ಈತನ ಹುಚ್ಚುತನದಿಂದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಮಂಕಾಯಿತು ಎಂದ ಪೀಟರ್ಸನ್!

ಭಾರತ ಮತ್ತು ಇಂಗ್ಲೆಂಡ್ ನಡುವೆ ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂತ್ಯಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಇಂಗ್ಲೆಂಡ್ ಅಂತಿಮ ದಿನದಾಟದ ಆರಂಭದಲ್ಲಿಯೇ ಅಬ್ಬರಿಸಿದ್ದು 7 ವಿಕೆಟ್‍ಗಳ ಜಯ ಸಾಧಿಸಿದೆ.

ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!

ಟೀಮ್ ಇಂಡಿಯಾ ನೀಡಿದ್ದ 378 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 259 ರನ್ ಕಲೆಹಾಕಿದ್ದು ಟೀಮ್ ಇಂಡಿಯಾ ಬೌಲರ್‌ಗಳ ಮೇಲೆ ಒತ್ತಡ ಹೇರಿದೆ. ಇಂಗ್ಲೆಂಡ್ ತಂಡದ ಪರ ಅಲೆಕ್ಸ್ ಲೀಸ್ ಮತ್ತು ಜ್ಯಾಕ್ ಕ್ರಾವ್ಲೆ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ನಂತರ ಈ ಇಬ್ಬರು ಸೇರಿದಂತೆ ತಂಡದ 3 ವಿಕೆಟ್‍ಗಳು 109 ರನ್‌ಗಳಿಗೆ ಉದುರಿದವು. ಈ ಸಂದರ್ಭದಲ್ಲಿ ನಾಲ್ಕನೇ ವಿಕೆಟ್‍ಗೆ ಜತೆಯಾದ ಜೋ ರೂಟ್ ಮತ್ತು ಜಾನಿ ಬೈರ್ ಸ್ಟೋವ್ ನೆಲಕಚ್ಚಿ ನಿಂತು ದಿನದಾಟದಂತ್ಯಕ್ಕೆ ಪಂದ್ಯವನ್ನು ತಮ್ಮ ಕಡೆ ತಿರುಗಿಸಿಬಿಟ್ಟರು.

IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!IND vs ENG 5ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ; ಇಷ್ಟು ಹೀನಾಯವಾಗಿ ಇಂಗ್ಲೆಂಡ್ ವಿರುದ್ಧ ಯಾರೂ ಸೋತಿಲ್ಲ!

ಜೋ ರೂಟ್ ಅಜೇಯ 76 ರನ್ ಕಲೆಹಾಕಿದ್ದರೆ, ಜಾನಿ ಬೈರ್ ಸ್ಟೋವ್ ಅಜೇಯ 72 ರನ್ ಕಲೆ ಹಾಕಿದರು. ಈ ಮೂಲಕ ಅಂತಿಮ ದಿನದಂದು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಇನ್ನು ಕೇವಲ 119 ರನ್‌ಗಳ ಅಗತ್ಯವಿತ್ತು, ಕೈನಲ್ಲಿ ಇನ್ನೂ 7 ವಿಕೆಟ್‍ಗಳಿತ್ತು. ಹೀಗೆ ಆರಂಭದಲ್ಲಿ ಟೀಮ್ ಇಂಡಿಯಾ ಕಡೆಯಿದ್ದ ಪಂದ್ಯ ನಾಲ್ಕನೇ ದಿನದ ಮುಕ್ತಾಯಕ್ಕೆ ಇಂಗ್ಲೆಂಡ್ ತಂಡದ ಪರ ವಾಲಿತು,ಟೀಮ್ ಇಂಡಿಯಾ ಬಹುತೇಕ ಸೋಲಿನ ಕಡೆ ಮುಖ ಮಾಡಿತ್ತು. ಹೀಗೆ ನಾಲ್ಕನೇ ದಿನದಾಟದಂದು ಪಂದ್ಯ ಟೀಮ್ ಇಂಡಿಯಾ ಕೈತಪ್ಪಿ ಇಂಗ್ಲೆಂಡ್ ಕೈಸೇರಲು ಕಾರಣವೇನೆಂಬುದನ್ನು ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಕ್ಷೇತ್ರರಕ್ಷಣೆ ಸರಿಯಾಗಿ ಆಯೋಜನೆಯಾಗಿರಲಿಲ್ಲ ಎಂದ ಪೀಟರ್ಸನ್

ಕ್ಷೇತ್ರರಕ್ಷಣೆ ಸರಿಯಾಗಿ ಆಯೋಜನೆಯಾಗಿರಲಿಲ್ಲ ಎಂದ ಪೀಟರ್ಸನ್

ಇಂಗ್ಲೆಂಡ್ ನಾಲ್ಕನೇ ದಿನದಾಟದಂದು ಹೆಚ್ಚಿನ ರನ್ ಗಳಿಸಲು ಕಾರಣ ನಾಯಕ ಜಸ್ ಪ್ರೀತ್ ಬುಮ್ರಾ ಸರಿಯಾಗಿ ಫೀಲ್ಡ್ ಸೆಟ್ ಮಾಡದೇ ಇದ್ದದ್ದು ಎಂಬ ಅಭಿಪ್ರಾಯವನ್ನು ಪೀಟರ್ಸನ್ ವ್ಯಕ್ತಪಡಿಸಿದ್ದಾರೆ. ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ನಾನ್ ಸ್ಟ್ರೈಕರ್ ಕಡೆ ಎಂಡ್ ಬ್ಯಾಟ್ ಬೀಸಿದರು. ಆದರೂ ಸಹ ಜಸ್ಪ್ರೀತ್ ಬುಮ್ರಾ ನಾನ್ ಸ್ಟ್ರೈಕರ್ ಎಂಡ್ ಕಡೆ ಫೀಲ್ಡ್ ಸೆಟ್ ಮಾಡಲೇ ಇಲ್ಲ ಎಂದು ಪೀಟರ್ಸನ್ ಅಸಮಾಧಾನ ವ್ಯಕ್ತಪಡಿಸಿದರು.

ಬುಮ್ರಾ ನಾಯಕತ್ವ ಹುಚ್ಚುತನದಿಂದ ಕೂಡಿತ್ತು

ಬುಮ್ರಾ ನಾಯಕತ್ವ ಹುಚ್ಚುತನದಿಂದ ಕೂಡಿತ್ತು

ದಿನದ ಕೊನೆಯ ಗಳಿಗೆಯಲ್ಲಿ ಲಾಂಗ್ ಆಫ್ ಮತ್ತು ಲಾಂಗ್ ಆನ್ ವಿಭಾಗಗಳಲ್ಲಿ ಫೀಲ್ಡ್ ಸೆಟ್ ಮಾಡಿದ್ದು ಬುಮ್ರಾ ನಾಯಕತ್ವದ ಹುಚ್ಚುತನವಾಗಿತ್ತು ಎಂದು ಕೆವಿನ್ ಪೀಟರ್ಸನ್ ಟೀಕಿಸಿದ್ದಾರೆ. ದಿನದಾಟದ ಅಂತ್ಯದಲ್ಲಿ ಫೀಲ್ಡರ್‌ಗಳನ್ನು ಮುಂದಕ್ಕೆ ನಿಲ್ಲಿಸಿ ರನ್ ತಡೆಯುವ ಯತ್ನ ಮಾಡಬೇಕಿತ್ತು, ಆದರೆ ಈ ಕೆಲಸವನ್ನು ಬುಮ್ರಾ ಮಾಡಲಿಲ್ಲ ಎಂದು ಪೀಟರ್ಸನ್ ಇಂಗ್ಲೆಂಡ್ ರನ್ ಗಳಿಸಲು ಕಾರಣವಾದ ಅಂಶಗಳಲ್ಲಿ ಇದೂ ಒಂದು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಇಂಗ್ಲೆಂಡ್‌ಗೆ ಭರ್ಜರಿ ಜಯ

ಇಂಗ್ಲೆಂಡ್‌ಗೆ ಭರ್ಜರಿ ಜಯ

ಅಂತಿಮ ದಿನದಂದು ಗೆಲ್ಲಲು 119 ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ಪರ ಜಾನಿ ಬೈರ್ ಸ್ಟೋವ್ ಮತ್ತು ಜೋ ರೂಟ್ ಇಬ್ಬರೂ ಸಹ ಶತಕ ಸಿಡಿಸಿದ್ದಾರೆ. ಪರಿಣಾಮವಾಗಿ ಇಂಗ್ಲೆಂಡ್ ಅಂತಿಮ ದಿನದಂದು ಯಾವುದೇ ವಿಕೆಟ್ ಕಳೆದುಕೊಳ್ಳದೇ 378 ರನ್ ಕಲೆಹಾಕಿ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 2 - 2 ಸಮಬಲ ಸಾಧಿಸಿದೆ. ಜೋ ರೂಟ್ ಅಜೇಯ 142 ರನ್ ಕಲೆಹಾಕಿದರೆ ಜಾನಿ ಬೈರ್ ಸ್ಟೋವ್ ಅಜೇಯ 114 ರನ್ ಬಾರಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, July 5, 2022, 15:13 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X