ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ರಿಷಭ್ ಪಂತ್‌ಗೆ ಪಂದ್ಯಶ್ರೇಷ್ಠ ಕೊಟ್ಟದ್ದು ಮೋಸ, ಪ್ರಶಸ್ತಿ ಈತನಿಗೆ ಸಿಗಬೇಕಿತ್ತು!

IND vs ENG: Netizens disappointed as Hardik Pandya missed Man Of the match in 3rd ODI

ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 2-1 ಅಂತರದ ಜಯ ಸಾಧಿಸಿತ್ತು ಹಾಗೂ ಇದೀಗ ಏಕದಿನ ಸರಣಿಯಲ್ಲಿಯೂ ಕೂಡಾ ಜಯ ಸಾಧಿಸುವ ಮೂಲಕ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಭಾರತ ಏಕದಿನ ಸರಣಿಯಲ್ಲಿಯೂ ಸಹ 2-1 ಅಂತರದ ಜಯ ಸಾಧಿಸಿದೆ.

ರವಿಶಾಸ್ತ್ರಿಗೆ ಕ್ರಿಕೆಟ್ ಮೈದಾನದಲ್ಲೇ ಶಾಂಪೈನ್ ಬಾಟಲ್ ಗಿಫ್ಟ್‌ ನೀಡಿದ ರಿಷಭ್ ಪಂತ್: Videoರವಿಶಾಸ್ತ್ರಿಗೆ ಕ್ರಿಕೆಟ್ ಮೈದಾನದಲ್ಲೇ ಶಾಂಪೈನ್ ಬಾಟಲ್ ಗಿಫ್ಟ್‌ ನೀಡಿದ ರಿಷಭ್ ಪಂತ್: Video

ಮೊದಲಿಗೆ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಏಕದಿನ ಪಂದ್ಯವನ್ನು ಗೆದ್ದಿದ್ದ ಟೀಮ್ ಇಂಡಿಯಾ ನಂತರ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಸೋತು ಸರಣಿ ಸಮಬಲಗೊಂಡಿತ್ತು. ಹೀಗಾಗಿ ಪ್ರವಾಸಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು ತವರು ನೆಲದಲ್ಲಿಯೇ ಸೋಲಿಸಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳಬೇಕೆಂದರೆ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಏಕದಿನ ಪಂದ್ಯವನ್ನು ಕಡ್ಡಾಯವಾಗಿ ಗೆಲ್ಲಲೇಬೇಕಾದ ಅನಿವಾರ್ಯವಿತ್ತು.

IND vs ENG: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಧೋನಿ, ಅಜರುದ್ದೀನ್ ಸಾಲಿಗೆ ಸೇರಿದ ರೋಹಿತ್ ಶರ್ಮಾIND vs ENG: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಧೋನಿ, ಅಜರುದ್ದೀನ್ ಸಾಲಿಗೆ ಸೇರಿದ ರೋಹಿತ್ ಶರ್ಮಾ

ಹೀಗೆ ಸಾಕಷ್ಟು ದೊಡ್ಡ ಮಟ್ಟದ ಮಹತ್ವವನ್ನು ಪಡೆದುಕೊಂಡಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರ ಅದ್ಭುತ ಆಟದ ನೆರವಿನಿಂದ 5 ವಿಕೆಟ್‍ಗಳ ಜಯವನ್ನು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 259 ರನ್‌ಗಳಿಗೆ ಆಲ್ ಔಟ್ ಆಗಿ ಭಾರತಕ್ಕೆ 260 ರನ್‌ಗಳ ಗುರಿಯನ್ನು ನೀಡಿತ್ತು. ಇತ್ತ ಈ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 72 ರನ್‌ಗಳಿಗೆ ತನ್ನ ಮೊದಲ 4 ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಳ್ಳುವುದರ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ 133 ರನ್‌ಗಳ ಜತೆಯಾಟವಾಡುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದರು. ಹಾರ್ದಿಕ್ ಪಾಂಡ್ಯ 55 ಎಸೆತಗಳಲ್ಲಿ 71 ರನ್ ಗಳಿಸಿದರೆ, ರಿಷಭ್ ಪಂತ್ 113 ಎಸೆತಗಳಲ್ಲಿ ಅಜೇಯ 125 ರನ್ ಕಲೆ ಹಾಕಿದರು. ಈ ಮೂಲಕ ಟೀಮ್ ಇಂಡಿಯಾ 42.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು.

ರಿಷಭ್ ಪಂತ್ ಗೆ ಪಂದ್ಯಶ್ರೇಷ್ಠ ಕೊಟ್ಟದ್ದಕ್ಕೆ ಕಿಡಿ

ರಿಷಭ್ ಪಂತ್ ಚೇಸಿಂಗ್ ವೇಳೆ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದಾಗ ಅಜೇಯ 125 ರನ್ ಕಲೆಹಾಕಿ ತಂಡಕ್ಕೆ ಆಸರೆಯಾದರು. ಹೀಗಾಗಿ ತಮ್ಮ ಉತ್ತಮ ಆಟಕ್ಕೆ ರಿಷಭ್ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆದರೆ ಈ ನಿರ್ಣಯಕ್ಕೆ ಕಿಡಿಕಾರಿರುವ ಕೆಲ ನೆಟ್ಟಿಗರು ರಿಷಭ್ ಪಂತ್ ಅವರಿಗಿಂತ ಹಾರ್ದಿಕ್ ಪಾಂಡ್ಯ ಈ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಹೆಚ್ಚು ಅರ್ಹರಾಗಿದ್ದರು ಎಂದು ಕಿಡಿಕಾರಿದ್ದಾರೆ.

ರಿಷಭ್ ಪಂತ್ ಗಿಂತಲೂ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಟ

ರಿಷಭ್ ಪಂತ್ ಗಿಂತಲೂ ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಟ

ನೆಟ್ಟಿಗರು ರಿಷಬ್ ಪಂತ್ ಪಂದ್ಯದಲ್ಲಿ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರಬಹುದು ಆದರೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ತಂಡ ಜಯ ಸಾಧಿಸಿತು ಎಂಬುದನ್ನು ಮರೆಯಬೇಡಿ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಅಬ್ಬರಿಸಿದ್ದ ಹಾರ್ದಿಕ್ ಪಾಂಡ್ಯ

ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಅಬ್ಬರಿಸಿದ್ದ ಹಾರ್ದಿಕ್ ಪಾಂಡ್ಯ

ಟೀಮ್ ಇಂಡಿಯಾ ಚೇಸಿಂಗ್ ಮಾಡುವ ವೇಳೆ ರಿಷಭ್ ಪಂತ್ ಜತೆ ಅದ್ಭುತ ಜತೆಯಾಟವನ್ನಾಡಿದ ಹಾರ್ದಿಕ್ ಪಾಂಡ್ಯ 55 ಎಸೆತಗಳಲ್ಲಿ 71 ರನ್ ಬಾರಿಸಿದರು ಹಾಗೂ 7 ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ 4 ವಿಕೆಟ್ ಪಡೆದರು ಹಾಗೂ ಇದರಲ್ಲಿ 3 ಮೇಡನ್ ಓವರ್ ಇರುವುದು ವಿಶೇಷ. ಇಂಗ್ಲೆಂಡ್ ತಂಡದ ಜೇಸನ್ ರಾಯ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಅವರ ವಿಕೆಟ್‍ಗಳನ್ನು ಪಡೆದ ಹಾರ್ದಿಕ್ ಪಾಂಡ್ಯ ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಹೀಗೆ ಬಲಿಷ್ಠ ಆಟಗಾರರ ವಿಕೆಟ್ ಪಡೆದು ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿ ಆಲ್ ರೌಂಡರ್ ಆಗಿ ಮಿಂಚಿದ ಹಾರ್ದಿಕ್ ಪಾಂಡ್ಯಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡದೇ ರಿಷಭ್ ಪಂತ್ ಅವರಿಗೆ ನೀಡಿದ್ದು ಪಾಂಡ್ಯಗೆ ಮೋಸವಾದಂತಾಯಿತು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Story first published: Monday, July 18, 2022, 20:55 [IST]
Other articles published on Jul 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X