ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

120 ವರ್ಷಗಳಲ್ಲಿ ಇದೇ ಮೊದಲು!: ಸ್ಪೋಟಕ ಶತಕ ಸಿಡಿಸಿ ಪಂತ್ ಮುರಿದ ದಾಖಲೆ ಒಂದೆರಡಲ್ಲ!

Ind vs Eng: Rishabh Pant breaks numerous records with century at Edgbaston

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ರೋಚಕ ಸೆಣೆಸಾಟ ನಡೆಯುತ್ತಿದೆ. ಮೊದಲ ದಿನ ಎರಡು ತಂಡಗಳ ಆಟಗಾರರು ತೀವ್ರ ಪೈಪೋಟಿಯ ಪ್ರದರ್ಶನ ನಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ಬೌಲಿಂಗ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ಇಂಗ್ಲೆಂಡ್ ನಂತರ ಹಿನ್ನಡೆ ಅನುಭವಿಸಿತು.

ಮಧ್ಯಮ ಕ್ರಮಾಂಕದಲ್ಲಿ ಭಾರತದ ಆಟಗಾರರಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಅಮೋಘ ಪ್ರದರ್ಶನದ ಕಾರಣದಿಂದಾಗಿ ಭಾರತ ಮೊದಲ ದಿನದಾಟದ ಅಂತ್ಯದಲ್ಲಿ ಉತ್ತಮ ಸ್ಥಾನದಲ್ಲಿದೆ. ಕನಿಷ್ಠ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಗಿರುವ ಭಾರತ ದೊಡ್ಡ ಮೊತ್ತದ ಮೇಲೆ ಕಣ್ಣಿಟ್ಟಿದೆ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅಮೋಘ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಅನೇಕ ದಾಖಲೆಯನ್ನು ಪಂತ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಭಾರೀ ಕುಸಿತ ಕಂಡ ಭಾರತ

ಭಾರೀ ಕುಸಿತ ಕಂಡ ಭಾರತ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಬಿಸಿದ ಭಾರತ ಆರಂಬದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಮುನ್ಸೂಚನೆ ನೀಡಿದರು. ಆರಂಭಿಕರಾದ ಶುಬ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಉತ್ತಮ ಲಯದಲ್ಲಿದ್ದಂತೆ ಕಂಡು ಬಂದಿದ್ದರು. ಅದರಲ್ಲೂ ಶುಬ್ಮನ್ ಗಿಲ್ ಬ್ಯಾಟ್‌ನಿಂದ ಸರಾಗವಾಗಿ ರನ್ ಹರಿಸು ಬರುತ್ತಿದ್ದನ್ನು ಗಮನಿಸಿದ ಭಾರತೂಯ ಕ್ರಿಕೆಟ್ ಅಭಿಮಾನಿಗಲು ಉತ್ತಮ ಮೊತ್ತ ಗಳಿಸುವ ವಿಶ್ವಾಸ ಹೊಂದಿದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. 17 ರನ್‌ಗಳಿಸಿದ ಗಿಲ್ ಆಂಡರ್ಸನ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ನಂತರ ಪೂಜಾರ ಕೂಡ 13 ರನ್‌ಗೆ ಆಟ ಮುಗಿಸಿದರು. ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್ ಕೂಡ ಹೆಚ್ಚು ರನ್‌ಗಳಿಸುವಲ್ಲಿ ಸಫಲವಾಗಲಿಲ್ಲ.

ಜೊತೆಯಾದ ಪಂತ್- ಜಡ್ಡು ಭರ್ಜರಿ ಆಟ

ಜೊತೆಯಾದ ಪಂತ್- ಜಡ್ಡು ಭರ್ಜರಿ ಆಟ

98 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿದ್ದಾಗ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೊತೆಯಾದರು. ಈ ಜೋಡಿ ಅದ್ಭುತ ಪ್ರದರ್ಶನ ನಿಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಸ್ಪೋಟಕವಾಗಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ಅಬ್ಬರದ ಶತಕ ಬಾರಿಸಿದ್ದಾರೆ. 146 ರನ್‌ಗಳಿಸಿ ಪಂತ್ ತಮ್ಮ ವಿಕೆಟ್ ಕಳೆದುಕೊಳ್ಳುವ ಮೂಲಕ ಅದ್ಭುತ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ರಿಷಭ್ ಪಂತ್ ಒಂದಲ್ಲ ಎರಡಲ್ಲ ಸಾಕಷ್ಟು ದಾಖಲೆಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

120 ವರ್ಷಗಳಲ್ಲಿ ಹೊಸ ದಾಖಲೆ ಬರೆದ ಪಂತ್

120 ವರ್ಷಗಳಲ್ಲಿ ಹೊಸ ದಾಖಲೆ ಬರೆದ ಪಂತ್

ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಿಷಬ್ ಪಂತ್ 89 ಎಸೆತಗಳಲ್ಲಿ ಶತಕವನ್ನು ಪೂರೈಸಿದರು. ಈ ಶತಕದೊಂದಿಗೆ ಎಡ್ಜ್‌ಬಾಸ್ಟನ್ ಕ್ರೀಡಾಂಗಣದ 120 ವರ್ಷಗಳ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ ರಿಷಬ್ ಪಂತ್. ಇದಕ್ಕೂ ಮುನ್ನ ಕೆವಿನ್ ಪೀಟರ್ಸನ್ ಹೆಸರಿನಲ್ಲಿತ್ತು ಈ ದಾಖಲೆ.

ಪಂತ್ ಹೆಸರಿಗೆ ಮತ್ತಷ್ಟು ದಾಖಲೆ

ಪಂತ್ ಹೆಸರಿಗೆ ಮತ್ತಷ್ಟು ದಾಖಲೆ

*ಎಡ್ಜ್‌ಬಾಸ್ಟನ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್‌ಗಳ ಪೈಕಿ 2000 ರನ್‌ಗಳ ಮೈಲಿಗಲ್ಲು ದಾಟಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
*ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಭಾರತದ ಅತಿ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ ರಿಷಬ್ ಪಂತ್
*ಪಂತ್ ಹಾಗೂ ಜಡೇಜಾ 6ನೇ ವಿಕೆಟ್‌ಗೆ 222 ರನ್‌ಗಳ ಬೃಹತ್ ಜೊತೆಯಾಟದಲ್ಲಿ ಭಾಗಿಯಾದರು. ಇದು ಇಂಗ್ಲೆಂಡ್ ವಿರುದ್ಧ 6ನೇ ವಿಕೆಟ್‌ಗೆ ದಾಖಲಾದ ಬೃಹತ್ ಜೊತೆಯಾಟವೆನಿಸಿದೆ.

Jaspreet Bumrah ಟೀಮ್ ಇಂಡಿಯಾ ಮುನ್ನಡೆಸುತ್ತಿರುವ ಮೊದಲ ಬೌಲರ್ ಅಲ್ಲ | Oneindia Kannada
ವಿದೇಶದಲ್ಲಿ 4ನೇ ಶತಕ ಸಿಡಿಸಿದ ಪಂತ್

ವಿದೇಶದಲ್ಲಿ 4ನೇ ಶತಕ ಸಿಡಿಸಿದ ಪಂತ್

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ರಿಷಬ್ ಪಂತ್ ಗೊರತುಪಡಿಸಿದರೆ ಭಾರತದ ವಿಕೆಟ್ ಕೀಪರ್‌ಗಳಿಂದ ವಿದೇಶದಲ್ಲಿ ದಾಖಲಾದ ಒಟ್ಟು ಶತಕಗಳ ಸಂಖ್ಯೆ 4. ಆದರೆ ಇದೀಗ ರಿಷಬ್ ಪಂತ್ ತಾವೊಬ್ಬರೇ ವಿದೇಶದಲ್ಲಿ ನಾಲ್ಕು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಪಂತ್ ಒಟ್ಟು 5 ಟೆಸ್ಟ್ ಶತಕಗಳನ್ನು ದಾಖಲಿಸಿದ್ದು ಇಂಗ್ಲೆಂಡ್ ವಿರುದ್ಧವೇ ಮೂರು ಶತಕ ಸಿಡಿಸಿದ್ದಾರೆ. ಇದರಲ್ಲಿ ಎರಡು ಇಂಗ್ಲೆಂಡ್ ನೆಲದಲ್ಲಿಯೇ ದಾಖಲಾಗಿದೆ ಎಂಬುದು ಗಮನಾರ್ಹ. ಇನ್ನು ಪಂತ್ ಭಾರತದಲ್ಲಿ ಒಂದು ಶತಕ ಸಿಡಿಸಿದ್ದಾರೆ.

Story first published: Saturday, July 2, 2022, 18:22 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X