ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್

IND vs ENG: Rishabh Pant reveals why the umpires told him to change his Standing position in 3rd test

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯಗೊಂಡಿತು. ನಂತರ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಗೆಲುವನ್ನು ಸಾಧಿಸಿತು.

ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಸ್ಫೋಟಕ ಆಲ್‌ರೌಂಡರ್ಐಪಿಎಲ್ 2021: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಸ್ಫೋಟಕ ಆಲ್‌ರೌಂಡರ್

ಹೀಗೆ 2 ಪಂದ್ಯಗಳು ಮುಗಿದ ನಂತರ ಸರಣಿಯಲ್ಲಿ ಮುನ್ನಡೆಯನ್ನು ಪಡೆದುಕೊಂಡಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭದಲ್ಲಿಯೇ ಮಂಕಾಗಿದೆ. ಹೌದು, ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಗೆ ಆಲ್ ಔಟ್ ಆಗಿದೆ.

ನಿಮ್ಮ ಸ್ಕೋರ್ ಎಷ್ಟು ಎಂದು ಕಾಲೆಳೆದ ಇಂಗ್ಲೆಂಡ್ ಪ್ರೇಕ್ಷಕರಿಗೆ ಖಡಕ್ ಉತ್ತರ ನೀಡಿದ ಮೊಹಮ್ಮದ್ ಸಿರಾಜ್ನಿಮ್ಮ ಸ್ಕೋರ್ ಎಷ್ಟು ಎಂದು ಕಾಲೆಳೆದ ಇಂಗ್ಲೆಂಡ್ ಪ್ರೇಕ್ಷಕರಿಗೆ ಖಡಕ್ ಉತ್ತರ ನೀಡಿದ ಮೊಹಮ್ಮದ್ ಸಿರಾಜ್

ಟೀಮ್ ಇಂಡಿಯಾ ಪರ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಲೇ ಇಲ್ಲ. ತಂಡದ ಎಲ್ಲ ಆಟಗಾರರೂ ವಿಫಲರಾದಾಗ ಕೊನೆಯ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡದ ಕೈ ಹಿಡಿಯುತ್ತಿದ್ದ ರಿಷಭ್ ಪಂತ್ ಕೂಡ ಹೆಡಿಂಗ್ಲೆ ಅಂಗಳದಲ್ಲಿ ಮಂಕಾಗಿ ಹೋದರು. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 9 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ ಕೇವಲ 2 ರನ್ ಗಳಿಸಿ ರಾಬಿನ್ಸನ್ ಎಸೆತದಲ್ಲಿ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡುವ ಮೂಲಕ ಔಟ್ ಆದರು. ಹೀಗೆ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಮಾಡಿದ ಒಂದು ತಪ್ಪಿಗೆ ಅಂಪೈರ್ ನೀಡಿದ ಸಲಹೆಯನ್ನು ಮೊದಲ ದಿನದಾಟ ಮುಗಿದ ನಂತರ ರಿಷಭ್ ಪಂತ್ ಹಂಚಿಕೊಂಡಿದ್ದಾರೆ.

ನಿಲುವು ಬದಲಾಯಿಸುವಂತೆ ರಿಷಭ್ ಪಂತ್‌ಗೆ ಸಲಹೆ ನೀಡಿದ ಅಂಪೈರ್

ನಿಲುವು ಬದಲಾಯಿಸುವಂತೆ ರಿಷಭ್ ಪಂತ್‌ಗೆ ಸಲಹೆ ನೀಡಿದ ಅಂಪೈರ್

ರಿಷಭ್ ಪಂತ್ ಬ್ಯಾಟಿಂಗ್ ವೈಖರಿ ತುಂಬಾ ವಿಭಿನ್ನವಾದದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ರನ್ ಗಳಿಸಲು ಸಾಂಪ್ರದಾಯಿಕ ಹೊಡೆತಗಳು ಮಾತ್ರವಲ್ಲದೇ ತುಂಬಾ ವಿಭಿನ್ನವಾದ ಮತ್ತು ಅಸಂಪ್ರದಾಯಿಕ ಹೊಡೆತಗಳನ್ನೂ ಬಾರಿಸುವ ರಿಷಭ್ ಪಂತ್ ಇತರ ಆಟಗಾರರಿಗೆ ಹೋಲಿಸಿದರೆ ತುಂಬಾ ವಿಭಿನ್ನವಾದ ರೀತಿಯ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದಾರೆ. ಹೀಗೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಸ್ಕ್ರೀಜ಼್ ಬಿಟ್ಟು ಹೆಚ್ಚಿನ ಅಂತರದಲ್ಲಿ ಬ್ಯಾಟಿಂಗ್ ಮಾಡಲು ನಿಂತಿದ್ದರಂತೆ, ಇದನ್ನು ಗಮನಿಸಿದ ಅಂಪೈರ್ ಇಷ್ಟು ಅಂತರವನ್ನು ಬಿಡಬಾರದು ಆದಷ್ಟು ವಿಕೆಟ್ ಸನಿಹದಲ್ಲಿ ನಿಂತು ಆಡುವಂತೆ ರಿಷಬ್ ಪಂತ್ ಅವರಿಗೆ ಸಲಹೆ ನೀಡಿದರಂತೆ. ಅಂಪೈರ್ ಈ ರೀತಿ ಸಲಹೆ ನೀಡಲು ಕಾರಣ ಆಟಗಾರನ ಸುರಕ್ಷತೆ ತಿಂದು ರಿಷಭ್ ಪಂತ್ ತಿಳಿಸಿದ್ದಾರೆ. ಹೌದು, ರಿಷಭ್ ಪಂತ್ ಅಂತರವನ್ನು ಬಿಟ್ಟು ಸ್ಕ್ರೀಜ್‌ನಿಂದ ಮುಂದೆ ಬಂದು ನಿಂತಿದ್ದದ್ದು ಅಪಾಯಕಾರಿ ಎಂದು ಹೇಳಿದ ಅಂಪೈರ್ ರಿಷಭ್ ಪಂತ್ ಅವರಿಗೆ ತುಸು ಹಿಂದೆ ನಿಲ್ಲುವಂತೆ ಸಲಹೆ ನೀಡಿದರಂತೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯರ ಕಳಪೆಯಾಟ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯರ ಕಳಪೆಯಾಟ

ಭಾರತ ಮತ್ತು ಇಂಗ್ಲೆಂಡ್ ನಡುವೆ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮೊದಲನೇ ಇನ್ನಿಂಗ್ಸ್‌ನಲ್ಲಿಯೇ ಮುಗ್ಗರಿಸಿರುವ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು 78 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಕಳಪೆ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಬೌಲಿಂಗ್ ವಿಭಾಗ ಕೂಡ ಈ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡುವಲ್ಲಿ ಸಫಲತೆಯನ್ನು ಕಂಡಿಲ್ಲ. ಮೊದಲನೇ ಇನ್ನಿಂಗ್ಸ್‌ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಮೊದಲ ದಿನದಾಟದಂತ್ಯಕ್ಕೆ 120 ರನ್ ಗಳಿಸಿದ್ದು ಯಾವುದೇ ವಿಕೆಟ್ ಕಳೆದುಕೊಂಡಿಲ್ಲ.

50 ಇನ್ನಿಂಗ್ಸ್ ಕಳೆದ್ರೂ ವಿರಾಟ್ ಬ್ಯಾಟ್ ನಿಂದ ಶತಕ ದಾಖಲಾಗಿಲ್ಲ ಯಾಕೆ? | Oneindia Kannada
ಎರಡನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಇಂಡಿಯಾ?

ಎರಡನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಇಂಡಿಯಾ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಕಳಪೆ ಪ್ರದರ್ಶನ ನೀಡಿರುವ ಭಾರತ ತಂಡದ ಆಟಗಾರರು ಎರಡನೇ ದಿನವಾದರೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಯಶಸ್ಸಿನ ಹಾದಿಗೆ ಮರಳುತ್ತಾರಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ. ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ವಿಫಲರಾದರೆ ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿ ಪ್ರದರ್ಶನವನ್ನು ನೀಡುತ್ತಿತ್ತು ಆದರೆ ಈ ಪಂದ್ಯದಲ್ಲಿ ಎರಡರಲ್ಲಿಯೂ ಮುಗ್ಗರಿಸಿರುವುದು ಇದೀಗ ಭಾರತ ಕ್ರಿಕೆಟ್ ಪ್ರೇಕ್ಷಕರ ಚಿಂತೆಗೆ ಕಾರಣವಾಗಿದೆ.

Story first published: Thursday, August 26, 2021, 12:54 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X