ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದು ವಿಶೇಷ ಶತಕ ಬಾರಿಸಿ 6 ವಿವಿಧ ಮೈಲಿಗಲ್ಲು ಸೃಷ್ಟಿಸಿದ ಹಿಟ್‌ಮ್ಯಾನ್; ಫ್ಯಾನ್ಸ್‌ಗೆ ಹಬ್ಬದೂಟ

IND vs ENG: List of milestones created by Rohit Sharma in Oval tests second innings

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಲಂಡನ್ ನಗರದ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆಲ್ಲುವುದರ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿವೆ.

ಭಾರತ vs ಇಂಗ್ಲೆಂಡ್: ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್ಭಾರತ vs ಇಂಗ್ಲೆಂಡ್: ವಿರೇಂದ್ರ ಸೆಹ್ವಾಗ್ ದಾಖಲೆ ಮುರಿದ ಶಾರ್ದೂಲ್ ಠಾಕೂರ್

ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆಲ್ ಔಟ್ ಆಗಿದ್ದ ಟೀಮ್ ಇಂಡಿಯಾ ಪರ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರರು ಸಹ ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ. ನಂತರ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 290 ರನ್ ಬಾರಿಸಿ 99 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿತು. ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದೇ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅಜೇಯ 20 ಹಾಗೂ ಕೆ ಎಲ್ ರಾಹುಲ್ ಅಜೇಯ 22 ರನ್‌ಗಳನ್ನು ಎರಡನೇ ದಿನದಾಟದಂತ್ಯಕ್ಕೆ ಕಲೆಹಾಕಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡರೂ ಸಹ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂರನೇ ದಿನ ಆರಂಭವಾದಾಗ ಟೀಮ್ ಇಂಡಿಯಾ ಆಟಗಾರರ ವಿಕೆಟ್ ಬೇಗನೇ ಬೀಳಲಿವೆಯೇನೋ ಎನ್ನುವ ಭಯವಿತ್ತು. ಹೌದು, ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್ ನೆನಪಿಸಿಕೊಂಡ ಎಲ್ಲರಲ್ಲಿಯೂ ಈ ಅನುಮಾನ ಹುಟ್ಟಿಕೊಂಡಿತ್ತು. ಆದರೆ ಎಲ್ಲರ ಅನುಮಾನವನ್ನು ತಲೆಕೆಳಗಾಗುವಂತೆ ಮಾಡಿದ ರೋಹಿತ್ ಶರ್ಮಾ ಯಾರೂ ಊಹಿಸದ ರೀತಿಯಲ್ಲಿ ಅಬ್ಬರದ ಶತಕವನ್ನು ಬಾರಿಸುವ ಮೂಲಕ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿಯೇ ಮೊಟ್ಟ ಮೊದಲ ಓವರ್‌ಸೀಸ್ ಶತಕವನ್ನು ಸಿಡಿಸಿ ಹೊಸ ಮೈಲಿಗಲ್ಲನ್ನು ನೆಟ್ಟರು.

ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಮೈಲಿಗಲ್ಲು ನಿರ್ಮಿಸಿದ ರೋಹಿತ್ ಶರ್ಮಾ ಮತ್ತು ಉಮೇಶ್ ಯಾದವ್ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಮೈಲಿಗಲ್ಲು ನಿರ್ಮಿಸಿದ ರೋಹಿತ್ ಶರ್ಮಾ ಮತ್ತು ಉಮೇಶ್ ಯಾದವ್

ಹೌದು, ರೋಹಿತ್ ಶರ್ಮಾ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಇದುವರೆಗೂ ಸಹ ಯಾವುದೇ ಓವರ್‌ಸೀಸ್ ಶತಕವನ್ನು ಸಿಡಿಸಿಯೇ ಇರಲಿಲ್ಲ. ಆದರೆ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 204 ಎಸೆತಗಳಲ್ಲಿ ಶತಕವನ್ನು ಬಾರಿಸಿ ರೋಹಿತ್ ಶರ್ಮಾ ತಮ್ಮ ಮೊದಲ ಓವರ್‌ಸೀಸ್ ಟೆಸ್ಟ್ ಸೆಂಚುರಿಯನ್ನು ಚಚ್ಚಿದ್ದಾರೆ. 94 ರನ್ ಗಳಿಸಿದ್ದಾಗ ಮೊಯಿನ್ ಅಲಿ ಎಸೆತಕ್ಕೆ ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ ತನ್ನ ಹಲವಾರು ವರ್ಷದ ಕನಸನ್ನು ನನಸು ಮಾಡಿಕೊಂಡರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಓವರ್‌ಸೀಸ್ ಸೆಂಚುರಿ ಬಾರಿಸಲು ಅಸಮರ್ಥ ಬ್ಯಾಟ್ಸ್‌ಮನ್‌ ಎಂದು ಕಾಲೆಳೆಯುತ್ತಿದ್ದವರಿಗೆ ರೋಹಿತ್ ಶರ್ಮಾ ಸರಿಯಾದ ಉತ್ತರವನ್ನೇ ನೀಡಿದ್ದಾರೆ.

ಹೀಗೆ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಮೊದಲ ಓವರ್‌ಸೀಸ್ ಶತಕವನ್ನು ಬಾರಿಸಿ ಕಾಲೆಳೆಯುವವರ ಬಾಯಿ ಮುಚ್ಚಿಸಿರುವ ರೋಹಿತ್ ಶರ್ಮಾ ಈ ಒಂದು ಶತಕದ ಮೂಲಕ ಬರೋಬ್ಬರಿ 6 ವಿವಿಧ ಮೈಲಿಗಲ್ಲುಗಳನ್ನು ಸೃಷ್ಟಿಸಿದ್ದಾರೆ. ರೋಹಿತ್ ಶರ್ಮಾ ಸೃಷ್ಟಿಸಿರುವ ಆ 6 ವಿವಿಧ ಮೈಲಿಗಲ್ಲುಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ..

ಓವಲ್ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ ಮೂಲಕ ರೋಹಿತ್ ಶರ್ಮಾ ನಿರ್ಮಿಸಿರುವ 6 ಮೈಲಿಗಲ್ಲುಗಳ ಪಟ್ಟಿ

ಓವಲ್ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ ಮೂಲಕ ರೋಹಿತ್ ಶರ್ಮಾ ನಿರ್ಮಿಸಿರುವ 6 ಮೈಲಿಗಲ್ಲುಗಳ ಪಟ್ಟಿ

ಸದ್ಯ ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅತ್ಯದ್ಭುತ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ ಈ ಕೆಳಕಂಡ 6 ಮೈಲಿಗಲ್ಲುಗಳನ್ನು ಮುಟ್ಟಿದ್ದಾರೆ..

1. 2021ರಲ್ಲಿ ರೋಹಿತ್ ಶರ್ಮಾ 1,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ್ದಾರೆ.

2. ಈ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ ಇಂಗ್ಲೆಂಡ್ ನೆಲದಲ್ಲಿ 2,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ್ದಾರೆ.

3. ರೋಹಿತ್ ಶರ್ಮಾ 3,000 ಟೆಸ್ಟ್ ರನ್‌ಗಳನ್ನು ಈ ಇನ್ನಿಂಗ್ಸ್ ಮೂಲಕ ಪೂರೈಸಿಕೊಂಡಿದ್ದಾರೆ.

4. ಈ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ 15,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ್ದಾರೆ.

5. ರೋಹಿತ್ ಶರ್ಮಾ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿಯೇ ಇದೇ ಮೊದಲ ಬಾರಿಗೆ ಓವರ್‌ಸೀಸ್ ಶತಕವನ್ನು ಬಾರಿಸಿದ್ದಾರೆ.

6. ಈ ಇನ್ನಿಂಗ್ಸ್ ಮೂಲಕ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ 11,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ್ದಾರೆ.

ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡ ರೋಹಿತ್ ಶರ್ಮಾ

ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಎಷ್ಟೇ ಉತ್ತಮ ಆಟವನ್ನಾಡಿದರೂ ಕೂಡ ಟೀಕಾಕಾರರು ಓವರ್‌ಸೀಸ್ ಶತಕವನ್ನು ಬಾರಿಸದ ಕಾರಣ ರೋಹಿತ್ ಶರ್ಮಾ ಕಾಲನ್ನು ಎಳೆಯುತ್ತಿದ್ದರು. ರೋಹಿತ್ ಶರ್ಮಾ ಓರ್ವ ಅತ್ಯುತ್ತಮ ಆಟಗಾರನಾದರೂ ಸಹ ಓವರ್‌ಸೀಸ್ ಶತಕವನ್ನು ಬಾರಿಸಲು ಆಗಿಲ್ಲ ಎಂಬ ನೋವು ಅವರ ಅಭಿಮಾನಿಗಳಲ್ಲಿಯೂ ಇತ್ತು. ಆದರೆ ಇದೀಗ ಈ ಎಲ್ಲಾ ಟೀಕೆ, ನೋವು ಮತ್ತು ಚಿಂತೆಗಳಿಗೂ ಬ್ರೇಕ್ ಹಾಕಿರುವ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್ ಜೀವನದ ಚೊಚ್ಚಲ ಓವರ್‌ಸೀಸ್ ಶತಕವನ್ನು ಬಾರಿಸಿ ತಮ್ಮ ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

127ಕ್ಕೆ ತನ್ನ ಅಮೋಘ ಆಟ ಮುಗಿಸಿದ ರೋಹಿತ್

127ಕ್ಕೆ ತನ್ನ ಅಮೋಘ ಆಟ ಮುಗಿಸಿದ ರೋಹಿತ್

204 ಎಸೆತಗಳಲ್ಲಿ ಶತಕ ಪೂರೈಸಿ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ ರೋಹಿತ್ ಶರ್ಮಾ 127 ರನ್ ಗಳಿಸಿ ರಾಬಿನ್ಸನ್ ಎಸೆತದಲ್ಲಿ ಕ್ರಿಸ್ ವೋಕ್ಸ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಪಯಣ ಬೆಳೆಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ದೊಡ್ಡ ಮಟ್ಟದಲ್ಲಿ ರೋಹಿತ್ ಶರ್ಮಾ ಆಸರೆಯಾಗಿದ್ದಾರೆ.

Story first published: Saturday, September 4, 2021, 22:00 [IST]
Other articles published on Sep 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X