ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ 4 ಟಿ ಟ್ವೆಂಟಿ ಸರಣಿಯ ಫಲಿತಾಂಶಗಳು; ಕೊಹ್ಲಿ ದರ್ಬಾರ್!

IND vs ENG: List of winners in T20 series between India and England so far

ಸದ್ಯ ಇಂಗ್ಲೆಂಡ್ ನೆಲದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಆತಿಥೇಯ ಆಂಗ್ಲರ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ‌ಆಡಿ ಗೆಲುವನ್ನು ಕಂಡಿದೆ.

IND vs ENG: ಪ್ರಥಮ ಪಂದ್ಯದಲ್ಲಿ ಕಣಕ್ಕಿಳಿಯುವ ಭಾರತ ಸಂಭಾವ್ಯ ತಂಡ; ರೋಹಿತ್ ಜತೆ ಈತ ಆರಂಭಿಕ ಆಟಗಾರIND vs ENG: ಪ್ರಥಮ ಪಂದ್ಯದಲ್ಲಿ ಕಣಕ್ಕಿಳಿಯುವ ಭಾರತ ಸಂಭಾವ್ಯ ತಂಡ; ರೋಹಿತ್ ಜತೆ ಈತ ಆರಂಭಿಕ ಆಟಗಾರ

ಇತ್ತಂಡಗಳ ನಡುವೆ ಜುಲೈ 7ರ ಗುರುವಾರದಂದು ಸೌತಂಪ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ 50 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿತು ಹಾಗೂ ಜುಲೈ 9ರಂದು ಎಡ್ಜ್ ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕೂಡಾ ಟೀಮ್ ಇಂಡಿಯಾ 49 ರನ್‌ಗಳ ಅಂತರದಲ್ಲಿ ಜಯ ಸಾಧಿಸಿತು ಹಾಗೂ ಸರಣಿಯನ್ನು ವಶಪಡಿಸಿಕೊಂಡಿತು. ನಂತರ ಜುಲೈ 10ರ ಭಾನುವಾರದಂದು ನಾಟಿಂಗ್ ಹ್ಯಾಮ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಇಂಗ್ಲೆಂಡ್ 17 ರನ್‌ಗಳ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಮುಖಭಂಗದಿಂದ ಪಾರಾಯಿತು ಹಾಗೂ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.

IND vs ENG: ಮೈದಾನದಲ್ಲಿ ನಾಯಕ ರೋಹಿತ್ ಶರ್ಮಾಗೆ ಬೈದ ಹಾರ್ದಿಕ್ ಪಾಂಡ್ಯ? ವಿಡಿಯೋ ವೈರಲ್IND vs ENG: ಮೈದಾನದಲ್ಲಿ ನಾಯಕ ರೋಹಿತ್ ಶರ್ಮಾಗೆ ಬೈದ ಹಾರ್ದಿಕ್ ಪಾಂಡ್ಯ? ವಿಡಿಯೋ ವೈರಲ್

ಹೀಗೆ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾದ ನಂತರ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿಯೂ ಕೂಡ ಜಯ ಸಾಧಿಸುವುದರ ಮೂಲಕ ತಮ್ಮ ಗೆಲುವಿನಾಗಲೋಟವನ್ನು ಮುಂದುವರೆಸಿದ್ದಾರೆ. ಹಾಗಿದ್ದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿರುವ ಕೊನೆಯ 4 ಟಿ ಟ್ವೆಂಟಿ ಸರಣಿಗಳ ಪೈಕಿ ಯಾವ ತಂಡ ಎಷ್ಟು ಸರಣಿಗಳನ್ನು ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಮುಂದೆ ಇದೆ ಓದಿ.

ಭಾರತ vs ಇಂಗ್ಲೆಂಡ್ ಕೊನೆಯ 4 ಟಿ ಟ್ವೆಂಟಿ ಸರಣಿ

ಭಾರತ vs ಇಂಗ್ಲೆಂಡ್ ಕೊನೆಯ 4 ಟಿ ಟ್ವೆಂಟಿ ಸರಣಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿರುವ ಕೊನೆಯ 4 ಟಿ ಟ್ವೆಂಟಿ ಸರಣಿಗಳ ಫಲಿತಾಂಶದ ಪಟ್ಟಿ ಕೆಳಕಂಡಂತಿದೆ.

ಈ ಬಾರಿ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 2-1 ಅಂತರದಿಂದ ಸರಣಿಯನ್ನು ಗೆದ್ದು ಬೀಗಿದೆ.

2021ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿದ್ದ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸಿತ್ತು.


2018ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದಿದ್ದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಜಯ ಸಾಧಿಸಿತ್ತು.

2017ರಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 2-1 ಅಂತರದಲ್ಲಿ ಸರಣಿಯನ್ನು ಗೆದ್ದು ಬೀಗಿತ್ತು.

ಕಿಂಗ್ ಕೊಹ್ಲಿ ದರ್ಬಾರ್

ಕಿಂಗ್ ಕೊಹ್ಲಿ ದರ್ಬಾರ್

ಈ ಬಾರಿಯ ಪ್ರವಾಸದಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮ ನಾಯಕತ್ವದಡಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದರೆ, ಕಳೆದ 3 ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸಿ ಗೆಲುವು ತಂದಿದ್ದರು. ಹೌದು, 2017, 2018 ಮತ್ತು 2021ರಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ ಟ್ವೆಂಟಿ ಸರಣಿಗಳಲ್ಲಿ ಟೀಮ್ ಇಂಡಿಯಾವನ್ನು ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸಿ ಯಶಸ್ವಿಯಾಗಿದ್ದರು. ಈ ಮೂಲಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ತಾನು ಮುನ್ನಡೆಸಿದ ಎಲ್ಲಾ ಟಿ ಟ್ವೆಂಟಿ ಸರಣಿಯಲ್ಲಿಯೂ ಗೆದ್ದಿರುವ ಸಾಧನೆ ಮಾಡಿದ್ದಾರೆ.

ಅಡ್ಡ ಬಂದ ಇಂಗ್ಲೆಂಡ್ ಬೌಲರ್ ಗೆ ಹೊಡಿತೀನಿ ಎಂದ‌ ಪಂತ್ ಗೆ ರೋಹಿತ್ ಶರ್ಮಾ ಹೇಳಿದ್ದೇನು? | *Cricket | OneIndia
2014ರಲ್ಲಿ ಸೋಲು

2014ರಲ್ಲಿ ಸೋಲು

ಇನ್ನು ಇದಕ್ಕೂ ಮುನ್ನ 2014ರಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕೈಕ ಟಿ ಟ್ವೆಂಟಿ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 3 ರನ್‌ಗಳ ಸೋಲನ್ನು ಅನುಭವಿಸಿತ್ತು. ಈ ಪಂದ್ಯದಲ್ಲಿ ತಂಡವನ್ನು ಎಂ ಎಸ್ ಧೋನಿ ನಾಯಕನಾಗಿ ಮುನ್ನಡೆಸಿದ್ದರು. ಹಾಗೂ 2013ರಲ್ಲಿ ನಡೆದಿದ್ದ 2 ಪಂದ್ಯಗಳ ಟಿ ಟ್ವೆಂಟಿ ಸರಣಿ ಡ್ರಾನಲ್ಲಿ ಅಂತ್ಯಗೊಂಡಿತ್ತು.

Story first published: Monday, July 11, 2022, 19:53 [IST]
Other articles published on Jul 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X