ಕೊಹ್ಲಿ ಶತಕಗಳಿಸುವುದು ನಮಗೆ ಬೇಕಿಲ್ಲ, ಆದರೆ..: ಹೀಗೆ ಯಾಕಂದ್ರು ಕೋಚ್ ರಾಹುಲ್ ದ್ರಾವಿಡ್!

ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಚರ್ಚೆಗಳು ಮುಂದುವರಿದಿದೆ. ಕಳೆದ ಐಪಿಎಲ್‌ನಲ್ಲಿಯೂ ಕೊಹ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನೀಡಲು ವಿಫಲವಾದ ಬಳಿಕ ವಿರಾಮವನ್ನು ಪಡೆದುಕೊಂಡು ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಭಾರತೀಯ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಡ್ರೆಸ್ಸಿಂಗ್‌ರೂಮ್‌ನಲ್ಲಿ ವಿರಾಟ್ ಕೊಹ್ಲಿ ಸಾಕಷ್ಟು ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದಾರೆ ಎಂದಿರುವ ದ್ರಾವಿಡ್ ಕೊಹ್ಲಿಯಷ್ಟು ಕಠಿಣ ಪರಿಶ್ರಮಿಯನ್ನು ನಾನು ಕಂಡಿಲ್ಲ ಎಂದಿದ್ದಾರೆ.

IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!

ಕೊಹ್ಲಿ ಶತಕದ ಬಗ್ಗೆ ದ್ರಾವಿಡ್ ಮಾತು

ಕೊಹ್ಲಿ ಶತಕದ ಬಗ್ಗೆ ದ್ರಾವಿಡ್ ಮಾತು

ಈ ಸಂದರ್ಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಶತಕಗಳಿಸುವುದನ್ನು ಎದುರುನೋಡುತ್ತಿದ್ದಾರೆ. ಆದರೆ ನಮಗೆ ಕೊಹ್ಲಿ ಶತಕಗಳಿಸುವುದಕ್ಕಿಂತ ಅವರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬರುವುದು ಮುಖ್ಯವಾಗುತ್ತದೆ ಎಂದಿದ್ದಾರೆ. ಟೀಮ್ ಇಂಡಿಯಾದ ಅನುಭವಿ ಆಟಗಾರ ಸುಮಾರು ಎರಡುವರೆ ವರ್ಷಗಳಿಂದ ಯಾವುದೇ ಮಾದರಿಯಲ್ಲಿಯೂ ಶತಕ ಗಳಿಸಲು ವಿಫಲವಾಗಿದ್ದಾರೆ.

ಕೊಹ್ಲಿ ಅತ್ಯಂತ ಕಠಿಣ ಪರಿಶ್ರಮಿ

ಕೊಹ್ಲಿ ಅತ್ಯಂತ ಕಠಿಣ ಪರಿಶ್ರಮಿ

ಇನ್ನು ವಿರಾಟ್ ಕೊಹ್ಲಿಯ ಪರಿಶ್ರಮದ ಬಗ್ಗೆಯೂ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. "ವಿರಾಟ್ ಕೊಹ್ಲಿ ನಾನು ನೋಡಿರುವವರ ಪೈಕಿ ಅತ್ಯಂತ ಕಠಿಣ ಪರಿಶ್ರಮಿಯಾಗಿದ್ದಾರೆ. ಇನ್ನು ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನದ ನಮಗೆ ಖುಷಿ ತಂದಿದೆ. ಅಬ್ಯಾಸ ಪಂದ್ಯದಲ್ಲಿ ಕೊಹ್ಲಿ ಉತ್ತಮವಾಗಿ ಲಯದಲ್ಲಿರುವುದನ್ನು ತೋರಿಸಿದ್ದಾರೆ" ಎಂದು ವಿರಾಟ್ ಕೊಹ್ಲಿಯ ಫಾರ್ಮ್ ಸಮಸ್ಯೆಯ ಬಗ್ಗೆ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂಥಾ ಸಂದರ್ಭಗಳನ್ನು ಎಲ್ಲರೂ ಎದುರಿಸುತ್ತಾರೆ

ಇಂಥಾ ಸಂದರ್ಭಗಳನ್ನು ಎಲ್ಲರೂ ಎದುರಿಸುತ್ತಾರೆ

ಮುಂದುವರಿದು ಮಾತನಾಡಿದ ರಾಹುಲ್ ದ್ರಾವಿಡ್ "ವಿರಾಟ್ ಕೊಹ್ಲಿಗೆ ಸ್ಪೂರ್ತಿದಾಯಕ ಮಾತುಗಳ ಅಗತ್ಯವಿದೆ ಎಂದು ನನಗೆ ಅನಿಸುತ್ತಿಲ್ಲ. ಇಂಥಾ ಸಂದರ್ಭಗಳನ್ನು ಎಲ್ಲರೂ ತಮಗ್ಮ ವೃತ್ತಿ ಜೀವನದಲ್ಲಿ ಅನುಭವಿಸುತ್ತಾರೆ. ಇದು ಮೂರಂಕಿಯನ್ನು ದಾಟುವ ವಿಚಾರವಲ್ಲ. ಶತಕಗಳಿಸಿದರೆ ಯಶಸ್ಸು ಸಾಧಿಸಿದಂತೆ ಎಂದು ಜನರು ಭಾವಿಸುತ್ತಾರೆ. ಆದರೆ ನಾವು ಅವರಿಂದ ನಿರೀಕ್ಷಿಸುವುದು ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು. ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ಸಾಕಷ್ಟು ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ" ಎಂದಿದ್ದಾರೆ ರಾಹುಲ್ ದ್ರಾವಿಡ್.

ಇಂಗ್ಲೆಂಡ್ ಪ್ರವಾಸದ ಮೇಲೆ ಚಿತ್ತ

ಇಂಗ್ಲೆಂಡ್ ಪ್ರವಾಸದ ಮೇಲೆ ಚಿತ್ತ

ಇನ್ನು ಕಳೆದ ವರ್ಷ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರನಿಯಲ್ಲಿ ಸೋಲು ಅನುಭವಿಸಿದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ತೊರೆದಿದ್ದಾರೆ. ಇದೀಗ ನಾಯಕತ್ವದ ಹೊಣೆಗಾರಿಗೆ ಇಲ್ಲದಿರುವ ಕಾರಣ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಯಾವ ರೀತಿಯಾಗಿ ಪ್ರದರ್ಶನ ನಿಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು ಅಂತಿಮ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ಭಾರತ ಟೆಸ್ಟ್ ಸರನಿಯನ್ನು ತನ್ನದಾಗಿಸಿಕೊಳ್ಳಲಿದೆ. ಆದರೆ ಇಂಗ್ಲೆಂಡ್ ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ ಅಂತಿಮ ಪಂದ್ಯದಲ್ಲಿ ಗೆಲುವುದು ಅನಿವಾರ್ಯವಾಗಿದೆ.

ಭಾರತ ಟೆಸ್ಟ್ ಸ್ಕ್ವಾಡ್

Virat Kohli ಶತಕದ ಬದ್ಲು ನಮ್ಗೆ ಬೇಕಾಗಿರೋದು ಇದು...ರಾಹುಲ್ ದ್ರಾವಿಡ್ ಶಾಕಿಂಗ್ ಹೇಳಿಕೆ | *Cricket |OneIndia

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

For Quick Alerts
ALLOW NOTIFICATIONS
For Daily Alerts
Story first published: Thursday, June 30, 2022, 12:06 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X