಚ್ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದಾರೆ.

ಇಂಗ್ಲೆಂಡ್ ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್ ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

ಭಾರತ: ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)
ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

Story first published: Sunday, July 3, 2022, 11:14 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X