ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮ್ಯಾಂಚೆಸ್ಟರ್‌ ಟೆಸ್ಟ್: ಕೊನೆ ಕ್ಷಣದಲ್ಲಿ ಪಂದ್ಯ ನಡೆಸುವ ತೀರ್ಮಾನ ಬದಲಿಸಿದ ಇಂಗ್ಲೆಂಡ್!

IND vs ENG: Manchester test likely to be postponed for by two days

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಸರಣಿ ಎಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. ಸರಣಿ ಕೊನೆಯ ಹಂತಕ್ಕೆ ಬಂದು ತಲುಪಿದ್ದು 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಲಂಡನ್ ನಗರದ ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10ರಂದು ಆರಂಭವಾಗಬೇಕಿದೆ.

ಭಾರತದ ಈ ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡುವುದು ಬಲು ಕಠಿಣ: ಮಾರ್ಕ್ ವುಡ್ಭಾರತದ ಈ ನಾಲ್ವರು ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡುವುದು ಬಲು ಕಠಿಣ: ಮಾರ್ಕ್ ವುಡ್

ಇದುವರೆಗೂ ನಡೆದಿರುವ 4 ಪಂದ್ಯಗಳ ಪೈಕಿ ಭಾರತ ತಂಡ 2 ಪಂದ್ಯಗಳಲ್ಲಿ ಜಯವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದೆ. ಅತ್ತ ಸರಣಿಯಲ್ಲಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿರುವ ಇಂಗ್ಲೆಂಡ್ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯನ್ನು ಡ್ರಾ ಮಾಡಿಕೊಳ್ಳುವ ಯೋಜನೆಯಲ್ಲಿದೆ.

ಹೀಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ, ಸರಣಿ ಯಾರ ಪಾಲಾಗಲಿದೆ ಅಥವಾ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆಯಾ ಎಂಬ ಕುತೂಹಲ ಭಾರತ ಮತ್ತು ಇಂಗ್ಲೆಂಡ್ ಕ್ರೀಡಾಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ ನಿನ್ನೆಯಿಂದ ನಡೆಯುತ್ತಿರುವ ವಿದ್ಯಮಾನಗಳು ಈ ಕುತೂಹಲವನ್ನು ಬದಿಗೆ ಸರಿಸಿದ್ದು ಪಂದ್ಯ ನಡೆಯುತ್ತದೋ ಇಲ್ಲವೋ ಎಂಬ ಹೊಸ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಭಾರತದ ಫಿಸಿಯೋ ಯೋಗೇಶ್ ಪಾರ್ಮರ್ ಕೊರೊನಾ ಸೋಂಕಿಗೆ ಒಳಗಾಗಿದ್ದು ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ ನಂತರ ತಂಡದ ಉಳಿದ ಸಿಬ್ಬಂದಿ ವರ್ಗ ಮತ್ತು ಆಟಗಾರರ ಕೊರೋನಾ ಸೋಂಕಿನ ಪರೀಕ್ಷೆ ನೆಗೆಟಿವ್ ವರದಿ ಬಂದ ನಂತರ ಪಂದ್ಯ ನಡೆಸುವುದಾಗಿ ಇಸಿಬಿ ತಿಳಿಸಿತ್ತು.

ಮ್ಯಾಂಚೆಸ್ಟರ್‌ ಟೆಸ್ಟ್: ಟೀಮ್ ಇಂಡಿಯಾದ ಈ ಇಬ್ಬರು ಬಲಿಷ್ಠ ಆಟಗಾರರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಮ್ಯಾಂಚೆಸ್ಟರ್‌ ಟೆಸ್ಟ್: ಟೀಮ್ ಇಂಡಿಯಾದ ಈ ಇಬ್ಬರು ಬಲಿಷ್ಠ ಆಟಗಾರರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ

ಆದರೆ ಇದೀಗ ಪಂದ್ಯ ಆರಂಭವಾಗಲು ಇನ್ನೇನು ಕೆಲವೇ ಗಂಟೆಗಳು ಇರುವಾಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಪಂದ್ಯದ ಕುರಿತಾಗಿ ಭಿನ್ನ ವಿಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲನೇ ದಿನದಾಟ ಆರಂಭವಾಗುವುದರ ಕುರಿತು ಅನುಮಾನಗಳು ಮೂಡಿದ್ದು ಸದ್ಯ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಅಧಿಕಾರಿಗಳು ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಪಂದ್ಯ ಮುಂದೂಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಚಿಂತನೆ

ಪಂದ್ಯ ಮುಂದೂಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಚಿಂತನೆ

ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಐದನೇ ಟೆಸ್ಟ್ ಪಂದ್ಯವನ್ನು ಮುಂದೂಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿದೆ. ಹೌದು, ಇಂದು ( ಸೆಪ್ಟೆಂಬರ್ 10 ) ಓಲ್ಡ್ ಟ್ರಾಫೊರ್ಡ್ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯವನ್ನು ಕೊರೋನಾ ಮತ್ತು ಮಳೆಯ ಕಾರಣದಿಂದಾಗಿ 2 ದಿನಗಳ ಕಾಲ ಮುಂದೂಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತೀರ್ಮಾನ ಮಾಡಿದೆ.

5ನೇ ಪಂದ್ಯ ರದ್ದಾಗಲು ಅಸಲಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್ | Oneindia Kannada
ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಿಸಿಸಿಐ ಅಧಿಕಾರಿಗಳು

ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಿಸಿಸಿಐ ಅಧಿಕಾರಿಗಳು

ಇನ್ನು ಇಂದು ಆರಂಭವಾಗಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು 2 ದಿನಗಳ ಕಾಲ ಮುಂದೂಡುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ ತೀರ್ಮಾನಕ್ಕೆ ಬಿಸಿಸಿಐನ ಅಧಿಕಾರಿಯೋರ್ವರು ಅಸ್ತು ಎಂದಿದ್ದಾರೆ. ಆದರೆ ಬಿಸಿಸಿಐನ ಮತ್ತೊಬ್ಬ ಅಧಿಕಾರಿ 2 ದಿನಗಳ ಕಾಲ ಪಂದ್ಯವನ್ನು ಮುಂದೂಡುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತೀರ್ಮಾನಕ್ಕೆ ಒಲ್ಲೆ ಎಂದಿದ್ದು ಪಂದ್ಯವನ್ನು ನಡೆಸದೇ ರದ್ದು ಮಾಡಲು ಸಲಹೆ ನೀಡಿದ್ದಾರೆ.

ಪಂದ್ಯ ರದ್ದಾದರೆ ಭಾರತದ ಪಾಲಾಗಲಿದೆ ಟ್ರೋಫಿ

ಪಂದ್ಯ ರದ್ದಾದರೆ ಭಾರತದ ಪಾಲಾಗಲಿದೆ ಟ್ರೋಫಿ

ಇನ್ನು ಸದ್ಯದ ಮಹತ್ವದ ಬೆಳವಣಿಗೆಗಳನ್ನು ಗಮನಿಸಿದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ನಡೆಯುವುದು ಬಹುತೇಕ ಅನುಮಾನವಾಗಿದೆ. ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು 2 ದಿನಗಳ ಕಾಲ ಮುಂದೂಡಲ್ಪಟ್ಟರೆ ಸೆಪ್ಟೆಂಬರ್ 19ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ತೊಂದರೆಯಾಗಲಿದೆ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ಸಾಧ್ಯತೆ ಹೆಚ್ಚಾಗಿದ್ದು ಈಗಾಗಲೇ ಸರಣಿಯಲ್ಲಿ 2-1 ಅಂತರದ ಮುನ್ನಡೆಯನ್ನು ಸಾಧಿಸಿರುವ ಭಾರತಕ್ಕೆ ಟ್ರೋಫಿ ಲಭಿಸಲಿದೆ. ಈ ಮೂಲಕ ಭಾರತ ಇಂಗ್ಲೆಂಡ್ ನೆಲದಲ್ಲಿ ಬರೋಬ್ಬರಿ 14 ವರ್ಷಗಳ ಬಳಿಕ ಟೆಸ್ಟ್ ಟ್ರೋಫಿಯನ್ನು ತನ್ನದಾಗಿಸಿಕೊಂಡು ಇತಿಹಾಸವನ್ನು ಮರು ಸೃಷ್ಟಿ ಮಾಡಲಿದೆ.

Story first published: Friday, September 10, 2021, 13:22 [IST]
Other articles published on Sep 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X