ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಓವಲ್ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ

IND vs ENG: Narendra Modi showers praise on India after their win over England in the Oval test
ಮೋದಿ ಫೋಟೋ ಶೇರ್ ಮಾಡಿ ಇಂಗ್ಲೆಂಡ್ ಕಾಲೆಳೆದ ವೀರೇಂದ್ರ ಸೆಹ್ವಾಗ್ | Oneindia Kannada

ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 157 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ 50 ವರ್ಷಗಳ ನಂತರ ಓವಲ್ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿದ ಇತಿಹಾಸವನ್ನು ನಿರ್ಮಿಸಿದೆ.

ಈ ಗೆಲುವಿಗೆ ಹಲವಾರು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟಿಗರು ಶುಭಾಶಯಗಳನ್ನು ಕೋರಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡುವ ಮೂಲಕ ಟೀಮ್ ಇಂಡಿಯಾ ವಿಜಯಕ್ಕೆ ಶುಭಾಶಯವನ್ನು ಕೋರಿದ್ದಾರೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಕೊರೊನಾ ಲಸಿಕಾ ವಿತರಣೆ ಮತ್ತು ಕ್ರಿಕೆಟ್ ಪಿಚ್ ಎರಡರಲ್ಲೂ ಇದು ಅತ್ಯುತ್ತಮ ದಿನವಾಗಿದ್ದು ಎರಡರಲ್ಲೂ ಭಾರತ ಗೆದ್ದಿದೆ' ಎಂದು ಬರೆದುಕೊಳ್ಳುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಇತಿಹಾಸ ಸೃಷ್ಟಿಸಿದ ಭಾರತ:

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇತ್ತೀಚೆಗಷ್ಟೇ ಮುಗಿದಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 157 ರನ್‌ಗಳ ಅಮೋಘ ಜಯವನ್ನು ಸಾಧಿಸುವುದರ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಹೌದು, ಬರೋಬ್ಬರಿ 50 ವರ್ಷಗಳ ಬಳಿಕ ಓವಲ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸುವುದರ ಮೂಲಕ ಹೊಸದೊಂದು ಇತಿಹಾಸವನ್ನೇ ಕೊಹ್ಲಿ ಪಡೆ ಸೃಷ್ಟಿಸಿದೆ.

ಪಂದ್ಯದ ವಿವರ:

ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವಿರಾಟ್ ಕೊಹ್ಲಿ ಪಡೆ ಮೊದಲನೇ ಇನ್ನಿಂಗ್ಸ್‌ನಲ್ಲಿ 191 ರನ್‌ಗಳ ಸಾಮಾನ್ಯ ಮೊತ್ತವನ್ನು ಕಲೆ ಹಾಕಿತು. ಅತ್ತ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 290 ರನ್ ಗಳಿಸುವುದರ ಮೂಲಕ 90 ರನ್‌ಗಳ ಮುನ್ನಡೆಯನ್ನು ಸಾಧಿಸಿತು. ಮೊದಲನೇ ಇನ್ನಿಂಗ್ಸ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ 466 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 368 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಟೀಮ್ ಇಂಡಿಯಾ ನೀಡಿದ ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಇಂಗ್ಲೆಂಡ್ ಭಾರತೀಯ ಬೌಲರ್‌ಗಳ ಅಮೋಘ ಪ್ರದರ್ಶನದ ಮುಂದೆ ಮಂಕಾಗಿ 210 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ 157 ರನ್‌ಗಳ ಸೋಲನ್ನು ಕಂಡಿತು. ಹೀಗೆ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಿ 50 ವರ್ಷಗಳ ಬಳಿಕ ಓವಲ್ ಕ್ರೀಡಾಂಗಣದಲ್ಲಿ ಗೆಲುವು ಸಾಧಿಸಿದ ಇತಿಹಾಸವನ್ನು ಸೃಷ್ಟಿಸಿದೆ.

'ವಿಶ್ವ ಕ್ರಿಕೆಟ್‍ನಲ್ಲಿ ಭಾರತ ಪವರ್‌ಹೌಸ್, ಕೊಹ್ಲಿ ಸೂಪರ್‌ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ'ವಿಶ್ವ ಕ್ರಿಕೆಟ್‍ನಲ್ಲಿ ಭಾರತ ಪವರ್‌ಹೌಸ್, ಕೊಹ್ಲಿ ಸೂಪರ್‌ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ

ಶೇನ್ ವಾರ್ನ್ ಕಡೆಯಿಂದಲೂ ಭಾರತಕ್ಕೆ ಪ್ರಶಂಸೆ:

ಕಳೆದ ಕೆಲ ವರ್ಷಗಳಿಂದ ಟೆಸ್ಟ್ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾ ನೀಡುತ್ತಿರುವ ಉತ್ತಮ ಪ್ರದರ್ಶನವನ್ನು ಕೊಂಡಾಡಿರುವ ಶೇನ್ ವಾರ್ನ್ 'ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‍ನಲ್ಲಿ ಪವರ್‌ಹೌಸ್ ಆಗಿದ್ದು, ಆ ತಂಡಕ್ಕೆ ವಿರಾಟ್ ಕೊಹ್ಲಿಯಂತಹ ಅತ್ಯುತ್ತಮ ಸೂಪರ್‌ಸ್ಟಾರ್ ರೀತಿಯ ನಾಯಕ ಸಿಕ್ಕಿರುವುದು ದೊಡ್ಡ ಮಟ್ಟದ ಯಶಸ್ಸಿಗೆ ಕಾರಣ. ವಿರಾಟ್ ಕೊಹ್ಲಿ ಯಾವಾಗಲೂ ನಾವು ಆಸ್ಟ್ರೇಲಿಯಾಕ್ಕೆ ಹೋಗಿ ಸರಣಿ ಗೆಲ್ಲುತ್ತೇವೆ, ಇಂಗ್ಲೆಂಡ್ ಪ್ರವಾಸ ಕೈಗೊಂಡು ಸರಣಿ ಗೆಲ್ಲುತ್ತೇವೆ ಎಂಬ ವಿಶ್ವಾಸದೊಂದಿಗೆ ವಿದೇಶಿ ಪ್ರಯಾಣ ಕೈಗೊಂಡು ಅವರ ನೆಲದಲ್ಲಿಯೇ ಎದುರಾಳಿಗಳನ್ನು ಸೋಲಿಸುತ್ತಿದ್ದಾರೆ' ಎಂದು ವಿರಾಟ್ ಕೊಹ್ಲಿ ಮತ್ತು ಭಾರತ ತಂಡವನ್ನು ಕೊಂಡಾಡಿದರು.

Story first published: Tuesday, September 7, 2021, 15:54 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X