ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಆಗೊಂದು ಈಗೊಂದು ಶತಕ ಬಾರಿಸುವವರೇ ತಂಡದಲ್ಲಿದ್ದಾರೆ ಎಂದ ಸಚಿನ್!

Ind vs Eng 2nd test: No England batter looks like scoring century except Joe Root says Sachin Tendulkar

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ 2 ಟೆಸ್ಟ್ ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು, ಆದರೆ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ತಮ್ಮ ಗೆಲುವಿನ ಖಾತೆಯನ್ನು ತೆರೆದಿದೆ.

ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!

ಹೀಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 391 ರನ್ ಬಾರಿಸುವುದರ ಮೂಲಕ ಟೀಮ್ ಇಂಡಿಯಾ ( ಮೊದಲ ಇನ್ನಿಂಗ್ಸ್ 364 ) ವಿರುದ್ಧ 27 ರನ್‌ಗಳ ಅಲ್ಪ ಮುನ್ನಡೆಯನ್ನು ಕಂಡುಕೊಂಡಿತ್ತು. ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ನಾಯಕ ಜೋ ರೂಟ್ ಅಜೇಯ 180 ರನ್ ಗಳಿಸಿದರು. ಜೋ ರೂಟ್ ಹೊರತುಪಡಿಸಿದರೆ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಜಾನಿ ಬೈರ್‌ಸ್ಟೋವ್ 57 ಹಾಗೂ ರೊರಿ ಬರ್ನ್ಸ್ 49 ರನ್ ಗಳಿಸಿ ಜವಾಬ್ದಾರಿಯುತ ಆಟವಾಡಿದ್ದನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಕೂಡ 30ರ ಗಡಿ ದಾಟಲೇ ಇಲ್ಲ. ಇಂಗ್ಲೆಂಡ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನೀಡಿದ ಪ್ರದರ್ಶನದ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾತನಾಡಿದ್ದು ಇಂಗ್ಲೆಂಡ್ ಪರ ನಾಯಕ ಜೋ ರೂಟ್ ಹೊರತುಪಡಿಸಿ ಬೇರೆ ಯಾವುದೇ ಆಟಗಾರ ಸಹ ಉತ್ತಮ ಬ್ಯಾಟಿಂಗ್ ಮಾಡಲೇ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಣಕಿದ ಇಂಗ್ಲೆಂಡ್ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಕೆಎಲ್ ರಾಹುಲ್ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಣಕಿದ ಇಂಗ್ಲೆಂಡ್ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಕೆಎಲ್ ರಾಹುಲ್

ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಅಜೇಯ 180 ರನ್ ಬಾರಿಸುವುದರ ಮೂಲಕ ಶತಕ ಸಿಡಿಸಿದ ಜೋ ರೂಟ್ ಹೊರತುಪಡಿಸಿದರೆ ಇಂಗ್ಲೆಂಡ್ ತಂಡದಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಕೂಡ ಉತ್ತಮ ಪ್ರದರ್ಶನ ನೀಡುವ ಪ್ರಯತ್ನವನ್ನು ಮಾಡಲೇ ಇಲ್ಲ ಎಂದು ಸಚಿನ್ ತೆಂಡೂಲ್ಕರ್ ಈ ಕೆಳಕಂಡಂತೆ ಮಾತನಾಡಿದ್ದಾರೆ..

ಕೊಹ್ಲಿ ಜಾಗದಲ್ಲಿ ನಾನಿದ್ದಿದ್ದರೆ ಈ ತಪ್ಪನ್ನು ಮಾಡ್ತಾನೆ ಇರ್ಲಿಲ್ಲ ಅಂದ್ರು ಸಚಿನ್ | Oneindia Kannada
ಈ ಹಿಂದೆ ಇದ್ದ ಇಂಗ್ಲೆಂಡ್ ತಂಡವೇ ಬೇರೆ!

ಈ ಹಿಂದೆ ಇದ್ದ ಇಂಗ್ಲೆಂಡ್ ತಂಡವೇ ಬೇರೆ!

ಜೋ ರೂಟ್ ಹೊರತುಪಡಿಸಿ ಇಂಗ್ಲೆಂಡ್ ತಂಡದ ಯಾವುದೇ ಬ್ಯಾಟ್ಸ್‌ಮನ್‌ ಕೂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿನ್ ತೆಂಡೂಲ್ಕರ್ ಈ ಹಿಂದೆ ಇದ್ದ ಇಂಗ್ಲೆಂಡ್ ತಂಡವೇ ಬೇರೆ ಎಂದಿದ್ದಾರೆ. ಈ ಹಿಂದೆ ಇದ್ದ ಇಂಗ್ಲೆಂಡ್ ತಂಡದಲ್ಲಿ ಅಲಸ್ಟೇರ್ ಕುಕ್, ಮೈಕಲ್ ವಾನ್, ಕೆವಿನ್ ಪೀಟರ್ಸನ್, ಇಯಾನ್ ಬೆಲ್, ಜೊನಾಥನ್ ಟ್ರಾಟ್ ಮತ್ತು ಆ್ಯಂಡ್ರ್ಯೂ ಸ್ಟ್ರಾಸ್ ರೀತಿಯ ದಿಗ್ಗಜ ಆಟಗಾರರಿದ್ದರು. ಈಗಿನ ಇಂಗ್ಲೆಂಡ್ ತಂಡದಲ್ಲಿರುವ ಬ್ಯಾಟ್ಸ್‌ಮನ್‌ಗಳು ಆಗೊಂದು ಈಗೊಂದು ಶತಕವನ್ನು ಬಾರಿಸುತ್ತಾರೆ, ಜೋ ರೂಟ್ ಹೊರತುಪಡಿಸಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವ ಬ್ಯಾಟ್ಸ್‌ಮನ್‌ ಯಾರೂ ಸಹ ಇಂಗ್ಲೆಂಡ್ ತಂಡದಲ್ಲಿ ಕಾಣಿಸುತ್ತಲೇ ಇಲ್ಲ ಎಂದು ಸಚಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶತಕ ಬಾರಿಸಲು ಮುಂದೆ ಬರುವ ಯಾವ ಆಟಗಾರನೂ ಇಲ್ಲ!

ಶತಕ ಬಾರಿಸಲು ಮುಂದೆ ಬರುವ ಯಾವ ಆಟಗಾರನೂ ಇಲ್ಲ!

ಇನ್ನೂ ಮುಂದುವರೆದು ಪ್ರಸ್ತುತ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳ ಕುರಿತು ಮಾತನಾಡಿದ ಸಚಿನ್ ತೆಂಡೂಲ್ಕರ್ ಪ್ರಸ್ತುತ ಇರುವ ಇಂಗ್ಲೆಂಡ್ ತಂಡ ಸಾಕಷ್ಟು ಸೋಲುಗಳ ಇತಿಹಾಸವನ್ನು ಹೊಂದಿದೆ, ಜೋ ರೂಟ್ ಹೊರತುಪಡಿಸಿ ತಂಡದಲ್ಲಿ ಯಾವ ಆಟಗಾರ ನಾನು ಶತಕ ಬಾರಿಸಬಲ್ಲೆ ಎಂದು ಮುಂದೆ ಬರಬಲ್ಲ ಹೇಳಿ ಎಂದು ಸಚಿನ್ ತೆಂಡೂಲ್ಕರ್ ಪ್ರಶ್ನೆ ಹಾಕಿದ್ದಾರೆ.

ಮೂರನೇ ಟೆಸ್ಟ್ ಮೂಲಕ ಪುಟಿದೇಳುವ ವಿಶ್ವಾಸದಲ್ಲಿ ಜೋ ರೂಟ್

ಮೂರನೇ ಟೆಸ್ಟ್ ಮೂಲಕ ಪುಟಿದೇಳುವ ವಿಶ್ವಾಸದಲ್ಲಿ ಜೋ ರೂಟ್

ಇನ್ನು ಎರಡನೇ ಪಂದ್ಯ ಮುಗಿದ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿರಾಟ್ ಕೊಹ್ಲಿ ತಂಡದ ಅತ್ಯದ್ಭುತ ಆಟವನ್ನು ಪ್ರಶಂಸಿಸಿದರು. ಹಾಗೂ ಮುಂದಿನ ಪಂದ್ಯದಲ್ಲಿ ಉತ್ತಮ ಆಟವನ್ನು ಆಡುವುದರ ಮೂಲಕ ಗೆಲುವಿನ ಹಾದಿಗೆ ಮರಳುವುದಾಗಿ ಜೋ ರೂಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದೆ ಇರುವ ಕಾರಣ ಇಂಗ್ಲೆಂಡ್ ತಂಡದಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕೆ ಸಾಕಷ್ಟು ಬದಲಾವಣೆಗಳು ಆಗುವ ನಿರೀಕ್ಷೆಯೂ ಸಹ ಇದೆ.

Story first published: Wednesday, August 18, 2021, 7:48 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X